ಕನ್ನಡ ವಾರ್ತೆಗಳು

14 ರ ಬಾಲಕಿಗೆ 35 ವರ್ಷದ ವ್ಯಕ್ತಿಯಿಂದ ಲೈಂಗಿಕ ಪೀಡನೆ; ದೂರು ದಾಖಲು

Pinterest LinkedIn Tumblr

rape-2

ಉಡುಪಿ: 14 ವರ್ಷ ಪ್ರಾಯದ ಬಾಲಕಿಯೋರ್ವಳ ಮೇಲೆ ವಿವಾಹಿತ ವ್ಯಕ್ತಿಯೋರ್ವ ಲೈಂಗಿಕ ಪೀಡನೆ ನಡೆಸಿದ ಘಟನೆ ಎರಡು ದಿನದ ಬಳಿಕ ಬೆಳಕಿಗೆ ಬಂದಿದ್ದು ಆತನ ವಿರುದ್ಧ ಭಾನುವಾರ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಪರಾರಿಯಾಗಿದ್ದಾನೆ.

ಮೂಲತಃ ಶಿರಿಯಾರದ ಕೊಳ್ಕೆಬೈಲು ಸಮೀಪದ ನಿವಾಸಿಯಾದ ಕೇಶವ (35) ಎಂಬಾತನೇ ಲೈಂಗಿಕ ಪೀಡನೆ ನೀಡಿದ ಕಾಮುಕ.

ಕಂದಾವರ ಗ್ರಾಮದ ಹೇರಿಕೆರೆ ಸಮೀಪದ ತನ್ನ ಪತ್ನಿ ಮನೆಗೆ ಶುಕ್ರವಾರ ಬಂದಿದ್ದ ವೇಳೆ ಈತ ಅದೇ ಕಾಲನಿಯ ಮನೆಯೊಂದಕೆ ತೆರಳಿ ಅಲ್ಲಿ ಒಂಟಿಯಾಗಿದ್ದ 14 ವರ್ಷ ಪ್ರಾಯದ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಪೀಡನೆ ನೀಡಿದ್ದಾನೆ. ಇದೇ ವೇಳೆ ಆಕೆ ಕೂಗಿಕೊಂಡ ಕಾರಣ ಆಕೆಯನ್ನು ಬೆದರಿಸಿ ಓಡಿ ಹೋಗಿದ್ದಾನೆ. ಕಳೆದೆರಡು ದಿನಗಳಿಂದ ಬೆದರಿದ ಬಾಲಕಿ ಮಂಕಾಗಿರುವ ಬಗ್ಗೆ ಆಕೆ ಮನೆಯಯವರು ವಿಚಾರಿಸಿದ ವೇಳೆ ಆಕೆ ವಿಚಾರವನ್ನು ತಿಳಿಸಿದ್ದು ಭಾನುವಾರ ಆಕೆ ಫೋಷಕರು ಕುಂದಾಪುರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಸದ್ಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾದ ಆರೋಪಿ ಕೇಶವನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Write A Comment