ಉಡುಪಿ: ಉದ್ಯಾವರದ ಶಿಕ್ಷಕಿಯೊಬ್ಬರ ಮೊಬೈಲಿಗೆ ಅಶ್ಲೀಲ ಎಸ್.ಎಂ.ಎಸ್ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ಕಾಪು ಪೊಲೀಸರು ಸೆ. 10ರಂದು ಬಂಧಿಸಿದ್ದಾರೆ.
ಉದ್ಯಾವರ ಬೊಳ್ಜೆ ನಿವಾಸಿ ಅಕ್ಷಯ್ ಕುಂದರ್ (20) ಬಂಧಿತ ಆರೋಪಿ.
ಈತ ಉದ್ಯಾವರದ ನಿವಾಸಿ ಶಿಕ್ಷಕಿಯ ಮೊಬೈಲ್ ನಂಬರ್ ಪಡೆದುಕೊಂಡ ಈತ ಕೆಲವು ದಿನಗಳಿಂದ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದನು. ಈ ಬಗ್ಗೆ ಶಿಕ್ಷಕಿ ಕರೆ ಮಾಡಿ ವಿಚಾರಿಸಿದಾಗ ಅವರಿಗೆ ಜೀವ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.ಘಟನೆಯಿಂದ ಬೇಸತ್ತ ಶಿಕ್ಷಕಿ ಕಾಪು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಕಾಪು ಪೊಲೀಸರು ಈ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಲ್ಪೆ ಬಂದರ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಕಾಪು ಠಾಣೆ ಉಪನಿರೀಕ್ಷಕ ಜಗದೀಶ್ ರೆಡ್ಡಿ ನೇತೃತ್ವದಲ್ಲಿ ಎ.ಎಸ್.ಐಗಳಾದ ಶೀಧರ ನಂಬಿಯಾರ್, ಜಯಶೀಲ ಮತ್ತು ಸಿಬ್ಬಂದಿಗಳಾದ ಮಹಾಬಲ ಶೆಟ್ಟಿಗಾರ್, ಕೃಷ್ಣ ಪೂಜಾರಿ ಮತ್ತು ಆನಂದ್ ಕಾರ್ಯಾಚರಣೆಯಲ್ಲಿದ್ದರು.
ಬಂಧಿತ ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಬಂಧಿತನಿಗೆ ನ್ಯಾಯಾಲಯವು ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಿದೆ.