ಉಡುಪಿ: ಉಡುಪಿ ಜಿಲ್ಲೆಯ ಮುಸ್ಲಿಂ ಸಂಘಟನೆಗಳ ಒಕ್ಕೂಟ ಸುನ್ನೀ ಕೋ-ಆರ್ಡಿನೇಶನ್ ಉಡುಪಿ ನಗರವನ್ನು ಕೇಂದ್ರವಾಗಿರಿಸಿ ಹಮ್ಮಿಕೊಂಡ ಆಧ್ಯಾತ್ಮಿಕ ಮಜ್ಲಿಸ್ ಇದೇ ಬರುವ ನವೆಂಬರ್ 4 ರಂದು ಸಂಜೆ 6 ಗಂಟೆಗೆ ನಗರದ ಅಜ್ಜರಕಾಡಿನಲ್ಲಿ ಜರಗಲಿದೆ ಎಂದು ಕೋ-ಆರ್ಡಿನೇಶನ್ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ಸಖಾಫಿ ಕನ್ನಂಗಾರ್ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಲಾತ್ ಸ್ವಾಗತ ಸಮಿತಿ ಅಧ್ಯಕ್ಷರಾದ ಅಸ್ಸಯ್ಯದ್ ಜ್ಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ವಹಿಸಲಿದ್ದಾರೆ, ಉದ್ಘಾಟನೆಯನ್ನು ಉಡುಪಿಯ ಜಿಲ್ಲಾ ಸುನ್ನೀ ಸಂಯುಕ್ತಜಮಾಅತ್ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಮಾಡಲಿದ್ದಾರೆ.
ಆಧ್ಯಾತ್ಮಿಕ ಸ್ವಲಾತ್ ಮಜ್ಲಿಸ್ನ ನೇತೃತ್ವ ಹಾಗೂ ಉದ್ಬೋದನೆಯನ್ನು ವಿಶ್ವಕಂಡ ಅತೀ ಶ್ರೇಷ್ಠ ಆಧ್ಯಾತ್ಮಿಕ ಮುಂಚೂಣಿ ನಾಯಕರೂ ವಿದ್ವತ್ ಕ್ಷೇತ್ರಸ ದಿಗ್ಗಜರೂ ಆದ ಅಸ್ಸಂಯ್ಯಿದ್ ಇಬ್ರಾಹೀಂ ಖಲೀಲ್ ಅಲ್ಬುಖಾರಿ ಕಡಲುಂಡಿ ನೇತೃತ್ವವಹಿಸಲಿದ್ದು,ಅಲ್ಲದೆ ಜಿಲ್ಲೆಯ ಪ್ರಸಿದ್ಧ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದು,ಎಲ್ಲಾ ಮೊಹಲ್ಲಾಗಳಿಂದ ಕಾರ್ಯಕ್ರಮಕ್ಕೆ ಸಂಘಟಿಸಿದ್ದಾರೆ ಎಂದು ಸೋಮವಾರ ನೆಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಸ್.ವೈ.ಎಸ್ .ಜಿಲ್ಲಾ ಕಾರ್ಯದರ್ಶಿ ಗುಡ್ವಿಲ್ ಮುಹಿಯ್ಯುದ್ದೀನ್ ಹಾಜಿ ಸ್ವಾಗತ ಸಮಿತಿ ಸದಸ್ಸರಾದ ಮನ್ಸೂರ್ ಮೆಕ್ಕಾಸ್ ಮೂಳೂರು,ಬದ್ರುದ್ದೀನ್ ಅಹ್ಸನಿ ಕಾಪು, ಉಡುಪಿ ಎಸ್.ವೈ.ಎಸ್ ಅಧ್ಯಕ್ಷರಾದ ಶಾಬಾನ್ ಹಾಜಿ ಉಪಸ್ಧಿತಿ.
