ವರದಿ : ಈಶ್ವರ ಎಂ. ಐಲ್/ ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ನಮ್ಮ ನಾಡಿನ ಪ್ರಸಿದ್ದ ಕಲೆಯಾದ ಯಕ್ಷಗಾನವನ್ನು ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ಉಳಿಸಿ ಬೆಳೆಸುವಲ್ಲಿ ಇಲ್ಲಿನ ತುಳು-ಕನ್ನಡಿಗರು ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಬಾಂಬೇ ಬಂಟ್ಸ್ ಅಸೋಸಿಯೇಶನ್ ನ ಸಾಂಸ್ಕೃತಿಕ ಸಮಿತಿಯು ಸಂಸ್ಕೃತಿಕವಾಗಿ ಅಸೋಸಿಯೇಶನ್ ಪ್ರಗತಿಯ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ನನ್ನ ಎರಡು ವರ್ಷದ ಕಾಲಾವದಿಯಲ್ಲಿ ಅರ್ಥಪೂರ್ಣ ಸಾಮಾಜಿ ಕ ಕೆಲದ ಮಾಡಿದೆ. ಇದಕ್ಕೆ ಅಸೋಸಿಯೇಶನ್ ಪದಾಧಿಕಾರಿಗಳು ಸಮಾಜಬಾಂಧವರು ಸ್ಪಂದಿಸಿದ್ದಾರೆ ಎಂದು ಬಾಂಬೇ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ ನುಡಿದರು.
ಅ. 3ರಂದು ಜುಹಿ ನಗರದ ಬಂಟ್ಸ್ ಸೆಂಟರಿನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಬಾಂಬೇ ಬಂಟ್ಸ್ ಅಸೋಸಿಯೇಶನ್ ನ ಸಾಂಸ್ಕೃರಿಕ ಸಮಿತಿಯ ಆಶ್ರಯದಲ್ಲಿ ಶ್ರೀ ಅನಂತ ಪದ್ಮನಾಭ ದಶಾವಾತಾರ ಯಕ್ಷಗಾನ ಮಂಡಳಿ ಪೆರ್ಡೂರು ಮೇಳದ ಯಕ್ಷಗಾನ ಪ್ರದರ್ಶನ ಸಭಾಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತಾನಾಡುತ್ತಿದ್ದರು.
ಸಾಂಸ್ಕೃತಿಯ ಸಮಿತಿಯ ಕಾಯ್ಯಾದ್ಯಕ್ಶ ವಿಶ್ವನಾಥ ವಿ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಎಲ್ಲಾ ಸಾಂಸ್ಕ್ರುತಿಕ ಕಾರ್ಯಕ್ರಮಗಳ ಯಸಸ್ಶಿಗೆ ಅಸೋಸಿಯೇಶನ್ ನ ಪದಾಧಿಕಾರಿಗಳ ಮತ್ತಿತರರ ಪ್ರೋತ್ಸಾಹ ಹಾಗೂ ಸಹಕಾರ ಕಾರಣ ಎಂದರು. ಮಾಜಿ ನಗರ ಸೇವಕ ಸಂತೋಶ್ ಶೆಟ್ಟಿಯವರು ಮಾತನಾಡುತ್ತಾ ಅಸೋಸಿಯೇಶನ್ ಸಮಾಜಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಯ ಕಾರ್ಯಕ್ರಮಗಳತ್ತ ತನ್ನನ್ನು ತೊಡಗಿಸಿದ್ದು ಅಬಿನಂದನೀಯ ಎಂದರು.
ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತಾಡಿಯವರು ತನ್ನ ಅಬಿಪ್ರಾಯವನ್ನು ವ್ಯಕ್ತಪಡಿಸುತ್ತಾ ಅಧ್ಯಕ್ಷರಾದ ಶ್ಯಾಮ್ ಎನ್. ಶೆಟ್ಟಿ ಯವರ ಕಾರ್ಯವೈಖರಿಗೆ ಅವರು ನಗುಮುಖವೇ ಕಾರಣ ಎಂದು ಮೆಚ್ಚಿ ಮಾತನಾಡಿದರು. ಇಂತಹ ಸಂಘಟನೆಗಳಿಂದ ನಮ್ಮ ನಾಡಿನ ಸಂಸ್ಕೃತಿ, ಕಲೆ, ಬಾಷೆ ಉಳಿಯುವಂತಾಗಿದೆ ಎಂದರು.
ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ ಎಲ್ ಶೆಟ್ಟಿ ಯವರು ಉಪಸ್ಥಿತರಿದ್ದು ಮಾತನಾಡುತ್ತಾ ಸಂಘಟನೆಗಳ ಸೇವಾ ಸೌಲಭ್ಯಗಳು ಜನಸಾಮಾನ್ಯರಿಗೆ ತಲಪುವಂತಾಗಬೇಕು ಆಗ ಮಾತ್ರ ಸಂಘಟನೆಗ ಅರ್ಥ ಬರುವುದು.ಅಸೋಸಿಯೇಶನ್ ನ ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಅಭಿಪ್ರಾಯವನ್ನು ತಿಳಿಸುತ್ತಾ ಬಂಟ್ಸ ಸೆಂಟರ್ ಸಭಾಭಾನ ಬಂಟ ಬಾಂಧವರ ಕೊಡುಗೆ, ಈ ಪರಿಸರದ ಬಂಧುಗಳು ಇದರ ಸದುಪಯೋಗ ಪಡೆಯಬೇಕು ಎಂದರು.ಗೌರವ ಕೋಶಾಧಿಕಾರಿ ಸಿಎ ಸುರೇಂದ್ರ ಶೆಟ್ಟಿ ಯವರು ಮಾತನಾಡಿ ಯಕ್ಷಗಾನವೆಂಬ ಧಾರ್ಮಿಕ ಯಜ್ನಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಅಗತ್ಯ. ಅಸೋಸಿಯೇಶನ್ ನಿರಂತರವಾಗಿ ಯಕ್ಶಗಾನ ನಾಟಕಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಎಂ. ಬಿ. ವಿಠಲ್ ರೈ, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಖಾಂದೇಶ್ ಭಾಸ್ಕರ ಶೆಟ್ಟಿ, ಮಣಿಕಂಟ ಸೇವಾ ಸಂಘದ ಟ್ರಸ್ಟಿ ರವಿ ಆರ್. ಶೆಟ್ಟಿ, ದಯಾನಂದ ಶೆಟ್ಟಿ, ಸದಾನಂದ ಶೆಟ್ಟಿ, ಶನಿಮಂದಿರದ ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಕೆ. ದಯಾನಂದ ಶೆಟ್ಟಿ, ಪ್ರಭಾಕರ ಶೆಟ್ಟಿ, ಅಸೋಸಿಯೇಶನ್ ಮಾಜಿ ಅಧ್ಯಕ್ಷರುಗಳು, ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪತ್ರಕರ್ತ ದಯಾಸಾಗರ ಚೌಟ ಕಾರ್ಯಕ್ರಮವನ್ನು ನಿರ್ವಹಿಸಿದರು.


