ಕನ್ನಡ ವಾರ್ತೆಗಳು

ಮನಪಾ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ : ನಗರದ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ

Pinterest LinkedIn Tumblr

Dc_meeting_swgpol_1

ಮಂಗಳೂರು, ಸೆ.22: ಮಂಗಳಾ ಸ್ಟೇಡಿಯಂ ನಲ್ಲಿರುವ ನಗರ ಪಾಲಿಕೆಯ 28 ವರ್ಷಗಳ ಹಿಂದಿನ ಈಜುಕೊಳದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿ ಬೆಂಗಳೂರಿನ ಈಜುಕೊಳಗಳನ್ನು ಅಧ್ಯಯನ ಮಾಡಲು ಮಂಗಳೂರು ಮಹಾ ನಗರ ಪಾಲಿಕೆ ನಿರ್ಧರಿಸಿದೆ. ಮಹಾನಗರ ಪಾಲಿಕೆಯ ಈಜುಕೊಳದ ಬಳಿ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ಅಧ್ಯಕ್ಷತೆಯಲ್ಲಿ ಶಾಸಕರು, ಕಾರ್ಪೊರೇಟರ್‌ಗಳು, ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ಈಜುಕೊಳದ ಸುತ್ತಲಿನ ಹಳೆಯ ಮೊಸಾಕ್ ಟೈಲ್ಸ್‌ಗಳನ್ನು 25 ಲಕ್ಷ ರೂ. ವೆಚ್ಚದಲ್ಲಿ ಬದ ಲಾವಣೆ, 15 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಟಾಯ್ಲೆಟ್ ಬ್ಲಾಕ್ ನಿರ್ಮಾಣ, ಸೋರುತ್ತಿರುವ ಛಾವಣಿ ದುರಸ್ತಿ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಈಜುಕೊಳದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿ ಮನಪಾದ ತಂಡವೊಂದು ಬೆಂಗಳೂರಿಗೆ ತೆರಳಿ, ಅಲ್ಲಿಯ ಈಜು ಕೊಳಗಳನ್ನು ಅಧ್ಯಯನ ಮಾಡಿ ವರದಿ ನೀಡಲು ನಿರ್ಧರಿಸಲಾಯಿತು.

Dc_meeting_swgpol_2

ಮಹಾನಗರ ಪಾಲಿಕೆಯ ಕೇಂದ್ರ ಕಟ್ಟಡ ವಿಸ್ತರಣೆ ಮತ್ತು ನವೀಕರಣಕ್ಕೆ ಎರಡು ಕೋಟಿ ರೂ., ಒಂದು ಕೋಟಿ ರೂ. ವೆಚ್ಚದಲ್ಲಿ ಅಳಕೆ ಮತ್ತು ಕಾವೂರು ಮಾರುಕಟ್ಟೆ ಅಭಿವೃದ್ಧಿಗೆ ಅನುದಾನ ನಿಗದಿ ಮಾಡಲಾಗಿದೆ. ಸುರತ್ಕಲ್ ಉಪಕಚೇರಿ ಕಟ್ಟಡ ಅಭಿವೃದ್ಧಿಗೆ 2.25 ಕೋಟಿ ರೂ. ಅಂದಾಜುಪಟ್ಟಿ ತಯಾರಿ ಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪುರಭವನಕ್ಕೆ ಹೊಸ ಪ್ರಸ್ತಾವನೆಗೆ ಅನುಮೋದನೆ :

ಮಂಗಳೂರು ಪುರಭವನ ನವೀಕರಣ ಕಾಮಗಾರಿಯನ್ನು ಅಕ್ಟೋಬರ್ ಅಂತ್ಯಕ್ಕೆ ಮುಗಿಸಿ, ನ.1ರಂದು ಸಾರ್ವಜನಿಕರಿಗೆ ಬಿಟ್ಟು ಕೊಡಲಾಗುವುದು ಎಂದು ಮೇಯರ್ ಜೆಸಿಂತಾ ಆಲ್ಫ್ರೆಡ್ ತಿಳಿಸಿದರು. ಪುರಭವನದ ಹೊರಾಂಗಣದಲ್ಲಿ ಸಿಸಿ ಕ್ಯಾಮೆರಾ, ಡಾಮರೀಕರಣ, ಇಂಟರ್‌ಲಾಕ್, ಒಳಚರಂಡಿ ಮತ್ತಿತರ ಕಾಮಗಾರಿಗೆ 92 ಲಕ್ಷ ರೂ. ಮೊತ್ತದ ಹೊಸ ಪ್ರಸ್ತಾವನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

Dc_meeting_swgpol_3

ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಕಾರ್ಪೊರೇಟರ್‌ಗಳಾದ ದೀಪಕ್ ಪೂಜಾರಿ, ಹರಿನಾಥ್, ಶಶಿಧರ ಹೆಗ್ಡೆ, ಲ್ಯಾನ್ಸಿ ಲೋಟ್ ಪಿಂಟೊ, ಕೇಶವ ಮರೋಳಿ, ಮನಪಾ ಆಯುಕ್ತ ಎಚ್.ಎನ್.ಗೋಪಾಲಕೃಷ್ಣ, ಅಧೀಕ್ಷಕ ಎಂಜಿನಿಯರ್ ಶಿವಶಂಕರ್ ಸ್ವಾಮಿ, ಕಾರ್ಯಕಾರಿ ಎಂಜಿನಿಯರ್‌ಗಳಾದ ರಾಜಶೇಖರ್, ಲಿಂಗೇಗೌಡ ಚರ್ಚೆಯಲ್ಲಿ ಭಾಗವಹಿಸಿದ್ದರು.

ಪ್ರಮುಖ ರಸ್ತೆಗಳಿಗೆ ಚರಂಡಿ, ಫುಟ್‌ಪಾತ್ ನಿರ್ಮಾಣ:

ಮಂಗಳೂರು ನಗರದ ಪ್ರಮುಖ ರಸ್ತೆಗಳಿಗೆ ಮೂರು ತಿಂಗಳೊಳಗೆ ಚರಂಡಿ ಹಾಗೂ ಫುಟ್‌ಪಾತ್ ನಿರ್ಮಿಸುವ ಉದ್ದೇಶದಿಂದ ತಕ್ಷಣ ಮಂಗಳೂರು ಮಹಾನಗರ ಪಾಲಿಕೆಯ ವಿಶೇಷ ಸಭೆ ಕರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಪ್ರಮುಖ ರಸ್ತೆಗಳಿರುವ ಶಿಕ್ಷಣ ಸಂಸ್ಥೆಗಳ ಬಳಿಯಲ್ಲೇ ಆಳ ಚರಂಡಿಗಳಿವೆ. ಹೆತ್ತವರು ಪುಟಾಣಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುತ್ತಾರೆ. ಚರಂಡಿ, ುಟ್‌ಪಾತ್ ಸಮಸ್ಯೆಗೆ ಪರಿಹಾರ ನೀಡದೆ, ಬೇರೆ ಅಭಿವೃದ್ಧಿ ಕೆಲಸ ಮಾಡುವುದು ಸರಿಯಲ್ಲ ಎಂದು ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಹೇಳಿದರು.

ಪಾಲಿಕೆಯಲ್ಲಿ ಅನುದಾನಕ್ಕೆ ಸಮಸ್ಯೆ ಇಲ್ಲದಿದ್ದರೂ, ುಟ್‌ಪಾತ್ ನಿರ್ಮಾಣಕ್ಕೆ ವಿಳಂಬ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮೂರು ತಿಂಗಳ ಗುರಿಯೊಂದಿಗೆ ಶೀಘ್ರ ಪಾಲಿಕೆಯ ವಿಶೇಷ ಸಭೆ ಕರೆದು ನಿರ್ಣಯ ಕೈಗೊಳ್ಳುವಂತೆ ನೀಡಿದ ಸಲಹೆಗೆ ಸಭೆ ಸಮ್ಮತಿಸಿತು.

Write A Comment