ಕನ್ನಡ ವಾರ್ತೆಗಳು

ಬೈಂದೂರು: ಪಾದಾಚಾರಿ ಮಹಿಳೆಗೆ ಲಾರಿ ಡಿಕ್ಕಿ-ಮಹಿಳೆ ಸಾವು

Pinterest LinkedIn Tumblr

Kambadakone_Accident_Lady Death

ಕುಂದಾಪುರ: ಇಲ್ಲಿನ ಕಂಬದಕೋಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಸುಮಾರು 7.30ಕ್ಕೆ  ಮಹಿಳೆಯೊರ್ವಳು ಅಕ್ಕಿಯನ್ನು ಹೊತ್ತುಕೊಂಡು ರಸ್ತೆ ದಾಟುವಾಗ ಕಂಟೈನರ್ ಲಾರಿ ಡಿಕ್ಕಿ ಹೊಡೆದು  ಮಹಿಳೆ ಗಂಭೀರ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಲು ಕೊಂಡೊಯ್ಯುವ ಮಾರ್ಗ ಮಧ್ಯ ಸಾವನ್ನಪ್ಪಿದ್ದರು. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೃತ ಪಟ್ಟ ಮಹಿಳೆ ಕಂಬದಕೋಣೆ ನಿವಾಸಿ ಗಿರಿಜಾ ( 50 ) ವರ್ಷ ಎಂದು ಗುರುತಿಸಲಾಗಿದೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment