ಕನ್ನಡ ವಾರ್ತೆಗಳು

ಅಪರಿಚಿತ ತಂಡದಿಂದ ಹಿಂದೂ ಸಂಘಟನೆಯ ಸಕ್ರೀಯ ಕಾರ್ಯಕರ್ತ ಹೂವಿನ ವ್ಯಾಪಾರಿಯ ಹತ್ಯೆ

Pinterest LinkedIn Tumblr

mudbidre_murder_photo_1

ಮೂಡುಬಿದಿರೆ: ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಹೂವಿನ ವ್ಯಾಪಾರಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದ ಘಟನೆ ಇಂದು ಮುಂಜಾನೆ ಮೂಡುಬಿದಿರೆ ಪೇಟೆಯ ಸಮಾಜಮಂದಿರ ಗೇಟ್ ನಡೆದಿದೆ.

ದುಷ್ಕರ್ಮಿಗಳಿಂದ ಹತ್ಯೆಗೀಡಾದ ವ್ಯಕ್ತಿಯನ್ನು ಹೂವಿನ ವ್ಯಾಪಾರಿ ಹೊಸಬೆಟ್ಟು ನಿವಾಸಿ ಪ್ರಶಾಂತ್(29) ಎಂದು ಗುರುತಿಸಲಾಗಿದೆ. ಇವರು ಹಿಂದೂ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು.

mudbidre_murder_photo_2

mudbidre_murder_photo_3 mudbidre_murder_photo_4 mudbidre_murder_photo_5 mudbidre_murder_photo_6 mudbidre_murder_photo_7 mudbidre_murder_photo_8 mudbidre_murder_photo_9 mudbidre_murder_photo_10 mudbidre_murder_photo_11 mudbidre_murder_photo_12

ಪ್ರಶಾಂತ್ ಎಂದಿನಂತೆ ಇಂದು ಕೂಡ ಬೆಳಿಗ್ಗೆ ಸುಮಾರು 7.15ರ ಸುಮಾರಿಗೆ ಮೂಡುಬಿದಿರೆಯ ಸಮಾಜಮಂದಿರ ಗೇಟ್ ಬಳಿಯಿರುವ ತಮ್ಮ ಅಂಗಡಿಗೆ ಹೂವುಗಳನ್ನು ತರುವಾಗ ಅಲ್ಲೆ ಪಕ್ಕದಲ್ಲಿರುವ ಆಟೋ ಪಾರ್ಕ್ ಹಿಂದುಗಡೆ ಅವಿತಿದ್ದ ದುಷ್ಕರ್ಮಿಗಳ ತಂಡ ಪ್ರಶಾಂತ್ ಅವರ ಮೇಲೆ ಏಕಾಏಕಿ ದಾಳಿ ಮಾಡಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದೆ ಎನ್ನಲಾಗಿದೆ.

ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಶಾಂತ್ ಮೃತರಾಗಿದ್ದಾರೆ.

Write A Comment