ಕನ್ನಡ ವಾರ್ತೆಗಳು

ಅಕ್ರಮ ಮರಳುಗಾರಿಕೆ ಆಡ್ಡಕ್ಕೆ ದಾಳಿ: 5 ಲಾರಿ ಸಹಿತ 1 ಜೆಸಿಬಿ ಪೊಲೀಸರ ವಶ

Pinterest LinkedIn Tumblr

sand_mining_2

ಬಂಟ್ವಾಳ, ಸೆ.11: ಪಾಣೆಮಂಗಳೂರಿನ ನೇತ್ರಾವತಿ ಸೇತುವೆಯಡಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಮರಳು ಅಡ್ಡೆಗೆ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ಹಾಗೂ ಪೊಲೀಸರು ಗುರುವಾರ  ದಾಳಿ ನಡೆಸಿದ್ದಾರೆ.

ಮರಳು ತುಂಬಿಸಿದ್ದ 5 ಲಾರಿ, 1 ಜೆಸಿಬಿ ಯಂತ್ರ ಹಾಗೂ ನದಿ ದಡದಲ್ಲಿ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಹಾಗೂ ಸೇತುವೆಯ ಅಡಿ ಭಾಗದಲ್ಲೇ ಕಾನೂನು ಉಲ್ಲಂಘಿಸಿ ಮರಳುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ತಹಶೀಲ್ದಾರ್ ಈ ಕ್ರಮ ಕೈಗೊಂಡಿದ್ದಾರೆ.

ಎರಡು ದಿನಗಳ ಹಿಂದೆ ತಾನು ಬಂದು ಮರಳುಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದರೂ ಮರಳುಗಾರಿಕೆ ಮುಂದುವರಿಸಿರುವ ಹಿನ್ನೆಲೆಯಲ್ಲಿ ದಿಢೀರ್ ಕಾರ್ಯಾ ಚರಣೆ ನಡೆಸಲಾಗಿದೆ. ಮರಳುಗಾರಿಕೆ ನಡೆಸುತ್ತಿ ದ್ದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದರು.

ಲಾರಿ ಚಾಲಕರು ಹಾಗೂ ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದು, ಸ್ಥಳದಲ್ಲಿದ್ದ ಸೊತ್ತುಗಳನ್ನು ವಶಪಡಿ ಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Write A Comment