ಮಂಗಳೂರು, ಅ.10: ಮಸ್ಕತ್ನಲ್ಲಿ ಅ.1ರಿಂದ 6ರವರೆಗೆ ನಡೆದ ಏಷ್ಯನ್ ಬೆಂಚ್ಪ್ರೆಸ್ ಪವರ್ಲಿಫ್ಟಿಂಗ್ ಚಾಂಪಿ ಯನ್ಶಿಪ್ನಲ್ಲಿ ವಿಶೇಷ ಸಾಧನೆಗೈದು ಶುಕ್ರವಾರ ಆಗಮಿಸಿದ ಮಂಗಳೂರಿನ 6 ಕ್ರೀಡಾಪಟು ಗಳನ್ನು ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.
ಏಷ್ಯನ್ ಬೆಂಚ್ಪ್ರೆಸ್ ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಸತೀಶ್ಕುಮಾರ್ ಕುದ್ರೋಳಿ, ವಿವೇಕ್ ಕಾಮತ್ ಚಿನ್ನದ ಪದಕ ಗಳಿಸಿದ್ದು, ವಿನ್ಸೆಂಟ್ ಪ್ರಕಾಶ್ ಕಾರ್ಲೊ ಕಂಚಿನ ಪದಕ ಗಳಿಸಿದ್ದಾರೆ. ಜಯಪ್ಪ ಲಮಾಣಿ, ಉದಯ್ ಕುಮಾರ್ ಹಾಗೂ ನಯನಾ ಶ್ರೀಯಾನ್ ಬೆಳ್ಳಿಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ.
ಕ್ರೀಡಾಳುಗಳು ಶುಕ್ರವಾರ ರೈಲಿನ ಮೂಲಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಆಗಮಿಸಿದಾಗ ಕ್ರೀಡಾ ಭಿಮಾನಿಗಳು ಚೆಂಡೆ-ವಾದ್ಯಗಳ ಮೂಲಕ ಬರ ಮಾಡಿಕೊಂಡರು. ಬಳಿಕ ಅವರನ್ನು ತೆರೆದ ಜೀಪಿನಲ್ಲಿ ಕಾರ್ಸ್ಟ್ರೀಟ್ನ ಜಿಮ್ನೇಶಿಯಂವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಈ ಸಂದರ್ಭ ಅಬಕಾರಿ ಜಂಟಿ ಆಯುಕ್ತ ರಾಜೇಂದ್ರ ಪ್ರಸಾದ್, ಪ್ರಮುಖರಾದ ತೇಜೋಮಯ, ಪುರಂದರದಾಸ್ ಕೂಳೂರು, ಗಣೇಶ್ ಶೆಟ್ಟಿ, ಪ್ರಕಾಶ್ ಕುಮಾರ್, ಕೃಷ್ಣಮೂರ್ತಿ ರಾವ್, ಚಂದ್ರಶೇಖರ್ ರೈ ಮತ್ತಿತರರು ಉಪಸ್ಥಿತರಿದ್ದರು.
