ಕನ್ನಡ ವಾರ್ತೆಗಳು

ರಾಜ್ಯ ಎಸ್‌ಎಸ್‌ಏಫ್ ಪ್ರತಿಭೋತ್ಸವದ ಪ್ರಚಾರಾರ್ಥ ರೇಶನ್ ವಿತರಣೆ

Pinterest LinkedIn Tumblr

ssf_reshaton-vitharane

ಉಳ್ಳಾಲ: ಎಸ್‌ಎಸ್‌ಎಫ್ ತೊಕ್ಕೊಟ್ಟು ಸೆಕ್ಟರ್ ಇದರ ಆಶ್ರಯದಲ್ಲಿ 2015 ನವಂಬರ್ ತಿಂಗಳ 6ರಿಂದ 8 ರವರೆಗೆ ಮೂರು ದಿನಗಳ ಕಾಲ ಅಲ್ ಮಧೀನದಲ್ಲಿ ಜರಗಲಿರುವ ರಾಜ್ಯ ಎಸ್‌ಎಸ್‌ಏಫ್ ಪ್ರತಿಭೋತ್ಸವದ ಪ್ರಚಾರಾರ್ಥ ಅಂಗವಾಗಿ ರೇಶನ್ ವಿತರಣೆ ಕಾರ್ಯಕ್ರಮವು ಇಲ್ಯಾಸ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಸೇವಂತಿಗುಡ್ಡೆ ತಾಜುಲ್ ಉಲಮಾ ನಗರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಶೀರ್ ಅಹ್ಸನಿಯವರು ಮಾತನಾಡಿ, ಬಡ ಕುಟುಂಬಗಳಿಗೆ ರೇಶನ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಎಸ್‌ಎಸ್‌ಎಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಇಂತಹ ಕಾರ್ಯಕ್ರಮಗಳು ಬಡವರ ನೋವನ್ನು ನಿವಾರಿಸುತ್ತದೆ. ಅಲ್ಲದೇ ಸಮಾಜದ ಅಭಿವೃದ್ಧಿಗೆ ಪೂರಕವಾದ ಕೆಲಸವಾಗಿದೆ ಎಂದರು.

ಸಂi ಸಯ್ಯಿದ್ ಕುಬೈಬ್ ತಂಙಳ್ ಅರ್ಹ ಕುಟುಂಬಗಳಿಗೆ ರೇಶನ್ ವಿತರಣೆ ಮಾಡಿದರು. ಅಬ್ದುಲ್ ಹಕೀಂ ಮದನಿ ದುವಾ ನೆರವೇರಿಸಿದರು.ಎಸ್‌ಎಸ್‌ಎಫ್ ಉಳ್ಳಾಲಡಿವಿಷನ್ ಉಪಾಧ್ಯಕ್ಷ ಮುನೀರ್ ಸಖಾಫಿ ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಅಬ್ದುಲ್ ರವೂಫ್ ಸ‌ಅದಿ, ನವಾಝ್ ಸಖಾಫಿ ಉಳ್ಳಾಲ, ಸಮೀರ್ ಸೇವಂತಿಗುಡ್ಡೆ, ಶಫೀಕ್ ಅಹ್ಸನಿ ಬಾತಿಶ್ ಮಂಚಿಲ ಉಪಸ್ಥಿತರಿದ್ದರು.

ಎಸ್‌ಎಸ್‌ಎಫ್ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಜಾಫರ್ ಯು.ಎಸ್. ಧನ್ಯವಾದ ಸಮರ್ಪಿಸಿದರು.

Write A Comment