ಮಂಗಳೂರು : ಬಡಗುತಿಟ್ಟಿನ ಹಿರಿಯ ವೇಷಧಾರಿ ಬಳ್ಕೂರು ಕೃಷ್ಣ ಯಾಜಿಅವರಿಗೆ ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಮತ್ತುಕಲಾಸ್ಪಂದನ ಬಯಲಾಟ ಸಮಿತಿ ವತಿಯಿಂದಕಲ್ಕೂರ ಯಕ್ಷಸಿರಿ ಪುರಸ್ಕಾರವನ್ನು ಶುಕ್ರವಾರ ಪ್ರದಾನ ಮಾಡಲಾಯಿತು.
ನಗರದಡಾನ್‌ಬಾಸ್ಕೊ ಸಭಾಂಗಣದಲ್ಲಿ ನಡೆದಕಾರ್ಯಕ್ರಮದಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ಪದ್ಮಭೂಷಣಕದ್ರಿ ಗೋಪಾಲನಾಥ್ ಪ್ರದಾನ ಮಾಡಿ,ಕಲಾವಿದರಿಗೆ ಸಮಾಜದಿಂದ ನಿರಂತರ ಪ್ರೋತ್ಸಾಹಅಗತ್ಯ. ಸಾಧಕಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನುಕಲ್ಕೂರ ಪ್ರತಿಷ್ಠಾನ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ.
ಈ ಕಾರ್ಯ ನಿರಂತರ ಮುಂದುವರಿಯಲಿ. ಸಮಾಜದ ಪ್ರೋತ್ಸಾಹವೂದೊರೆಯಲಿ ಎಂದು ಅವರು ಹೇಳಿದರು.
ಕಲ್ಕೂರ ಪ್ರತಿಷ್ಠಾನದಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ, ಕರ್ಣಾಟಕ ಬ್ಯಾಂಕಿನ ಮಹಾಪ್ರಬಂಧಕ ಉಪೇಂದ್ರ ಪ್ರಭು, ಎಸ್.ಡಿ.ಎಂ. ಉದ್ಯಮಾಡಳಿತ ಕಾಲೇಜು ನಿರ್ದೇಶಕಡಾ. ದೇವರಾಜ್, ಕಲಾಪೋಷಕ ಮೋಹನ ರಾವ್, ಪ್ರಸಂಗಕರ್ತ ನಿತ್ಯಾನಂದಕಾರಂತ ಪೊಳಲಿ, ಸಂಘಟಕಜನಾರ್ದನ ಹಂದೆ, ಸುಧಾಕರರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು.
ಜಿ.ಕೆ. ಭಟ್ ಸೇರಾಜೆ ಸ್ವಾಗತಿಸಿ ಮಾಧುರಿ ಶ್ರೀರಾಮ ಕಾರ್ಯಕ್ರಮ ನಿರೂಪಿಸಿದರು.
