ಉಡುಪಿ: ಜಿಲ್ಲಾ ಅಪರಾಧ ಪತ್ತೆ ದಳದ (ಡಿ.ಸಿ.ಐ.ಬಿ.) ಹೆಡ್ ಕಾನ್ಸ್ ಟೇಬಲ್ ಸಂತೋಷ್ ನಿಟ್ಟೂರು(42) ಗುರುವಾರದಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗುರುವಾರ ಠಾಣೆಯಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಸಂತೋಷ್ ಅವರಿಗೆ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥರಾದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾದರು.
ಸಂತೋಷ್ ಅವರು ಈ ಹಿಂದೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಒಂದು ವರ್ಷದ ಹಿಂದೆ ಉಡುಪಿ ಜಿಲ್ಲಾ ಅಪರಾಧ ಪತ್ತೆದಳದ ಹೆಡ್ ಕಾನ್ಸ್ ಟೇಬಲ್ ಆಗಿ ನಿಯೋಜನೆಗೊಂಡಿದ್ದರು.
ಮೃತರು ಪತ್ನಿ ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.
