ಕನ್ನಡ ವಾರ್ತೆಗಳು

ಕಸ್ತೂರಿರಂಗನ್ ವರದಿ: ರಾಜ್ಯಸರಕಾರದ ನಿರ್ಲಕ್ಷ್ಯದಿಂದ ಜನರಲ್ಲಿ ಜೀವನ್ಮರಣ ಸ್ಥಿತಿ ನಿರ್ಮಾಣ: ಶೋಭಾ ಕರಂದ್ಲಾಜೆ

Pinterest LinkedIn Tumblr

shobha-karandlaje

ಉಡುಪಿ: ಅರಣ್ಯ ಸಚಿವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಳೆದ ವರ್ಷ ಜುಲೈನಲ್ಲಿ ನೀಡಿದ ಕಸ್ತೂರಿ ರಂಗನ್ ವರದಿಯಲ್ಲಿ ಹಿಂದಿನ 36 ತಾಲೂಕಿಗೆ ಸೀಮಿತವಾಗಿದ್ದ ಕಸ್ತೂರಿ ರಂಗನ್ ವರದಿಯನ್ನು 40 ತಾಲೂಕಿಗೆ ವಿಸ್ತರಿಸುವ ಮೂಲಕ ಕೇರಳ ಮಾದರಿಯ ವರದಿ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತಿದ್ದು ಈ ಮೂಲಕ ಕರಾವಳಿ ಭಾಗದ ಜನರನ್ನು ನಿರ್ಲಕ್ಷಿಸುತ್ತಿದ್ದು ಇಲ್ಲಿನ ಜನರಿಗೆ ಕಸ್ತೂರಿ ರಂಗನ್ ವರದಿ ಜೀವನ್ಮರಣ ಪ್ರಶ್ನೆಯಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆಯವರು ಹೇಳಿದರು.

ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದಿನ ಕಸ್ತೂರಿ ರಂಗನ್ ವರದಿಯ 20,688 ಚದರ ಕಿಲೋ ಮೀಟರ್ ಕಸ್ತೂರಿ ರಂಗನ್ ವರದಿಯಲ್ಲಿಯೇ ಕಿಂಚಿತ್ ವ್ಯತ್ಯಾಸ ಮಾಡದೇ ಇರುವುದರಿಂದ ಸುಪ್ರೀಮ್ ಕೋರ್ಟ್ ಅಧಿಸೂಚನೆಯಂತೆ ಕೇರಳ ಹೊರತು ಪಡಿಸಿ ಬೇರೆ ಎಲ್ಲಾ ರಾಜ್ಯಗಳಿಗೆ ಕಸ್ತೂರಿ ರಂಗನ್ ವರದಿ ಅನ್ವಯವಾಗುವುದರ ಮೂಲಕ ನಮ್ಮ ರಾಜ್ಯ ಸರ್ಕಾರ ರಾಜ್ಯದ ಜನತೆಯ ಒಳಿತಿನೆಡೆಗೆ ಸಂಪೂರ್ಣ ನಿರ್ಲಕ್ಷ ತೋರಿಸುತ್ತಿದ್ದಾರೆ. ಸುಪ್ರೀಮ್ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಕ್ಕೆ ಕೇರಳ ಮಾದರಿಯ ನೈಸರ್ಗಿಕ ಮತ್ತು ಸಾಂಸ್ಕೃತಿಕ ಆಧಾರದ ಮೇಲೆ ವರದಿ ಮಾಡುವಂತೆ ಕೋರಲಾಗಿತ್ತಾದರೂ ರಾಜ್ಯ ಸರ್ಕಾರ ಸಚಿವ ಸಂಪುಟದ ಆಧಾರದ ಮೇಲೆ ನಡೆಸಿದ ಕಸ್ತೂರಿ ರಂಗನ್ ವರದಿಯನ್ನು ಇದೀಗ ಸುಪ್ರೀಮ್ ಕೋರ್ಟ್ ನಿರಾಕರಿಸಲಾಗುತ್ತದೆ ಎಂಬ ಸಂಶಯ ಈಗ ನಿಜವಾಗಿದೆ.

ಆಕ್ಷೇಪಕ್ಕೆ ನಾಳೆ ಡೆಡ್ ಎಂಡ್: ಸಂಪುಟದ ವರದಿಯಂತೆ ಕರಾವಳಿ ಭಾಗದಲ್ಲಿ ಕಲ್ಲು, ಮರಳು ಗಣಿಗಾರಿಕೆ ನಿಷಿದ್ಧವಾಗುತ್ತಿದೆ. ಇದರಿಂದ ಈ ಭಾಗದ ಜನರನ್ನು ಸರ್ಕಾರ ಕತ್ತಲೆಡೆಗೆ ನೂಕುತ್ತಿದೆ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ 60 ದಿನಗಳ ಗಡುವು ನೀಡಿದ್ದು ನವೆಂಬರ್ 4 ರ ವಳಗೆ ಜನರು ಅ0ತರ್ಜಾಲದಲ್ಲಿ ನಮ್ಮ ನಿರಾಕರಣೆಯ ಬಗ್ಗೆ ತಿಳಿಸಬೇಕಾಗಿದೆ. ಈ ಮೂಲಕ ಕಸ್ತೂರಿ ರಂಗನ್ ವರದಿಯನ್ನು ನಿರಾಕರಣೆ ಮಾಡಬೇಕಾಗಿ ವಿನಂತಿಸುತ್ತೇನೆ, ಎಂದು ಸಂಸದೆ ಶೋಭಾ ಕರಂದ್ಲಾಜೆಯವರು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಅಧ್ಯಕ್ಷರು ವಿಜಯ ಕುಮಾರ್ ಹೆಗ್ಡೆ, ಜಿಲ್ಲಾ ಪ್ರಧಾನ ಅಧ್ಯಕ್ಷರು ಪ್ರವೀಣ್ ಶೆಟ್ಟಿ, ಉಪಾಧ್ಯಕ್ಷರು ಗೀತಾಂಜಲಿ ಸುವರ್ಣ ಮತ್ತು ಸಂಧ್ಯಾ ರಮೇಶ್ ಉಪಸ್ಥಿತರಿದ್ದರು.

Write A Comment