ಕನ್ನಡ ವಾರ್ತೆಗಳು

ಮಾರ್ಚ್‌ನಲ್ಲಿ ಲೇಡಿಗೋಶನ್ ನೂತನ ಕಟ್ಟಡ ಸಾರ್ವಜನಿಕ ಸೇವೆಗೆ : ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ

Pinterest LinkedIn Tumblr

Dc_Press_Meet_2

ಮಂಗಳೂರು ಸೆಪ್ಟೆಂಬರ್ 03 : ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ಉಳಿಕೆ ಕಾಮಗಾರಿಯನ್ನು ತ್ವರಿತಗೊಳಿಸಲು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಗುತ್ತಿಗೆದಾರರಾದ ಬೆಂಗಳೂರಿನ ಶ್ರೀಕೃಷ್ಣ ಶೆಲ್ಟರ್‍ಸ್ ಸಂಸ್ಥೆಯವರಿಗೆ ಸೂಚಿಸಿದ್ದಾರೆ.

ಅವರು ಇಂದು ಸರ್ಕಾರಿ ಲೇಡಿಗೊಶನ್ ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿಯನ್ನು ಪರಿಶಿಲಿಸಿ ನಂತರ ಎಮ್.ಆರ್.ಪಿ.ಎಲ್. ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಕಾಮಗಾರಿ ಪೂರ್ಣಗೊಳಿಸುವ ಕುರಿತು ಹಾಗೂ ಉಳಿಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ ಚರ್ಚಿಸಿದರು.

ಸರ್ಕಾರಿ ಲೇಡಿಗೊಶನ್ ಅಸ್ಪತ್ರೆ ನೂತನ ಕಟ್ಟಡ ಕಾಮಗಾರಿಯು 2013ರ ಮಾರ್ಚ್ ನಲ್ಲಿ ಆರಂಭಗೊಂಡು 2014ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಬೇಕಿತ್ತು, ಆದರೆ ಅನುದಾನದ ಕೊರತೆಯಿಂದಾಗಿ ಕಾಮಗಾರಿ ವಿಳಂಬವಾಗಿತ್ತು. ಇದೀಗ ಎಮ್.ಆರ್.ಪಿ.ಎಲ್. ಸಂಸ್ಥೆ ರೂ.10 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ರೂ.10 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ನೆಲ ಅಂತಸ್ತು, ಮೊದಲಂತಸ್ತು, ಎರಡನೆ ಅಂತಸ್ತು ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ ಸ್ಲಾಬ್‌ಗಳನ್ನು ಅಳವಡಿಸುವುದು ಮುಂತಾದ ಕೊನೆ ಹಂತದ ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಜಿಲ್ಲಾಧಿಕಾರಿಗಳಿಗೆ ಭೂ ಸೇನಾ ನಿಗಮದ ರಾಜೇಂದ್ರ ಕಲ್ಬಾವಿ ತಿಳಿಸಿದರು.

ಲೇಡಿಗೊಶನ್ ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿ ವೆಚ್ಚ ರೂ.21.70ಕೋಟಿಗಳಾಗಿದ್ದು ಎಮ್.ಆರ್.ಪಿ.ಎಲ್. ಸಂಸ್ಥೆ ಸಂಪೂರ್ಣ ವೆಚ್ಚವನ್ನು ಭರಿಸಲಿದ್ದು ಈಗಾಗಲೇ ರೂ.10 ಕೋಟಿ ಅನುದಾನ ಬಿಡುಗಡೆಯಾಗಿ ಪೂರ್ಣವೆಚ್ಚವಾಗಿದೆ. ಉಳಿಕೆ ಕಾಮಗಾರಿಗೆ ನವದೆಹಲಿಯ ಒ.ಎನ್.ಜಿ.ಸಿ. ಯು ರೂ. 9 ಕೋಟಿ ಅನುದಾನ ಶೀಘ್ರ ಬಿಡುಗಡೆ ಮಾಡುವುದಾಗಿ ಒಪ್ಪಿದೆ ಎಂದು ಎಮ್.ಆರ್.ಪಿ.ಎಲ್. ಅಧಿಕಾರಿ ಕೆ.ಲಕ್ಷ್ಮೀನಾರಾಯಣ ಅವರು ತಿಳಿಸಿದರು.

ಸಭೆಯಲ್ಲಿ ಸರ್ಕಾರಿ ಲೇಡಿಗೊಶನ್ ಆಸ್ಪತ್ರೆಯ ಅಧಿಕ್ಷಕಿ ಡಾ. ಶಕುಂತಳಾ, ಎಮ್.ಆರ್.ಪಿ.ಎಲ್. ಬಿ.ಹೆಚ್.ವಿ.ಪ್ರಸಾದ್, ಎಮ್.ವೆಂಕಟೇಶ್,ವೀಣಾ ಎಮ್.ಶೆಟ್ಟಿ, ಮತ್ತು ಎಮ್. ಕರ್ಮರಾಮ್ ಮುಂತಾದವರು ಭಾಗವಹಿಸಿದ್ದದರು.

Write A Comment