ನವದೆಹಲಿ: ಭೂಕಂಪಕ್ಕೆ ತುತ್ತಾಗಿರುವ ಪಾಕಿಸ್ತಾನಕ್ಕೆ ನೆರವು ನೀಡಲು ಭಾರತ ಸಿದ್ಧವಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಅಪ್ಘಾನಿಸ್ಥಾನ-ಪಾಕಿಸ್ತಾನ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿರುವುದರ ಬಗ್ಗೆ ತಿಳಿದುಬಂದಿದೆ. ಎಲ್ಲರ ಸುರಕ್ಷತೆಗೆಗಾಗಿ ಪ್ರಾರ್ಥಿಸುವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ತ್ವರಿತಗತಿಯ ಅಂದಾಜು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಪ್ಘಾನಿಸ್ಥಾನ ಹಾಗೂ ಪಾಕಿಸ್ತಾನಕ್ಕೆ ಅಗತ್ಯ ನೆರವು ನೀಡಲು ಸಿದ್ಧವಿದ್ದೇವೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ಅಪ್ಘಾನಿಸ್ಥಾನದ ಕೇಂದ್ರವಾಗಿದ್ದ ಭೂಕಂಪನದಿಂದ ಪಾಕಿಸ್ತಾನದಲ್ಲೂ ಭೂಮಿ ಪ್ರಬಲವಾಗಿ ನಡುಗಿದ್ದು ಇಬ್ಬರು ಮಕ್ಕಳೂ ಸೇರಿ ಕನಿಷ್ಠ 13 ಜನ ಸಾವನ್ನಪ್ಪಿದ್ದಾರೆ. ಭೂಕಂಪನ ತೀವ್ರತೆ ರಿಕ್ಟರ್ ಮಾಪನದಲ್ಲಿ 7 .7 ರಷ್ಟಿತ್ತು ಎಂದು ತಿಳಿದುಬಂದಿದೆ.
