ಮಂಗಳೂರು ಅ.07: ವಿದ್ಯಾರ್ಥಿಗಳು ಶಿಸ್ತು ಮತ್ತು ಶ್ರದ್ಧೆಯನ್ನು ಪಾಲಿಸಿ, ಉತ್ತಮ ಶಿಕ್ಷಣ ಪಡೆದು ಮುಂದೆ ತಾವು ಕಲಿತ ಶಾಲೆಗೆ ಉತ್ತಮ ಹೆಸರು ಮತ್ತು ಖ್ಯಾತಿಗಳಿಸಲು ಶ್ರಮಿಸಬೇಕೆಂದು ಕರ್ನಾಟಕ ಬ್ಯಾಂಕಿನ ಮುಖ್ಯ ಮಹಾ ಪ್ರಬಂಧಕರಾದ ಶ್ರೀ. ಮಹಾಬಲೇಶ್ವರ್ ಭಟ್ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದಾರೆ.
ನಗರದ ದ.ಕ.ಜಿ.ಪ ಮಣ್ಣಗುಡ್ಡ ಶಾಲೆಯ ಸಭಾಂಗಣದಲ್ಲಿ ಬುಧವಾರ ಶೀಲ್ಡ್ ಪ್ರತಿಷ್ಠಾನದ ಆಶ್ರಯದಲ್ಲಿ ಜರಗಿದ ವಿದ್ಯಾರ್ಥಿಗಳಿಗೆ ಉಚಿತ ಕೊಡೆಗಳ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಶೀಲ್ಡ್ ಸಂಸ್ಥೆಯ ಸಮಾಜ ಸೇವಾ ಚಟುವಟಿಕೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುವ ಭರವಸೆ ನೀಡಿ ಬಳಿಕ ಬ್ಯಾಂಕಿನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಗಳ ಅನ್ವಯ 135 ವಿದ್ಯಾರ್ಥಿಗಳಿಗೆ ಉಚಿತ ಕೊಡೆಗಳ ಭಾಗ್ಯ ನೀಡಿ ಶುಭ ಹಾರೈಹಿಸಿದರು.
ಪೊಲೀಸ್ ಲೋಕಾಯ್ಕುತ ಇಲಾಖೆಯ ಉಪ ಅಧಿಕ್ಷರಾದ ಶ್ರೀ. ವಿಠಲ್ ದಾಸ್ ಪೈ ಗೌರವ ಅತಿಥಿಯಾಗಿ ಪಾಲ್ಗೊಂಡು ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ದಾರೆ ಎರೆದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳನಾಗಿ ರೂಪಿಸವ ಹೊಣೆಗಾರಿಕೆ ಇದೆ ಎಂದು ನೆನೆಪಿಸಿದರು ಮತ್ತು ಶೀಲ್ಡ್ ಪ್ರತಿಷ್ಠಾನದ ಸಮಾಜ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು.
ಬ್ಯಾಂಕಿನ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯ ಪ್ರಭಂದಕರಾದ ಶ್ರೀನಿವಾಸ್ ದೇಶಪಾಂಡೆ, ರೋಟರಿ ಕ್ಲಬ್ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ. ವಿ. ಮಲ್ಯ ಶೀಲ್ಡ್ ಪ್ರತಿಷ್ಠಾನದ ಅಧ್ಯಕ್ಷ ಧರ್ಮಿತ್ ರೈ,ಕಾರ್ಯದರ್ಶಿ ವರ್ಧನ್ ಪೈ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಶ್ರೀಮತಿ. ಜೋಯಿಸ್ ಹೆನ್‌ರೀಟ, ಸ್ವಾಗತಿಸಿದರು, ಶಿಕ್ಷಕಿ, ಶ್ರೀಮತಿ. ಶಶಿಕಲ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ, ಶ್ರೀಮತಿ. ಪುಪ್ಪಲತ ವಂದಿಸಿದರು.






