ಕನ್ನಡ ವಾರ್ತೆಗಳು

ರಾಮಕೃಷ್ಣ ಮಠದಲ್ಲಿ ಶ್ರದ್ಧಾ ವಿಚಾರಗೋಷ್ಠಿ ಉದ್ಘಾಟನೆ

Pinterest LinkedIn Tumblr

Ramkrshna_workshop_1

ಮಂಗಳೂರು,ಸೆ.09: ಕೆಲವು ಶತಮಾನಗಳಿಂದ ಪಾಶ್ಚಾತ್ಯರಲ್ಲಿ‌ ಅನಾಗರಿಕ ಬಡದೇಶವೆಂದು ಮುದ್ರೆಯೊತ್ತಲ್ಪಟ್ಟಿದ್ದ ಭಾರತವು ತನ್ನ ಗೌರವವನ್ನು ಮತ್ತೆ ಪಡೆಯಲಾರಂಭಿಸಿದ್ದು 1893 , ಸೆಪ್ಟೆಂಬರ್ 11ರಂದು. ಈ ಯಶಸ್ವೀ ಕಾರ್ಯಕ್ಕೆ ಕಾರಣರಾದವರು ಭಾರತಾಂಬೆಯ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರು.

ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮೀಜೀಯವರು‌ ಅಂದು ಭಾರತದ ನಿಜ ಮಹಿಮೆಯನ್ನು ಸಾರಿ ಭಾರತೀಯ ಜ್ಞಾನಕ್ಕೆ, ಸನಾತನ ಸಂಸ್ಕೃತಿಗೆ ಪಾಶ್ಚಾತ್ಯ ದೇಶಗಳು ತಲೆಬಾಗುವಂತೆ ಮಾಡಿದ ಸೆಪ್ಟೆಂಬರ್ 11 ಪ್ರತಿಕವಾಗಿ ಮಂಗಳೂರಿನ ರಾಮಕೃಷ್ಣ ಮಠವು ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸೆಪ್ಟೆಂಬರ್ 9 ರಂದು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಶ್ರದ್ಧಾ ಎಂಬ ವಿಚಾರಗೋಷ್ಠಿಯನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಪರಮಪೂಜ್ಯ ಸ್ವಾಮಿ ಸುವೀರಾನಂದಜೀ ಮಹಾರಾಜ್ (ಸಹ ಕಾರ್ಯದರ್ಶಿಗಳು, ರಾಮಕೃಷ್ಣ ಮಠ, ಮಿಷನ್, ಬೇಲೂರು ಮಠ, ಹೌರಾ, ಪಶ್ಚಿಮ ಬಂಗಾಳ)ರವರುಜ್ಯೋತಿ ಬೆಳಗಿಸಿ ವಿಚಾರಗೋಷ್ಠಿಯನ್ನು ಉದ್ಘಾಟಿಸಿದರು.

Ramkrshna_workshop_2 Ramkrshna_workshop_3 Ramkrshna_workshop_4 Ramkrshna_workshop_5 Ramkrshna_workshop_6 Ramkrshna_workshop_7 Ramkrshna_workshop_8 Ramkrshna_workshop_9

ಸ್ವಾಮೀಜೀಯವರು ಜ್ಞಾನವು ಅನುಷ್ಠಾನಕ್ಕೆ ಬಂದಾಗ ನಮ್ಮ ವಿದ್ಯಾಭ್ಯಾಸವು ಸಾರ್ಥಕವಾಗುತ್ತದೆ‌ ಎಂಬುದನ್ನು ಸ್ವಾಮಿ ವಿವೇಕಾನಂದರ ಮಾತುಗಳೊಂದಿಗೆ ವಿವರಿಸಿದರು. ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ವಿಜಯ ಸಂಕೇಶ್ವರ್‌ರವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಿ, ಅನೇಕ ಅಡಚಣೆಗಳನ್ನು ಎದುರಿಸಿ ತಮ್ಮ ಸಂಸ್ಥೆಯನ್ನು ಬೆಳೆಸಿದ ರೀತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ವಿದ್ಯಾರ್ಥಿಗಳು ಪ್ರಾಣಾಯಾಮ, ಯೋಗ‌ಆಚರಿಸುವಂತೆ ಮನವಿ ಮಾಡಿಕೊಂಡರು. ವಿಶೇಷ ಆಹ್ವಾನಿತರಾದಕ್ಯಾ.ಗಣೇಶ್‌ಕಾರ್ಣಿಕ್‌ರವರು ವಿದ್ಯಾರ್ಥಿಗಳನ್ನು ವಿಚಾರಗೋಷ್ಠಿಗಾಗಿ ಸ್ಫೂರ್ತಿಗೊಳಿಸಿದರು. ಇಂದಿನ ವಿಚಾರಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವ ಪೂಜ್ಯ ಸ್ವಾಮಿ ಸರ್ವಸ್ಥಾನಂದಜೀ ಮಹಾರಾಜ್ (ಅಧ್ಯಕ್ಷರು, ರಾಮಕೃಷ್ಣ‌ಆಶ್ರಮ, ರಾಜಕೋಟ್), ಶ್ರೀ ಬಿ.ಎಸ್.ಎನ್.ಮೂರ್ತಿ, ಶ್ರೀ ರಘೋತ್ತಮರಾವ್‌ರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Write A Comment