ಕನ್ನಡ ವಾರ್ತೆಗಳು

ಪಿಲಿಕುಳ ಮಕ್ಕಳ ಹಬ್ಬ: ಶಿಕ್ಷಕ – ಶಿಕ್ಷಕಿಯರಿಗೆ ಜಿಲ್ಲಾಧಿಕಾರಿಯಿಂದ ಸೂಚನೆ.

Pinterest LinkedIn Tumblr

Dc_press_meet_3

ಮಂಗಳೂರು,ನ.11: ಜವಹರಲಾಲ್ ನೆಹರೂರವರ 125 ನೇ ಜನ್ಮ ದಿನಾಚರಣೆಯ ಪ್ರಯುಕ್ತ ನವೆಂಬರ್ 14 ಮತ್ತು 15ರಂದು ಪಿಲಿಕುಳದಲ್ಲಿ ನಡೆಯಲಿರುವ ಮಕ್ಕಳ ಹಬ್ಬಕ್ಕೆ ಶಾಲಾ ಮಕ್ಕಳನ್ನು ಶಿಕ್ಷಕರು ಕರತರಬೇಕು ಎಂದು ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿದರು.

Dc_press_meet_2Dc_press_meet_1

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ನವೆಂಬರ್ 14 ಮತ್ತು15ರಂದು ನಡೆಯಲಿರುವ ಮಕ್ಕಳ ಹಬ್ಬಕ್ಕೆ ಸುಮಾರು 40ರಿಂದ 50 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ಒಳಗಡೆ ಬರಲು 8ಕೌಂಟರ್ ಗಳನ್ನು ಮಾಡಲಾಗಿದ್ದು, ವಾಹನಗಳ ಪಾರ್ಕಿಂಗ್ ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಬಂದ ವಿದ್ಯಾರ್ಥಿಗಳಿಗೆ ಐಸ್ ಕ್ರೀಂ, ಬಾಳೆಹಣ್ಣು, ಕಡಲೆ ಕಾಯಿ, ಮಂಡಕ್ಕಿ ಸೇರಿದಂತೆ ವಿವಿಧ ತಿನಿಸುಗಳನ್ನು ಸವಿಯಬಹುದಾಗಿದೆ.

ರಾಷ್ಟ್ರೀಯಾ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು, ಪ್ರಧಾನಮಂತ್ರಿ, ರಾಷ್ತ್ರಪತಿ ಮುಂತಾದವರ ವೇಷ ಧರಿಸಿದ ಸುಮಾರು 2500 ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಪ್ರದೀಪ್ ಕುಮಾರ್ ಕಲ್ಕೂರ, ಪ್ರಭಾಕರ್ ಶ್ರಮಾ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೋ, ಯತೀಶ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.

Write A Comment