ಕನ್ನಡ ವಾರ್ತೆಗಳು

ಉದ್ಯೋಗಮೇಳ: ಮಾಹಿತಿ ವಿಸ್ತರಿಸಲು ಸಚಿವ ರೈ ಸೂಚನೆ

Pinterest LinkedIn Tumblr

Dc_rai_meet_1

ಮ೦ಗಳೂರು ನ.12:   ಬೆಂಜನಪದವಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನ.14 ಮತ್ತು 20 ರಂದು ನಡೆಯಲಿರುವ ಮಂಗಳೂರು ಉದ್ಯೋಗಮೇಳದ ಅಂಗವಾಗಿ ಕಾಲೇಜುಗಳ ಪ್ರಾಂಶುಪಾಲರ ಸಭೆ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಉದ್ಯೋಗ ಮೇಳವು ಜಿಲ್ಲೆಯ ಜನತೆಗೆ ಉದ್ಯೋಗ ಒದಗಿಸುವ ಒಂದು ಮಹತ್ವದ ಕಾರ್ಯಕ್ರಮವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಯುವಜನತೆ, ಉದ್ಯೋಗಾಂಕ್ಷಿಗಳು ಭಾಗವಹಿಸುವಂತಾಗಲು ಎಲ್ಲಾ ಶಿಕ್ಷಣ ಸಂಸ್ಥೆಗಳು ತಮ್ಮ ಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ಕರೆ ನೀಡಿದರು.

ಉದ್ಯೋಗ ಮೇಳಕ್ಕೆ ಎಲ್ಲಾ ಸಿದ್ಧತೆ ಮಾಡಲಾಗಿದೆ. ಭಾಗವಹಿಸುವ ಕಂಪೆನಿಗಳು, ಉದ್ಯೋಗಾಂಕ್ಷಿಗಳಿಗೆ ಕಾರ್ಯಕ್ರಮ ಸ್ಥಳದಲ್ಲಿ ಎಲ್ಲಾ ನುಕೂಲ ಕಲ್ಪಿಸಲಾಗಿದೆ ಎಂದು ಸಚಿವ ರಮಾನಾಥ ರೈ ತಿಳಿಸಿದರು.

ಉದ್ಯೋಗಮೇಳದ ಸಂಯೋಜಕ ವಿವೇಕ್ ಆಳ್ವ ಮಾತನಾಡಿ ಪದವಿ, ಸ್ನಾತಕೋತ್ತರ, ಐ.ಟಿ.ಐ, ಡಿಪ್ಲೋಮಾ, ನರ್ಸಿಂಗ್, ಬಿ ಫಾರ್ಮ್, ಡಿ ಫಾರ್ಮ್, ಇಂಜೀನಿಯರಿಂಗ್ , ಮೆಡಿಕಲ್ ಸೇರಿದಂತೆ ನುರಿತ ಅನುಭವಿ ಹಾಗೂ ಅನುಭವ ಇಲ್ಲದ ಉದ್ಯೋಗಾಕಾಂಕ್ಷಿಗಳು ಮೇಳದ ಪ್ರಯೋಜನ ಪಡೆಯಬಹುದು.

ಪ್ರತ್ಯೇಕ ವೆಬ್ ಸೈಟ್: www.mangaluruudyogamela.com ಪ್ರತ್ಯೇಕವಾದ ಇಮೇಲ್ಐಡಿ  mangaluruddyogamela@gmail.com ತೆರೆಯಲಾಗಿದೆ. ಉದ್ಯೋಗಾಕಾಂಕ್ಷಿಗಳು ಆನ್ ಲೈನ್ ಮೂಲಕ ಈಗಾಗಲೇ ನೋಂದಣೆ ಮಾಡುತ್ತಿದ್ದಾರೆ ಎಂದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಇವರು ಸಭೆಯನ್ನು ಉದ್ದೇಶಿಸಿ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಮುಕ್ತ ಅವಕಾಶವಿದ್ದು ಇದೊಂದು ಉತ್ತಮ ಪ್ರಕ್ರಿಯೆಯಾಗಿದ್ದು ಬಸ್ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ,400ಕ್ಕೂ ಅಧಿಕ ಕಂಪೆನಿಗಳು ಉದ್ಯೋಗಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಈಗಾಗಲೇ 7581 ಉದ್ಯೋಗಾಂಕ್ಷಿಗಳು ತಮ್ಮ ಹೆಸರು ನೋಂದಾಯಿಸಿದ್ದು, ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ನೋಡಲ್ ಅಧಿಕಾರಿ ನಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

Write A Comment