ಕನ್ನಡ ವಾರ್ತೆಗಳು

ಮಹಾರಾಷ್ಟ್ರ ರಾಜ್ಯ ಕನ್ನಡಿಗರ 11ನೇ ಸಾಹಿತ್ಯ ಸಮ್ಮೇಳನ.

Pinterest LinkedIn Tumblr

mumbai_sahityy_phoro_1a

ವರದಿ : ಈಶ್ವರ ಎಂ. ಐಲ್/ ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಕರ್ನಾಟಕದ ಇತಿಹಾಸವನ್ನು ಮಹಾರಾಷ್ಟ್ರದಲ್ಲಿ ಹೊರನಾಡ ಕನ್ನಡಿಗರು ಶ್ರೀಮಂತಗೊಳಿಸಿದ್ದು, ಮುಂಬಯಿಗರು ಸಂಸ್ಕೃತಿ, ಸಂಸ್ಕಾರಗಳ ಉಳಿವಿನ ಶಾಶ್ವತ ಪಾಲಕರು ಎನ್ನುವುದಕ್ಕೆ ಅಭಿಮಾನವಾಗುತ್ತಿದೆ. ಹಲವು ವಿಶೇಷತೆಗಳನ್ನು ಹೊಂದಿರುವ ಇಲ್ಲಿನ ಜನತೆ ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ನಿಪುಣರು ಮತ್ತು ಪ್ರಾಮಾಣಿಕರು ಎಂದು ಸಾಹಿತಿ ಡಾ| ಎ. ವಿ. ಪ್ರಸನ್ನ ಹೇಳಿದರು.

ಅ. 17ರಂದು ಸಯನ್‌ಪೂರ್ವದ ಗೋಕುಲದ ಗೀತಾ ಗೋವಿಂದ ಸಭಾಗೃಹದಲ್ಲಿ ರಘುನಾಥ ಆಳ್ವ ಮಹಾದ್ವಾರವನ್ನೊಳಗೊಂಡ ಡಾ| ಎಂ. ಎಂ. ಕಲಬುರ್ಗಿ ಮಂಟಪದಲ್ಲಿ ನಿರ್ಮಿತ ಡಾ| ಕಿಞ್ಞಣ್ಣ ರೈ ವೇದಿಕೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕವು ಕಸಾಪ ಬೆಂಗಳೂರು ಸಹಯೋಗದೊಂದಿಗೆ ಆಯೋಜಿಸಿರುವ ಎರಡು ದಿನಗಳ ಮಹಾರಾಷ್ಟ್ರ ರಾಜ್ಯ ಕನ್ನಡಿಗರ 11ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

mumbai_sahityy_phoro_2 mumbai_sahityy_phoro_3 mumbai_sahityy_phoro_5 mumbai_sahityy_phoro_6

ಎಚ್‌. ಎಸ್‌. ಪೂಜಾರಿ ಅವರ “ಸಹಚಿಂತನ’, ಡಾ| ಕರುಣಾಕರ ಶೆಟ್ಟಿ ಅವರ “ಆರದಿರಲಿ ಬೆಳಕು’, ಶೀಲಾವತಿ ರಾವ್‌ಅವರ “ರಚನೆ’, ಕೆ.ಎಲ್‌ಕುಂಡಂತಾಯ ಅವರ “ದೇವಾಲಯ ನಿರ್ಮಾಣ ಒಂದು ಅಧ್ಯಯನ’, ಎಂ. ಬಿ. ಕುಕ್ಯಾನ್‌ರಚಿತ “ನವ ಹೆಜ್ಜೆಗಳು’ ಜಿ. ಪಿ. ಕುಸುಮ ಅವರ “ಭಾವ ಬಯಲು’ ಕೃತಿಗಳ ಮೇಲೆ ಪುಷ್ಪವೃಷ್ಟಿಗೈದು ನಾರಾಯಣಾಮೃತ ಫೌಂಡೇ ಶನ್‌ನ ಎನ್‌. ಆರ್‌. ರಾವ್‌ ಬಿಡುಗಡೆಗೊಳಿಸಿದರು.

ಕೆ. ಎಲ್‌. ಕುಂಡಂತಾಯ ಮಾತನಾಡಿ, ಇಲ್ಲಿ ಸಾಮೂಹಿಕವಾಗಿ ಕೃತಿಗಳ ಬಿಡುಗಡೆಯಾಗಿದೆ. ದೇವಾಲಯಗಳ ಜೀರ್ಣೋದ್ಧಾರ ಶಾಸ್ತ್ರೀಯವಾಗಿ ನಡೆಯಬೇಕಾಗಿದ್ದು, ಇಂತಹ ಕಾರ್ಯಕ್ಕೆ ಮುಂಬಯಿ ಜನತೆಯಿಂದ ನಾಡಿಗೆ ಬರಲಿ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ದ.ಕನ್ನಡದ ಜಿಲ್ಲಾಧ್ಯಕ್ಷ, ಪ್ರದೀಪ್‌ಕುಮಾರ್‌ಕಲ್ಕೂರ ಮಾತನಾಡುತ್ತಾ ವಿಶ್ವವೇ ವಿಸ್ಮಯ ಪಡುವ ಭಾರತೀಯ ಸಂಸ್ಕೃತಿ, ಸಾಹಿತ್ಯ ಶ್ರೇಷ್ಠವಾಗಿದ್ದು. ಭಾರತೀಯ ಚಿಂತನೆಯೊಂದಿಗೆ ಒಂದಾಗಿ ಸಮಾಜಮುಖೀಯಾಗಿ, ಸಾಂಸ್ಕೃತಿಕವಾಗಿ ಬಾಳಲು ಇಂತಹ ಸಮ್ಮೇಳನಗಳು ಅರ್ಥಪೂರ್ಣ ವಾಗಿವೆ. ನಾವು ಕೇವಲ ಮೂಲಭೂತ ಅನುಕೂಲತೆಗೆ ಒಳಗಾಗಿ ಬಾಳದೆ ಸಂಸ್ಕೃತಿ ಸಾಹಿತ್ಯವನ್ನು ಮೈಗೂಡಿಸಿಕೊಂಡು ಬದುಕುವ ರೂಢಿಯನ್ನು ಪಾಲಿಸಬೇಕು. ಇಂತಹದಕ್ಕೆ ಮುಂಬಯಿ ಕನ್ನಡಿಗರು ಮಾದರಿಯಾಗಿದ್ದಾರೆ.

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ, ಬಿಎಸ್‌ಕೆಬಿ ಅಸೋಸಿಯೇಶನ್‌ಮುಂಬಯಿ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತ್ ಮಹಾರಾಷ್ಟ್ರ ಘಟಕ ಸಂಸ್ಥೆಗಳ ಸಹಕಾರದೊಂದಿಗೆ ಈ ಸಮಾರಂಭವು ಜರಗಿತು. ಕನ್ನಡ ಸಾಹಿತ್ಯ ಪರಿಷತ್‌ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್‌ಕಲ್ಕೂರ ಅವರು ಪುಸ್ತಕ ಭಂಡಾರಕ್ಕೆ ಚಾಲನೆ ನೀಡಿದರು.

ಕನ್ನಡ ವರ್ಷಾಚರಣೆ, ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಎಚ್‌. ಬಿ. ಎಲ್‌. ರಾವ್‌ವಹಿಸಿದ್ದು, ಕನ್ನಡ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರಕುಮಾರ್‌ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಮಹಾರಾಷ್ಟ್ರ ಘಟಕದ ಜತೆ ಕಾರ್ಯದರ್ಶಿ ಎಸ್‌. ಕೆ. ಸುಂದರ್‌, ಗೌರವ ಕೋಶಾಧಿಕಾರಿ ಗುರುರಾಜ್‌ಎಸ್‌. ನಾಯಕ್‌ವೇದಿಕೆಯಲ್ಲಿದ್ದರು.

ಕಸಾಪ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಎಂ. ಬಿ. ಕುಕ್ಯಾನ್‌ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೀತಾ ಎಸ್‌. ಆರ್‌. ಪರಿಚಯಿಸಿದರು. ವೈ. ವಿ. ಮಧುಸೂದನ್‌ರಾವ್‌ಮತ್ತು ಶಶಿಕಲಾ ಹೆಗ್ಡೆ ಅತಿಥಿಗಳನ್ನು ಪರಿಚಯಿಸಿ, ನಿರೂಪಿಸಿದರು. ಕಸಾಪ ಮಹಾರಾಷ್ಟ್ರ ಘಟಕದ ಗೌರವ ಕಾರ್ಯದರ್ಶಿ ಡಾ| ಕರುಣಾಕರ ಎಸ್‌. ಶೆಟ್ಟಿ ವಂದಿಸಿದರು.

ಅ. 17ರಂದು ರಂದು ಜರಗಿದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಸಂಶೋಧಕ ಬಾಬ್ ಶಿವ ಪೂಜಾರಿ ಮತ್ತು ಪ್ರೇಮಾ ಪೂಜಾರಿ ದಂಪತಿ ಅವರಿಗೆ ಸನ್ಮಾನ ಹಾಗೂ ಕಳಸ ಅಭಿನಂದನ ಗ್ರಂಥವನ್ನು ಅರ್ಪಿಸಲಾಯಿತು. ಹೋಟೇಲು ಉದ್ಯಮಿ ಸುರೇಶ್ ಆರ್ ಪೂಜಾರಿಯವರು ಗ್ರಂಥ ಬಿಡುಗಡೆ ಮಾಡಿದರು.

ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್. ಟಿ. ಪೂಜಾರಿ ಮತ್ತು ಬಳಗದ ಇತರ ಗಣ್ಯರು ಉಪಸ್ಥಿತರಿದ್ದರು. ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಎಚ್‌. ಬಿ. ಎಲ್‌. ರಾವ್‌ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮಾರಂಭದಲ್ಲಿ ಬಿ.ಎಸ್.ಕೆ.ಬಿ. ಅಧ್ಯಕ್ಷ ಡಾ. ಸುರೇಶ್ ಎಸ್. ರಾವ್ ಮುಖ್ಯ ಅತಿಥಿಯಾಗಿದ್ದರು. ಡಾ. ಮಮತಾ ರಾವ್ ಅಭಿನಂದನಾ ಭಾಷಣ ಮಾಡಿದರು. ಸಾ.ದಯಾ ಕಾರ್ಯಕ್ರಮವನ್ನು ನಿರೂಪಿಸಿದ್ದು ಗೌ. ಕಾರ್ಯದರ್ಶಿ ಡಾ. ಕರುಣಾಕರ ಶೆಟ್ಟಿ ವಂದಿಸಿದರು.

Write A Comment