ಮನೋರಂಜನೆ

ನಟ ಶಾರೂಕ್ ಖಾನ್ ನನ್ನು ಸುಮಾರು 3 ತಾಸುಗಳ ಕಾಲ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು

Pinterest LinkedIn Tumblr

shah_rukh

ಮುಂಬಯಿ: ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆಯ ನಿಯಮಗಳನ್ನು ಕಡಗಣಿಸಿರುವ ಹಿನ್ನೆಲೆಯಲ್ಲಿ ಕೊಲ್ಕೋತಾ ನೈಟ್ ರೈಡರ್ಸ್ ಐಪಿಎಲ್ ತಂಡದ ಮಾಲೀಕ ನಟ ಶಾರೂಕ್ ಖಾನ್ ಅವರನ್ನು ಜಾರಿ ನಿರ್ದೇಶಾನಲಯ ಅಧಿಕಾರಿಗಳು ಸುಮಾರು 3 ತಾಸುಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಕೆಕೆಆರ್ ನ ಮತ್ತೊಬ್ಬ ಪಾಲುದಾರರಾದ ನಟಿ ಜೂಹಿ ಚಾವ್ಲಾ ಆಕೆಯ ಪತಿ ಜಾಯ್ ಮೆಹ್ತಾ ಅವರಿಗೂ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು.

ಶಾರೂಕ್ ಖಾನ್ ಅವರನ್ನು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ಅವರಿಂದ ಕೆಲವೊಂದು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಈ ಮೊದಲು ಎರಡು ಭಾರಿ ಶಾರೂಕ್ ಖಾನ್ ಅವರಿಗೆ ಸಮನ್ಸ್ ನೀಡಲಾಗಿತ್ತು. ಜೂಹಿ ಚಾವ್ಲಾ ಪತಿ ಜಾಯ್ ಮೆಹ್ತಾ ಈಗಾಗಲೇ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಕೆಕೆಆರ್ ತಂಡ ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸಿ ಸುಮಾರು ಐದು ಮಿಲಿಯನ್ ಡಾಲರ್ ಮೊತ್ತದ ಷೇರುಗಳನ್ನು ಮೆಹ್ತಾ ಅವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಶಾರೂಕ್ ಖಾನ್ ಅವರನ್ನು ವಿಚಾರಣೆಗೊಳಪಡಿಸಲಾಯಿತು.

Write A Comment