ಕನ್ನಡ ವಾರ್ತೆಗಳು

ಗಾಂಧಿವಾಧಿ ಮಹಾಬಲ ಆರ್.ಶೆಟ್ಟಿ ನಿಧನ.

Pinterest LinkedIn Tumblr

Mahabala_R_Shetty

ಮುಂಬಯಿ, ಅ.03 : ನಾಡಿನ ಹೆಸರಾಂತ ಸಾಹಿತಿ, ಬಂಟರ ಸಂಘ ಮುಂಬಯಿ ಇದರ ಸಕ್ರೀಯ ಸದಸ್ಯೆ, ಬಂಟರವಾಣಿಯ ಸಂಪಾದಕ ಮಂಡಳಿ ಸದಸ್ಯೆ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿ ಸದಸ್ಯೆ ಸುನೀತಾ ಎಂ.ಶೆಟ್ಟಿ ಅವರ ಪತಿ ಪೆರಾರ ಮುಂಡಬೆಟ್ಟುಗುತ್ತು ಮಹಾಬಲ ಆರ್.ಶೆಟ್ಟಿ (89.) ಇವರು ಇಂದಿಲ್ಲಿ ಶುಕ್ರವಾರ ರಾತ್ರಿ ತನ್ನ ಸ್ವನಿವಾಸದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪೆರಾರ ಮುಂಡಬೆಟ್ಟುಗುತ್ತು ಮೂಲತಃ ಮಹಾಬಲ ಶೆಟ್ಟಿ ಅವರು ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ ಇದರ ಉಪ ವ್ಯವಸ್ಥಾಪಕರಾಗಿ ನಿವೃತ್ತಗೊಂಡು ಮುಂಬಯಿ ಉಪನಗರ ಕುರ್ಲಾ ಪೂರ್ವದ ಶಿವಸೃಷ್ಠಿ ಅಲ್ಲಿನ ಸರ್ವೋದಯ ಸೊಸೈಟಿ ನಿವಾಸಿ ಆಗಿ ನಿವೃತ್ತ ಜೀವನ ಸಾಗಿಸುತ್ತಿದ್ದರು. ಅಪ್ಪಟ ಗಾಂಧಿವಾಧಿ ಆಗಿದ್ದ ಮಹಾಬಲ ಶೆಟ್ಟಿ ಅವರು ಗಾಂಧಿ ಜಯಂತಿ ದಿನವೇ ನಿಧನರಾಗಿದ್ದು ಅಚ್ಚರಿ ಮೂಡಿಸಿರುವರು. ಸಾಮಾಜಿಕ ಕಾಳಜಿಯನ್ನು ಹೊಂದಿದ್ದ ಅವರು ಸರಳ ಸಜ್ಜನಿಕೆ, ಶಿಸ್ತುಬದ್ಧ ಜೀವನಕ್ಕೆ ಪಾತ್ರರಾಗಿದ್ದು ಮೃತರು ಪತ್ನಿ ಒಂದು ಗಂಡು, ಎರಡು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮಹಾಬಲ ಶೆಟ್ಟಿ ನಿಧನಕ್ಕೆ ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಬಾಂಬೇ ಬಂಟ್ಸ್ ಎಸೋಸಿಯೇಶನ್‌ನ ಅಧ್ಯಕ್ಷ ಶ್ಯಾಮ ಎನ್.ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತರಾಮ ಬಿ.ಶೆಟ್ಟಿ, ಗೌ| ಪ್ರ| ಸಂಪಾದಕ ಪ್ರೇಮನಾಥ ಬಿ.ಶೆಟ್ಟಿ ಸೇರಿದಂತೆ ಹತ್ತಾರು ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ರಾತ್ರಿಯೇ ಕುರ್ಲಾದಲ್ಲಿನ ರುಧ್ರಭೂಮಿಯಲ್ಲಿ ನೆರವೇರಿಸಲಾಯಿತು. ಎಂದು ಕುಟುಂಬ ಮೂಲಗಳು ತಿಳಿಸಿದೆ.

Write A Comment