ಉಳ್ಳಾಲ. ಸೆ, 18 : ದ.ಕ ಜಿಲ್ಲಾ ಪಂಚಾಯತ್ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮತ್ತು ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ಬಜಿಪೆ ಇದರ ಆಶ್ರಯದಲ್ಲಿ ಸಂತ ಜೋಸೆಫ್ ಪಿ.ಯು ಕಾಲೇಜು ಮೈದಾನದಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ 14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಉಳ್ಳಾಲ ಹಝ್ರತ್ ಸಯ್ಯಿದ್ ಮದನಿ ಆಂಗ್ಲ ಮಾಧ್ಯಮ ಶಾಲಾ ತಂಡವು ಸುಳ್ಯ ಗಾಂಧಿನಗರ ಸಕರಾರಿ ಶಾಲೆಯ ತಂಡವನ್ನು 1-0 ಗೋಲಿನಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿದೆ. ಅಕ್ಟೋಬರ್ನಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆಯುವ ವಿಭಾಗ ಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.
ಈ ತಂಡವನ್ನು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಹಾಗೂ ಸಯ್ಯಿದ್ ಮದನಿ ದರ್ಗಾ ಕಮಿಟಿಯ ಅಧ್ಯಕ್ಷರಾದ ಹಾಜಿ ಯು.ಎಸ್ ಹಂಝ, ಟ್ರಸ್ಟ್ ಉಪಾಧ್ಯಕ್ಷ, ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಮ್ ಹಾಗೂ ಸಮಿತಿ ಸದಸ್ಯರು ಅಭಿನಂದಿಸಿದರು.
ಶಾಲಾ ಆಡಳಿತಾಧಿಕಾರಿ ಅಬ್ದುಲ್ ಲತೀಫ್, ಮುಖ್ಯೋಪಾಧ್ಯಾಯಿನಿ ಫಿಲೋಮಿನ, ಮುಖ್ಯೋಪಾಧ್ಯಾಯ ಪಿ.ಬಿ ಇಮ್ತಿಯಾಝ್, ಸಹ ಮುಖ್ಯೋಪಾಧ್ಯಾಯ ರಸೂಲ್ ಖಾನ್, ಬನಾತ್ ಪದವಿ ಕಾಲೇಜು ಪ್ರಾಂಶುಪಾಲರಾದ ಝಾಹಿದ ಜಲೀಲ್, ದೈಹಿಕ ಶಿಕ್ಷಕರಾದ ಖಾಲಿದ್, ಸುನಿತ, ಮಾಲಾಶ್ರಿ, ಹಾಗೂ ಶಾಲಾ ಶಿಕ್ಷಕವೃಂದ ಮಕ್ಕಳನ್ನು ಅಭಿನಂದಿಸಿದರು.