ಕನ್ನಡ ವಾರ್ತೆಗಳು

ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯವರ “ಸುಲ್ತಾನ್ ವಾಚ್ಸ್” ಶೋರೂಂ ಶುಭಾರಂಭ

Pinterest LinkedIn Tumblr

Sulthan_Watch_Showrm_1

ಮಂಗಳೂರು, ಸೆ.12: ಚಿನ್ನ ಹಾಗೂ ವಜ್ರಾಭರಣಗಳ ಉದ್ಯಮದಲ್ಲಿ ಖ್ಯಾತಿ ಪಡೆದಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯವರ ಕೈಗಡಿಯಾರಗಳ ನೂತನ ಶೋರೂಂ ‘ಸುಲ್ತಾನ್ ವಾಚ್ಸ್’ ಶುಕ್ರವಾರ ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ಶುಭಾರಂಭಗೊಂಡಿತು. ಆರೋಗ್ಯ ಸಚಿವ ಯು.ಟಿ.ಖಾದರ್ ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮೊಹ್ತೆಶಾಂನ ನಿರ್ದೇಶಕ ಎಸ್.ಎಂ.ಸವೂದ್, ಕಾರ್ಪೊರೇಟರ್ ನವೀನ್ ಡಿಸೋಜ, ಸುಲ್ತಾನ್ ಸಂಸ್ಥೆಯ ಅಧ್ಯಕ್ಷ ಕುಂಞಿ ಅಹ್ಮದ್ ಹಾಜಿ, ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ರವೂಫ್, ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹೀಂ, ಸಂಸ್ಥೆಯ ಜಿಎಂ ಉನ್ನಿತಾನ್ ಮೊದಲಾದವರು ಉಪಸ್ಥಿತರಿದ್ದರು.

Sulthan_Watch_Showrm_2 Sulthan_Watch_Showrm_3 Sulthan_Watch_Showrm_4 Sulthan_Watch_Showrm_5 Sulthan_Watch_Showrm_6 Sulthan_Watch_Showrm_7 Sulthan_Watch_Showrm_8 Sulthan_Watch_Showrm_9 Sulthan_Watch_Showrm_10 Sulthan_Watch_Showrm_11 Sulthan_Watch_Showrm_12 Sulthan_Watch_Showrm_13 Sulthan_Watch_Showrm_14 Sulthan_Watch_Showrm_15 Sulthan_Watch_Showrm_16

ಈ ನೂತನ ಮಳಿಗೆ ರ್ಯಾಡೊ, ಟಿಸೊ, ಫಾಸಿಲ್, ಸ್ವಾಚ್, ವೆಸ್ಟರ್, ಕೆಲ್ವಿನ್‌ಕ್ಲಿನ್, ಮೊರೆಲ್ಯಾಟೊ, ವಿಕ್ಟರಿ ನಾಕ್ಸ್, ಟೈಟಾನ್, ಸೀಕೊ, ವಾಟರ್‌ಮ್ಯಾನ್, ಸ್ಕೇಜನ್, ರೋಟರಿ ಮೊದಲಾದ ಪ್ರಖ್ಯಾತ ಬ್ರಾಂಡ್‌ನ ವಾಚ್‌ಗಳ ಅಪೂರ್ವ ಸಂಗ್ರಹವನ್ನೇ ಹೊಂದಿದೆ.

ಉದ್ಘಾಟನಾ ಕೊಡುಗೆ – ಶೇ.10 ರಿಯಾಯಿತಿ :

‘ಸುಲ್ತಾನ್ ವಾಚ್ಸ್’ ಉದ್ಘಾಟನಾ ಕೊಡುಗೆಯಾಗಿ ಗ್ರಾಹಕರಿಗೆ ಶೇ.10 ರಿಯಾಯಿತಿ ದರದಲ್ಲಿ ವಾಚ್‌ಗಳು ದೊರೆಯಲಿವೆ. ಈ ಕೊಡುಗೆಯು ಸೆಪ್ಟಂಬರ್ 30ವರೆಗೆ ಲಭ್ಯವಿರುತ್ತದೆ ಎಂದು ಶೋರೂಂ ಮಾರುಕಟ್ಟೆ ವ್ಯವಸ್ಥಾಪಕ ಆಸಿಫ್ ಇಕ್ಬಾಲ್ ತಿಳಿಸಿದ್ದಾರೆ.

Write A Comment