ಕನ್ನಡ ವಾರ್ತೆಗಳು

ರೇಪ್ ಯತ್ನ ಪ್ರಕರಣವನ್ನು ಸಚಿವ ಸೊರಕೆ ಮುಚ್ಚಿಹಾಕಿದ್ದಾರೆ: ಶೋಭಾ ಕರಂದ್ಲಾಜೆ ಆರೋಪ

Pinterest LinkedIn Tumblr

shobha-karandlaje

ಉಡುಪಿ: ಸಚಿವ ವಿನಯ್‌ ಕುಮಾರ್‌ ಸೊರಕೆ ಅವರು ತಮ್ಮ ಮನೆಕೆಲಸದಾಕೆಯ ಮಗಳ ಮೇಲೆ ನಡೆದ ಅತ್ಯಾಚಾರ ಯತ್ನ ಪ್ರಕರಣವನ್ನು ಮುಚ್ಚಿ ಹಾಕಿ ಆರೋಪಿಗಳಿಗೆ ಜಾಮೀನು ಸಿಗುವಂತೆ ಮಾಡಿ ರಕ್ಷಣೆ ಒದಗಿಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸೊರಕೆ ಗ್ರಾಮದಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಯತ್ನ  ಪ್ರಕರಣದ ಆರೋಪಿಗಳನ್ನು ಗ್ರಾಮಸ್ಥರು ಹಿಡಿದು ಕೊಟ್ಟರೂ  ಸಚಿವ ಸೊರಕೆ ಅವರನ್ನು ಜಾಮೀನು ಸಿಗುವಂತೆ ಮಾಡಿ ಠಾಣೆಯಿಂದ ಬಿಡಿಸಿ ದುಷ್ಟರ ರಕ್ಷಣೆ ಮಾಡಿದ್ದಾರೆ ಎಂದು ಆರೋಪಿಸಿದರು.

Write A Comment