ಕನ್ನಡ ವಾರ್ತೆಗಳು

ದುರ್ನಡತೆ ತೋರಿದ ಕಾರ್ಕಳ ಎಸ್‌ಐ ಇಮ್ರಾನ್ ಸಸ್ಪೆಂಡ್..!

Pinterest LinkedIn Tumblr

ಉಡುಪಿ: ಕಾರ್ಕಳ ನಗರ ಠಾಣೆ ಪಿ‌ಎಸ್‌ಐ ಇಮ್ರಾನ್ ಅವರನ್ನು ಎಸ್‌ಪಿ ಅಣ್ಣಾಮಲೈ ಅವರು ಶುಕ್ರವಾರ ಅಮಾನತು ಮಾಡಿದ್ದಾರೆ.

imran

ಕಾರ್ಕಳ ಪೇಟೆಯ ಅಂಗಡಿಯೊಂದರಲ್ಲಿ ನ.3 ರಂದು ಸಾಮಾನು ಖರೀದಿಸುತ್ತಿದ್ದಾಗ ಎಸ್‌ಐ ಅವರ ಪತ್ನಿಗೆ ಅಚಾನಕ್ ಆಗಿ ರಾಘವೇಂದ್ರ ಮೊಯ್ಲಿ ಅವರ ಕೈ ತಗುಲಿದ್ದನ್ನೇ ನೆಪವಾಗಿಸಿ ರಾಘವೇಂದ್ರ ಅವರಿಗೆ ಎಸ್‌ಐ ಹೊಡೆದಿದ್ದರು. ಆಸ್ಪತ್ರೆಯಿಂದ ಬಂದ ಮಾಹಿತಿಯ ಪ್ರಕಾರ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕಾರ್ಕಳ ಉಪವಿಭಾಗದ ಎ.ಎಸ್.ಪಿ. ಡಾ. ಸುಮನ್ ಅವರು ಎಸ್ಪಿ ಅಣ್ಣಾಮಲೈ ಅವರಿಗೆ ವಿಸ್ತ್ರತ ವರದಿ ನೀಡಿದ್ದರು. ವರದಿಯಲ್ಲಿ ಕಾರ್ಕಳ ಎಸ್ಸೈ ಇಮ್ರಾನ್ ದುರ್ನಡತೆ ಸಾಭೀತಾಗಿದ್ದು ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

Karkala_PSI_asault (2) Karkala_PSI_asault (1)

ದೇವಾಡಿಗ ಸಮಾಜದ ಪತ್ರಿಕಾಗೋಷ್ಟಿ: ಕಾರ್ಕಳದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಕಾರ್ಕಳ ದೇವಾಡಿಗ ಸಂಘವು ಪ್ರಕರಣವನ್ನು ಖಂಡಿಸಿ ಎಸ್.ಐ. ಅಮಾನತಿಗೆ ಆಗ್ರಹಿಸಿತ್ತು. ಅಲ್ಲದೇ ರಾಘವೇಂದ್ರ ಮೊಯ್ಲಿ ವಿರುದ್ಧ ಮಹಿಳೆಯ ಮಾನಹಾನಿ ಯತ್ನ ಹಾಗೂ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಇಮ್ರಾನ್ ಪ್ರಕರಣ ದಾಖಲಿಸಿದ್ದು ಇದೊಂದು ಸುಳ್ಳು ಪ್ರಕರಣವಾಗಿದೆ. ಈ ಬಗ್ಗೆ ಇಲಾಖೆಯ ಅಧಿಕರಿಗಳು ಪರಾಮರ್ಶಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಅಮಾಯಕರಾದ ರಾಘವೇಂದ್ರ ಮೊಯ್ಲಿ ಅವರಿಗೆ ಅನ್ಯಾಯವಾಗಬಾರದು ಎಂದು ಆಗ್ರಹಿಸಿದ್ದರು.

ಬಿ.ಜೆ.ಪಿ. ಪತ್ರಿಕಾಗೋಷ್ಟಿ: ಪೊಲೀಸ್ ಅಧಿಕಾರಿಯಿಂದ ಅನ್ಯಾಯಕ್ಕೊಳಗಾದ ರಾಘವೇಂದ್ರ ಅವರು ಆ ಅಧಿಕಾರಿಯ ವಿರುದ್ಧ ದೂರು ದಾಖಲು ಮಾಡಿದ ಬಳಿಕ ಅದನ್ನು ಹತ್ತಿಕ್ಕಲು ಪೊಲೀಸ್ ಎಸ್.ಐ. ಇಮ್ರಾನ್ ಅವರು ಪತ್ನಿ ಹೆಸರಿನಲ್ಲಿ ಪ್ರಕರಣ ದಾಖಲಿಸಿ ನಿರಪರಾಧಿ ಯುವಕನಿಗೆ ಸಮಸ್ಯೆ ನೀಡಿದ್ದಾರೆ. ಅಲದೇ ರಾಜಕೀಯ ಬಳಸಿ ಪ್ರಕರಣವನ್ನು ರಾಜಿ ಮಾಡಲು ಯತ್ನಗಳು ನಡೆದಿದೆ. ಈಬಗ್ಗೆ ಪಕ್ಷಾತೀತವಾಗಿ ಹೋರಾಟ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಯುವಕನಿಗೆ ಅನ್ಯಾಯವಾಗಲು ಬಿಡುವುದಿಲ್ಲ್ವೆಂದು ಕಾರ್ಕಳ ಬಿಜೆಪಿ ನಾಯಕರು ಗುಡುಗಿದ್ದಾರೆ. ಅಲ್ಲದೇ ಇಲಾಖೆಯ ಅಧಿಕಾರಿಗಳು ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಇನ್ನು ರಾಘವೇಂದ್ರ ಮೊಯ್ಲಿ ಮೇಲೆ ದುರಹಂಕಾರಿ ಖಾಕಿ ಹಾಕಿದ ಅಧಿಕಾರಿ ನಡೆಸಿದ ಹಲ್ಲೆ್ಯನ್ನು ದಲಿತಸಂಘರ್ಷ ಸಮಿತಿಯೂ ಖಂಡಿಸಿದೆ.

ಇದನ್ನೂ ಓದಿ:

ಪತ್ನಿಗೆ ಕೈ ತಗುಲಿತೆಂದು ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಕಾರ್ಕಳ ಎಸ್‌ಐ; ಖಾಕಿ ದರ್ಪಕ್ಕೆ ಸಾರ್ವಜನಿಕರ ಆಕ್ರೋಷ

Write A Comment