ಮಂಗಳೂರು : ರಾಜ್ಯದ ಹಿರಿಯ ಪೋಲೀಸ್ ಅಧಿಕಾರಿಗಳ ಸಭೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರ ಕಛೇರಿ, ಬೆಂಗಳೂರು ಇಲ್ಲಿ ಗುರುವಾರ ಬೆಳಿಗ್ಗೆ ನಡೆಯಿತು.
ಸಭೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ರವರು ದಕ್ಷಿಣ ಕನ್ನಡ ಜಿಲ್ಲೆಯ ಪೋಲೀಸ್ ಇಲಾಖೆಯ ಸಮಗ್ರ ಅಭಿವೃದ್ಧಿ, ಕಾನೂನು ಸುವ್ಯವಸ್ಥೆ ಬಲಪಡಿಸುವುದು, ಭೂಗತ ಚಟುವಟಿಕೆಗಳನ್ನು ಮಟ್ಟ ಹಾಕುವುದು. ಜಿಲ್ಲೆಯಾದ್ಯಂತ ವಿವಿಧ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಸೈಬರ್ ಪೋಲೀಸ್ ಠಾಣೆ ಪ್ರಾರಂಭಿಸುವ ಬಗ್ಗೆ, ಜಿಲ್ಲೆಗೆ ಹೆಚ್ಚುವರಿ ಪೋಲೀಸ್ ಸಿಬ್ಬಂದಿಗಳ ನೇಮಕ, ಕೋಮು ಸೌಹಾರ್ಧ ಸಭೆಗಳನ್ನು ಏರ್ಪಡಿಸುವುದು ಹಾಗೂ ಜಿಲ್ಲಾ ಪೋಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಗೃಹ ಸಚಿವರ ಸಲಹೆಗಾರರಾದ ಶ್ರೀ. ಕೆಂಪಯ್ಯ, ಐ.ಪಿ.ಎಸ್ (ನಿವೃತ್ತ), ಶ್ರೀ. ಓಂ ಪ್ರಕಾಶ್, ಐ.ಪಿ.ಎಸ್, ಪೋಲೀಸ್ ಮಹಾನಿರ್ದೇಶಕರು, ಶ್ರೀ. ಅಲೋಕ್ ಕುಮಾರ್, ಐ.ಪಿ.ಎಸ್, ಎ.ಡಿ.ಜಿ.ಪಿ (ಕಾನೂನು ಸುವ್ಯವಸ್ಥೆ), ಶ್ರೀ. ಕೃಷ್ಣ ಭಟ್, ಐ.ಪಿ.ಎಸ್, ಡಿ.ಐ.ಜಿ (ಗುಪ್ತಚಾರ) ಹಾಗೂ ಶ್ರೀ. ರಾಘವೇಂದ್ರ ಪ್ರಸಾದ್, ಐ.ಪಿ.ಎಸ್, ಎಸ್.ಪಿ (ಸೆಕ್ಯೂರಿಟಿ) ಮುಂತಾದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

