ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದಏರ್ಪಡಿಸಲಾಗಿದ್ದ ಮಕ್ಕಳಿಗೆ ಅಕ್ಷರಾಭ್ಯಾಸ ವಿದ್ಯಾರಂಭ ಕಾರ್ಯಕ್ರಮ ವೇದಮೂರ್ತಿಗಣಪತಿಆಚಾರ್ಯ ಹಾಗೂ ವೇದಮೂರ್ತಿ ಪ್ರಭಾಕರ ಅಡಿಗರಮಾರ್ಗ ದರ್ಶನದಲ್ಲಿಇತ್ತೀಚೆಗೆಜರಗಿತು.
ಸಂಗೀತ, ತುಳು ಲಿಪಿ ಕಲಿಕೆ, ಸಂಸ್ಕೃತ, ಕನ್ನಡದಅಕ್ಷರಾಭ್ಯಾಸವನ್ನು ಪುಟಾಣಿಗಳಿಗೆ ನಡೆಸಿ ಕೊಡಲಾಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಾನದಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ, ಶ್ರೀಮತಿ ವಿನೋದಕಲ್ಕೂರ, ಕೆ.ಎಸ್. ಕಲ್ಲೂರಾಯ, ಪ್ರಭಾಕರರಾವ್ ಪೆಜಾವರ್, ಸುಧಾಕರರಾವ್ ಪೇಜಾವರ್, ವಿಜಯಲಕ್ಷ್ಮೀ ಶೆಟ್ಟಿ, ಮಂಜುಳಾ ಶೆಟ್ಟಿ, ದಯಾನಂದಕಟೀಲ್, ಜನಾರ್ದನ ಹಂದೆಮುಂತಾದವರು ಉಪಸ್ಥಿತರಿದ್ದರು.
