ಕನ್ನಡ ವಾರ್ತೆಗಳು

ತುಳುನಾಡ ರಕ್ಷಣಾ ವೇದಿಕೆಯಿಂದ ಜಪ್ಪುಮಹಾಕಾಳಿ ಪಡ್ಪುವಿನಲ್ಲಿ ರಸ್ತೆ ತಡೆ ಪ್ರತಿಭಟನೆ.

Pinterest LinkedIn Tumblr

Tulu_nadu_prtest_1

ಮಂಗಳೂರು,ಸೆ.12 : ಜಪ್ಪು ಮಹಾಕಾಳಿ ಪಡ್ಪು ರಸ್ತೆ ದುರಸ್ತಿ, ರೈಲ್ವೆ ಕೆಳಸೇತುವೆ ನಿರ್ಮಾಣ, ಒಳಚರಂಡಿ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಬೃಹತ್ ರಸ್ತೆ ತಡೆ ಪ್ರತಿಭಟನೆಯನ್ನು ಮಾಡಲಾಯಿತು. ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಮಾತನಾಡಿ, ಕಳೆದ ಹಳವಾರು ವರ್ಷಗಳಿಂದ ದಿನವೊಂದಕ್ಕೆ 46 ರೈಲುಗಳು ಜಪ್ಪು ಮೂಲಕ ಹಾದುಹೋಗುತ್ತಿದ್ದು. ನಿರಂತರ ರೈಲ್ವೆ ಗೇಟ್ ಹಾಕಲಾಗುತ್ತಿದೆ, ಇದರಿಂದಾಗಿ ವಾಹನ ಚಾಲಕರು ಸಾರ್ವಜನಿಕರು ಆಂಬ್ಯುಲೆನ್ಸ್‌ಗಳು , ವಿಧ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ,

ಇದರ ವಿರುದ್ದವಾಗಿ ತುರವೇ ಹಲವಾರು ಹೋರಾಟಗಳನ್ನು ಮಾಡಿದೆ, ಆದರೆ ಅಧಿಕಾರಿಗಳು , ಜನಪ್ರತಿನಿಧಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ, ಹಾಗೂ ಇದೀಗ ಇಲ್ಲಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಸಂಚಾರಕ್ಕೆ ತೊಂದರೆ ನೀಡುತ್ತಿದೆ, ಮುಂದಿ 15 ದಿನಗಳಲ್ಲಿ ಸಂಬಂದಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸದಿದ್ದರೆ ಜಪ್ಪು ಬಂದ್ ,ರೈಲು ತಡೆ, ಸೇರಿದಂತೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

Tulu_nadu_prtest_2

ಸಭೆಯನ್ನುದ್ದೇಶಿಸಿ ತುರವೇ ಯುವ ಘಟಕದ ರಾಜ್ಯಾಧ್ಯಕ್ಷರಾದ ಮೋಹನ್ ದಾಸ್ ರೈ , ತುರವೇ ಮಂಗಳೂರು ನಗರ ಯುವ ಘಟಕದ ಅಧ್ಯಕ್ಷರಾದ ಹರೀಶ್ ಶೆಟ್ಟಿ, ಸ್ವಾತಂತ್ರ್ಯೋತ್ಸವ ಸಮಿತಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಅಶೋಕ್, ತುರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿರಾಜ್ ಅಡ್ಕರೆ ಮಾತನಾಡಿದರು ,

ಸಭೆಯಲ್ಲಿ ಸೌತ್ ಸ್ಪೋರ್ಟ್‌ನ ನವಾಝ್, ಆದಿಮಹೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ದಿನೇಶ್,ತೀಯಾ ಸಮಾಜದ ಮುಖಂಡ ರಾಜ್ ಗೋಪಾಲ್ , ತುರವೇ ಮುಖಂಡರಾದ ಜೀವನ್ ವಿಜಯಾನಂದ ಗುರೂಜಿ, ಜ್ಯೋತಿಕಾ ಜೈನ್,ರಕ್ಷಿತ್ ಬಂಗೇರ, ಅಶೋಕ್, ಪುಷ್ಪರಾಜ್, ಶ್ರೀಕಾಂತ್ ಸಾಲಿಯಾನ್, ಆನಂದ ಅಡ್ಯಾರ್, ಮುಂತಾದ ತುರವೇ ಮುಖಂಡರು ಉಪಸ್ಥಿತರಿದ್ದರು

Write A Comment