ಮಂಗಳೂರು, ನ.6: ನ.07 ರಂದು ಬೆಳಗ್ಗೆ ಆಗಸದಲ್ಲಿ ಅಚ್ಚರಿಯೊಂದು ಕಾಣಿಸಲಿದೆ. ಹೌದು, ನಸುಕಿನ 5 ಗಂಟೆಯ ಸುಮಾರಿಗೆ ಆಕಾಶದಲ್ಲಿ ಚಂದ್ರ, ಶುಕ್ರ, ಮಂಗಳ ಹಾಗೂ ಗುರು ಗ್ರಹಗಳು ಸರಳ ರೇಖೆಯಲ್ಲಿ ಕಾಣಿಸಿಕೊಳ್ಳಲಿದ್ದು, ಮೋಡ, ಮಂಜು ಮುಸುಕದೆ ಆಕಾಶ ತಿಳಿಯಾಗಿದ್ದರೆ ಈ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಕೋಟ್ಯಾಂತರ ಕಿಲೋ ಮೀಟರ್ ದೂರದಲ್ಲಿದ್ದರೂ, ಇದೀಗ ಭೂಮಿಯ ಒಂದಷ್ಟು ಸಮೀಪಕ್ಕೆ ಈ ಗ್ರಹಗಳು ಬಂದಿರುವ ಹಿನ್ನೆಲೆಯಲ್ಲಿ ಈ ಅಚ್ಚರಿ ಕಾಣಿಸಿಕೊಳ್ಳಲಿದೆ. ನಾಳೆಯಿಂದ ಮುಂದಿನ ಕೆಲವು ದಿನಗಳ ಕಾಲ ಪೂರ್ವ ಆಕಾಶದಲ್ಲಿ ಇವುಗಳನ್ನು ವೀಕ್ಷಿಸಬಹುದಾಗಿದೆ.
