ಮೂಡುಬಿದಿರೆ, ಅ.27: ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಟಾಲ್ಕಟ್ಟೆಯ ಬದ್ರುದ್ದೀನ್ ಎಂಬಾತನನ್ನು ಮೂಡುಬಿದಿರೆ ಪೊಲೀಸರು ಸೋಮವಾರ ಗಂಟಾಲ್ಕಟ್ಟೆಯಲ್ಲಿ ಬಂಧಿಸಿದ್ದಾರೆ.
ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಈತ ಸೋಮವಾರ ಬೆಳಗ್ಗೆ ಗಂಟಾಲ್ಕಟ್ಟೆಯಲ್ಲಿ ಬಸ್ ಕಾಯುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಹತ್ತಕ್ಕೇರಿದೆ.
ಬಂಧಿತ ಆರೋಪಿ ಬದ್ರುದ್ದೀನ್ ಗಂಟಾಲ್ಕಟ್ಟೆ ಹಾಗೂ ಪೊಲೀಸ್ ಕಸ್ಟಡಿಯಲ್ಲಿದ್ದ ಇತರ ಆರೋಪಿಗಳಾದ ಮುಹಮ್ಮದ್ ಹನೀಫ್ ಆದ್ಯಪಾಡಿ, ಮುಹಮ್ಮದ್ ಮುಸ್ತಫಾ ಬಜ್ಪೆ, ಮುಹಮ್ಮದ್ ಮುಸ್ತಫಾ ಕಾವೂರು, ಕಬೀರ್ ಕಂದಾವರ, ಮುಹಮ್ಮದ್ ಶರೀಫ್ ತೋಡಾರು, ಇಮ್ತಿಯಾಝ್ ಗಂಟಾಲ್ಕಟ್ಟೆ ಅವರನ್ನು ಪೊಲೀಸರು ಸೋಮವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇವರೆಲ್ಲರಿನ್ನೂ ನ್ಯಾಯಾಧೀಶರು ಅ.31ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.
