ಕನ್ನಡ ವಾರ್ತೆಗಳು

ಮಣಿಪಾಲದ ಐನಾಕ್ಸ್ ಚಿತ್ರಮಂದಿರ ಶುಕ್ರವಾರದಿಂದ ಪುನರ್ ಚಿತ್ರಪ್ರದರ್ಶನಕ್ಕೆ ಸಜ್ಜು

Pinterest LinkedIn Tumblr

ಉಡುಪಿ: ಕಳೆದ ನಾಲ್ಕೈದು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಮಣಿಪಾಲದ ಐನಾಕ್ಸ್ ಚಿತ್ರಮಂದಿರ ಶುಕ್ರವಾರದಿಂದ ಪುನರಾರಂಭಗೊಳ್ಳುತ್ತಿದ್ದು ಚಿತ್ರರಸಿಕರಿಗೆ ಶುಭಶುಕ್ರವಾರ ಶುಭ ಸುದ್ದಿ ಸಿಕ್ಕಿದಂತಾಗಿದೆ. ಶಿರೂರು ಶ್ರೀಗಳು ಶುಕ್ರವಾರ ಚಿತ್ರಮಂದಿರವನ್ನು ಉದ್ಘಾಟಿಸಲಿದ್ದು ಸಲ್ಮಾನ್ ಅಭಿನಯದ ನೂತನ ಚಿತ್ರ ‘ಪ್ರೇಮ್ ರತನ್ ಧನ್ ಪಾಯೋ’ ಚಿತ್ರಪ್ರದರ್ಶನ ನಡೆಯಲಿದೆ.

Inox_Theater_Manipal (3) Inox_Theater_Manipal (2) Inox_Theater_Manipal (1)

ಕಳೆದ ಜುಲೈನಲ್ಲಿ ವಿಪರೀತ ಮಳೆಯಿಂದಾಗಿ ಐನಾಕ್ಸ್ ಚಿತ್ರಮಂದಿರ ಸಮೀಪದಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿತ್ತು. ಬಳಿಕ ಜಿಲ್ಲಾಡಳಿತ ಚಿತ್ರಮಂದಿರ ಸ್ಥಗಿತಗೊಳಿಸುವಂತೆ ಸಂಬಂದಪಟ್ಟವರಿಗೆ ಸೂಚಿಸಿದ್ದರು. ಅಪಾಯವಿದ್ದ ಕಾರಣ ಥಿಯೇಟರ್ ಮುಚ್ಚಲಾಗಿತ್ತು.

ಸದ್ಯ ಎಲಾ ಮುಂಜಾಗ್ರತಾ ಕ್ರಮ ಕೈಗೊಂಡು ಚಿತ್ರಮಂದಿರವನ್ನು ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.

Write A Comment