ಕನ್ನಡ ವಾರ್ತೆಗಳು

ಕಾರು ಬೈಕ್ ಅಪಘಾತ : ಬೈಕ್ ಸವಾರ ಗಂಭೀರ

Pinterest LinkedIn Tumblr

Car_Bike_axident_1

ತೊಕ್ಕೊಟ್ಟು : ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಗುರುವಾರ ರಾತ್ರಿ ತೊಕ್ಕೊಟ್ಟು ಸಮೀಪದ ಚೊಂಬುಗುಡ್ಡೆ ಎಂಬಲ್ಲಿ ಸಂಭವಿಸಿದೆ.

ಗಾಯಾಳುವನ್ನು ಪಂಡಿತ್‍ ಹೌಸ್ ನಿವಾಸಿ ಯತಿನ್ (18) ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಈತನನ್ನು ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Car_Bike_axident_2 Car_Bike_axident_3 Car_Bike_axident_4 Car_Bike_axident_5 Car_Bike_axident_6

ಯತಿನ್ ತನ್ನ ಸ್ನೇಹಿತನ ಎಫ್‌ಝಿ ಬೈಕ್‌ನಲ್ಲಿ ಪಂಡಿತ್‍ ಹೌಸ್ ಕಡೆಯಿಂದ ಸಾಗುತ್ತಿದ್ದಾಗ ತೊಕ್ಕೊಟ್ಟಿನಿಂದ ದೇರಳಕಟ್ಟೆ ಕಡೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಫಘಾತದ ಬಿರುಸಿಗೆ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕಾರಿನ ಮುಂದಿನ ಭಾಗ ಸಂಪೂರ್ಣ ಜಖಂಗೊಂಡಿದಿದೆ.

ಕಾರು ಚಲಾಯಿಸುತ್ತಿದ್ದ ವೈದ್ಯೆಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಅಪಾಯದಿಂದ ಪರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ರಭಸಕ್ಕೆ ಬೈಕ್‌ನ ಮುಂದಿನ ಚಕ್ರ ಸ್ಫೋಟಗೊಂಡಿದೆ. ಇದೇ ಸಂದರ್ಭದಲ್ಲಿ ಬೈಕಿನ ಪೆಟ್ರೋಲ್ ಟ್ಯಾಂಕಿಗೆ ಹಾನಿಯುಂಟಾದ ಪರಿಣಾಮ ರಸ್ತೆಯಲ್ಲಿ ಪೆಟ್ರೋಲ್ ಹರಿದು ಕೆಲವು ಸಮಯ ವಾಹನ ಸಂಚಾರಕ್ಕೆ ಆಡಚಣೆಯುಂಟಾಯಿತು.

ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Write A Comment