ಕನ್ನಡ ವಾರ್ತೆಗಳು

ಸಪ್ಟಂಬರ್ 5ರಂದು ಕಲ್ಕೂರ ಪ್ರತಿಷ್ಠಾನದಿಂದ ಶ್ರೀ ಕ್ಷೇತ್ರ ಕದ್ರಿಯಲ್ಲಿ ರಾಷ್ಟ್ರೀಯ  ಮಕ್ಕಳ ಉತ್ಸವ – ಶ್ರೀಕೃಷ್ಣ ವೇಷ ಸ್ಪರ್ಧೆ

Pinterest LinkedIn Tumblr

Kalkura_krishna_Press_1

ಮಂಗಳೂರು: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು‌ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ಮೂರು ದಶಕಗಳಿಂದ ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ- ಶ್ರೀ ಕೃಷ್ಣ ವೇಷ ಸ್ಪರ್ಧೆ” ಯನ್ನು ಸಪ್ಟಂಬರ್ 5, ಶನಿವಾರ ಕೃಷ್ಣಾಷ್ಟಮಿಯಂದು ಕದ್ರಿ ಶ್ರೀ ಮಂಜುನಾಥದೇವಸ್ಥಾನದಲ್ಲಿ ‌ಏರ್ಪಡಿಸಲಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಎಸ್. ಪ್ರದೀಪ್ ಕುಮಾರ ಕಲ್ಕೂರ ಅವರು ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ‌ಅಪರಾಹ್ನ 1ರಿಂದ ಸಂಜೆ 7ರತನಕ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಒಟ್ಟು 8 ವೇದಿಕೆಗಳಲ್ಲಿ ಏಕ ಕಾಲದಲ್ಲಿ‌ ಆಯೋಜಿಸಲಾಗಿದೆ. ಮತ್ತು ಮಧ್ಯಾಹ್ನ 12ರಿಂದರಾತ್ರಿ 12ರವರೆಗೆ ವಿವಿಧ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿಜೋಡಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರವ್ಯಾಪಿ ಮಾನ್ಯತೆಗೊಂಡ ಶ್ರೀ ಕೃಷ್ಣವೇಷ ಸ್ಪರ್ಧೆಗಳಲ್ಲಿ ಈ ಬಾರಿ ವಿಶೇಷವಾಗಿ ಶ್ರೀಕೃಷ್ಣ ವರ್ಣ ವೈಭವ ಎಂಬ ಹೊಸ ವಿಭಾಗವನ್ನೂ ಒಳಗೊಂಡಂತೆ ಒಟ್ಟು ೨೫ ವಿಭಾಗಗಳಲ್ಲಿ ಕದ್ರಿ ದೇವಳದ  * ಶ್ರೀ ಮಹಾಗಣಪತಿದೇವಸ್ಥಾನ * ಅಭಿಷೇಕ ಮಂದಿರ* ಕದ್ರಿ ಕೆರೆ ‌ಅಶ್ವತ ಕಟ್ಟೆ ಬಳಿ * ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ ವೇದಿಕೆ * ಅಭಿಷೇಕ ಮಂದಿರ ೧ನೇ ಮಹಡಿ * ಕಲ್ಯಾಣ ಮಂಟಪ * ಮಂಜುಶ್ರೀ * ಅಭಿಷೇಕ ಮಂದಿರ * ಪ್ರಧಾನ ವೇದಿಕೆ ಸಹಿತ‌ ಶ್ರೀ ಕ್ಷೇತ್ರದ ಒಟ್ಟು ಆವರಣದಲ್ಲಿ ಏಕಕಾಲದಲ್ಲಿ ನಡೆಯಲಿದೆ ಎಂದು ವಿವರಿಸಿದರು.

Kalkura_krishna_Press_2 Kalkura_krishna_Press_3

‘ಕಂದ ಕೃಷ್ಣ’            ವಿಭಾಗದಲ್ಲಿ 1 ವರ್ಷದ ಕೆಳಗಿನ ಪುಟಾಣಿ ಕಂದಮ್ಮಗಳು ಭಾಗವಹಿಸಬಹುದಾಗಿದ್ದು ಮುದ್ದು ಕಂದಮ್ಮಗಳ ಜೊತೆ ತಾಯಂದಿರುಕೂಡಾ ವೇದಿಕೆಗೆ ಬರಬಹುದು

 ‘ಮುದ್ದು ಕೃಷ್ಣ ‘         ವಿಭಾಗದಲ್ಲಿ  1 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 2 ವರ್ಷಕ್ಕಿಂತ ಕೆಳಗಿನ ಕಂದಮ್ಮಗಳು ಪಾಲ್ಗೊಳ್ಳಬಹುದಾಗಿದ್ದು,  ಮುದ್ದು ಕಂದಮ್ಮಗಳ ಜೊತೆತಾಯಂದಿರುಕೂಡಾ ವೇದಿಕೆಗೆ ಬರಬಹುದು.

 ‘ತುಂಟ ಕೃಷ್ಣ’           ವಿಭಾಗದಲ್ಲಿ 2 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಮೂರು ವರ್ಷಕ್ಕಿಂತ ಕೆಳಗಿನ ಪುಟಾಣಿಗಳು ಭಾಗವಹಿಸಬಹುದು.

‘ಬಾಲಕೃಷ್ಣ ‘            ವಿಭಾಗದಲ್ಲಿ ಬಾಲವಾಡಿ, ಅಂಗನವಾಡಿ, ಎಲ್.ಕೆ.ಜಿ. ಪುಟಾಣಿಗಳು ಭಾಗವಹಿಸ ಬಹುದಾಗಿದೆ.

‘ಕಿಶೋರ ಕೃಷ್ಣ’       ವಿಭಾಗದಲ್ಲಿ  ಯು.ಕೆ.ಜಿ. ಮತ್ತು‌ಒಂದನೇತರಗತಿ ಪುಟಾಣಿಗಳು  ಪಾಲ್ಗೊಳ್ಳಬಹುದು .

 ‘ಶ್ರೀ ಕೃಷ್ಣ ‘               ವಿಭಾಗದಲ್ಲಿ 2, 3, 4ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

 ‘ಗೀತಾ ಕೃಷ್ಣ’          ವಿಭಾಗದಲ್ಲಿ(ವೇಷಭೂಷಣದೊಂದಿಗೆಗೀತೋಪದೇಶದಚಿತ್ರಣಗೀತೆಯಾವುದಾದರೂ ಶ್ಲೋಕದ ಪಠನದೊಂದಿಗೆ) ೭ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.(3+2 ನಿಮಿಷ).

‘ಯಕ್ಷ ಕೃಷ್ಣ’             ವಿಭಾಗದಲ್ಲಿಜಿಲ್ಲೆಯ ವಿಶೇಷ ಸಾಂಪ್ರದಾಯಿಕ ಶೈಲಿಯಾದಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಅಸಕ್ತಿಯನ್ನು  ಮೂಡಿಸುವ ದೃಷ್ಟಿಯಿಂದಯಕ್ಷ ಕೃಷ್ಣ (ತೆಂಕುಯಾ ಬಡಗು) ಹತ್ತನೇತರಗತಿ ವರೆಗಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದೆ. ಈ ವಿಭಾಗದಲ್ಲಿ ಭಾಗವಹಿಸುವ ಮಕ್ಕಳು ಸಾಂಪ್ರದಾಯಿಕ ಯಕ್ಷಗಾನ ವೇಷ ಭೂಷಣ (ಪಗಡಿ/ಕೇದಗೆ/ಮಂದಲೆ) ಧರಿಸಬೇಕಾಗುವುದು. (ಗರಿಷ್ಠ 5 ನಿ.)

‘ರಾಧಾಕೃಷ್ಣ’           ವಿಭಾಗದಲ್ಲಿ ಏಳನೇ ತರಗತಿಯ ವರೆಗಿನ ಮಕ್ಕಳು ಭಾಗವಹಿಸಬಹುದಾಗಿದೆ.(ಜೋಡಿ)

‘ಯಶೋದ ಕೃಷ್ಣ’    ವಿಭಾಗದಲ್ಲಿಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಮಹಿಳೆ ಯಶೋದೆಯಾಗಿಯಾವುದೇ ಮಗು ಕೃಷ್ಣನಾಗಿ ಅಭಿನಯಪೂರ್ವಕವಾಗಿ ಭಾಗವಹಿಸಬಹುದು.  ಮಹಿಳೆಗೆ ವಯೋಮಿತಿ ನಿರ್ಬಂಧವಿಲ್ಲ. ಮಗು  (ಕೃಷ್ಣ) 12  ವರ್ಷದೊಳಗಿನವರಾಗಿರಬೇಕು.

‘ಶಂಖನಾದ’           (ಸಾಂಪ್ರದಾಯಿಕ‌ಉಡುಗೆಯೊಂದಿಗೆ )೭ನೇ ತರಗತಿವರೆಗಿನ ಮಕ್ಕಳಿಗಾಗಿ (ಕೃಷ್ಣವೇಷ  ಭಾಗವಹಿಸಬಹುದು.)ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು

 ‘ಶಂಖ‌ಉದ್ಘೋಷ’(ಸಾಂಪ್ರದಾಯಿಕ‌ಉಡುಗೆಯೊಂದಿಗೆ ) (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳುಭಾಗವಹಿಸಬಹುದು.)

`ದೇವಕಿ ಕೃಷ್ಣ’:ಈ ಹಿಂದೆಕದ್ರಿ ಶ್ರೀ ಕ್ಷೇತ್ರದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಕೃಷ್ಣ ವೇಷ ಧರಿಸಿ ಸ್ಪರ್ಧಾಳುಗಳಾಗಿ ಭಾಗವಹಿಸಿದ     ತಾಯಂದಿರು ತಮ್ಮದೇ ಮಗುವಿನೊಂದಿಗೆ ತಾಯಿ ದೇವಕಿಯಾಗಿ ಮಗು ಕೃಷ್ಣನಾಗಿ ಭಾಗವಹಿಸಬಹುದಾಗಿದೆ.

`ವಸುದೇವ ಕೃಷ್ಣ’ (ಮುಕ್ತ ವಿಭಾಗ):  ಪುರುಷ ವಸುದೇವನಾಗಿ ಮಗುವನ್ನು ಫ್ಲಾಸ್ಟಿಕ್‌ರಹಿತವಾದ ಯಾವುದೇ ಬೆತ್ತ‌ಅಥವಾ ಬೀಳು ಇನ್ನಿತರ ಬುಟ್ಟಿಗಳಲ್ಲಿ ತಲೆಯ ಮೇಲೆ ಹೊತ್ತು ಸಾಂಪ್ರಾದಾಯಿಕ‌ಉಡುಗೆಯೊಂದಿಗೆ                                                           ಭಾಗವಹಿಸಬಹುದು. ವಯೋಮಿತಿ ನಿರ್ಬಂಧವಿಲ್ಲ.  (ಮಹಿಳೆಯರೂ ಪುರುಷವೇಷದೊಂದಿಗೆ ವಸುದೇವನಾಗಿ ಭಾಗವಹಿಸಬಹುದು.)

`ನಂದಗೋಕುಲ’ (ಸಮೂಹ ವಿಭಾಗ): ಕೃಷ್ಣನ ಯಾವುದೇ ಸನ್ನಿವೇಶವನ್ನು (ಕನಿಷ್ಠ 5 ಜನ) ಗುಂಪಿನಲ್ಲಿ ಸ್ತಬ್ಧ ಚಿತ್ರದೃಶ್ಯ  ಸ್ವರೂಪದೊಂದಿಗೆ ಪ್ರದರ್ಶಿಸಲು ಅವಕಾಶ ವಯೋಮಿತಿ ನಿರ್ಬಂಧವಿಲ್ಲ.

`ಬಾಲಕೃಷ್ಣ ರಸಪ್ರಶ್ನೆ’ ೭ನೇ ತರಗತಿವರೆಗಿನ(ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳುಭಾಗವಹಿಸಬಹುದು.)

‘ ಶ್ರೀಕೃಷ್ಣ ರಸ ಪ್ರಶ್ನೆ ಸ್ಪರ್ಧೆ  7ನೇ ತರಗತಿ ಮೇಲ್ಪಟ್ಟ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳುಭಾಗವಹಿಸಬಹುದು.)

`ಛಾಯಾಕೃಷ್ಣ’        :  ದೇವಳದ ಪ್ರಾಂಗಣದ ನಿಗದಿತ ವೇದಿಕೆಯಲ್ಲಿ ಶ್ರೀ ಕೃಷ್ಣ ವೇಷಧಾರಿಯಾಗಿಛಾಯಾಚಿತ್ರಕ್ಕೆ‌ಅನುಕೂಲಕರವಾಗಿ ಆಕರ್ಷಕ ಭಂಗಿಯಲ್ಲಿ‌ಎಲ್ಲಾ ಸ್ಪರ್ಧಾಳುಗಳು ಪಾಲ್ಗೊಳ್ಳಬಹುದು. (ವಯೋಮಿತಿ ನಿರ್ಬಂಧವಿಲ್ಲ.)

`ಶ್ರೀಕೃಷ್ಣ ವರ್ಣ ವೈಭವ’ ಚಿತ್ರಕಲಾ ಸ್ಪರ್ಧೆ    : ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, 6 ವಿಭಾಗಗಳಲ್ಲಿ ನಡೆಯುವುದು. (ಶಿಶು, ಬಾಲ, ಕಿಶೋರ, ತರುಣ, ಮುಕ್ತವಿಭಾಗ) ಪರಿಕರಗಳೊಂದಿಗೆ ಹಾಜರಿರಬೇಕು.

 Kalkura_krishna_Press_4 Kalkura_krishna_Press_5

ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ಉಡುಪಿ ಕಡಗೋಲು ಕೃಷ್ಣನ  ಪಂಚಲೋಹದ ವಿಗ್ರಹ,  ಶ್ರೀ ಕೃಷ್ಣ ಚರಿತ್ರೆ ಪುಸ್ತಕ, ಕದ್ರಿ ಶ್ರೀ ಮಂಜುನಾಥದೇವರ ಭಾವಚಿತ್ರ, ಪ್ರೋತ್ಸಾಹಕರಿಂದ ನೀಡಲ್ಪಟ್ಟ‌ಇತರ ಉಡುಗೊರೆಗಳು ಹಾಗೂ ಪ್ರಶಂಸನಾ ಪತ್ರ ಮತ್ತು  ಶ್ರೀಮದ್‌ಭಗವದ್ಗೀತೆಯ ಪ್ರತಿಯನ್ನು‌ಆಕರ್ಷಕ ಬಟ್ಟೆಚೀಲದೊಂದಿಗೆ ನೀಡಲಾಗುವುದು.

ಬಹುಮಾನಗಳು :

ಎಲ್ಲಾ ವಿಭಾಗದ ವಿಜೇತರಿಗೆ ಮೇಲ್ಕಾಣಿಸಿದ ಉಡುಗೊರೆಯಜೊತೆಗೆ ಪ್ರಥಮ, ದ್ವಿತೀಯ ಮತ್ತುತೃತೀಯ ಬಹುಮಾನಗಳನ್ನು ನೀಡಲಾಗುವುದು. ವಿಶೇಷ ಉಡುಗೊರೆಗಳನ್ನು ಸ್ಪರ್ಧಾ ಸ್ಥಳದಲ್ಲೇ ಭಾಗವಹಿಸಿದ ತಕ್ಷಣ ನೀಡುವುದಲ್ಲದೆ ಬಹುಮಾನಗಳನ್ನು ಆದೇ ದಿನ ಸಂಜೆಕ್ಷೇತ್ರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ನೀಡಲಾಗುವುದು.

 * ಅತೀ ಹೆಚ್ಚಿನ ಸ್ಪರ್ಧಾಳುಗಳು ಭಾಗವಹಿಸಿದ ವಿದ್ಯಾ ಸಂಸ್ಥೆಗೆ ಪಾರಿತೋಷಕ ನೀಡಲಾಗುವುದು. * ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. * ಕೃಷ್ಣ ವೇಷಧಾರಿ ಪುಟಾಣಿಗಳ ಗ್ರೂಪ್ ಫೋಟೋ: ಮಧ್ಯಾಹ್ನ 3.30ಕ್ಕೆ ಪತ್ರಿಕೆ /ದೃಶ್ಯ ಮಾಧ್ಯಮಗಳಿಗೆ ವಿಶೇಷವಾಗಿ ಕಂದಮ್ಮಗಳ   ಗ್ರೂಪ್ ಫೋಟೋ ತೆಗೆಯುವ ವ್ಯವಸ್ಥೆ ಶ್ರೀ ಕ್ಷೇತ್ರದ ದೀಪಸ್ತಂಭದ‌ ಎದುರುಗಡೆ ಮಾಡಲಾಗಿದೆ. * ಬಿಸಿ ಹಾಲು / ಪೇಡ- ಐಸ್‌ಕ್ರೀಮ್ ಮಕ್ಕಳಿಗೆ ಮಾತ್ರ: ಈ ಮಕ್ಕಳ ಉತ್ಸವದಲ್ಲಿ ಸ್ಪರ್ಧಿಸುವ ಸ್ಪರ್ಧಾಳು ಮಕ್ಕಳಿಗೆ ಮಾತ್ರ ಬಿಸಿ ಹಾಲು, ಪೇಡಾ, ಐಸ್‌ಕ್ರೀಮ್‌ಚಾಕ್‌ಲೆಟ್ ನೀಡಲಾಗುವುದು. *ಈ ವಿಶೇಷ ಉತ್ಸವದಲ್ಲಿ ಭಾಗವಹಿಸುವ ಅಶಕ್ತ ಅಂಗವಿಕಲ ಹಾಗೂ ಬುದ್ದಿಮಾಂದ್ಯ ಮಕ್ಕಳಿಗೆ ಮತ್ತು ಸಂಘಟನೆಗಳಿಗೆ ವಿಶೇಷವಾಗಿ ಪ್ರೋತ್ಸಾಹ ನೀಡಲಾಗುವುದು.

Kalkura_krishna_Press_6

ಈ ಬಾರಿಯ ವಿಶೇಷತೆ

*ಒಟ್ಟು25 ವಿಭಾಗದಲ್ಲಿ ಏಕ ಕಾಲದಲ್ಲಿಕದ್ರಿ ದೇವಳದ ಒಟ್ಟು‌ಆವರಣದಲ್ಲಿ ಸ್ಪರ್ಧೆಗಳು ಜರಗಲಿವೆ.

* `ಶ್ರೀಕೃಷ್ಣ ವರ್ಣ ವೈಭವ’ : (ಒಟ್ಟು‌ಆರು ವಿಭಾಗಗಳಲ್ಲಿ) ನಡೆಯುವುದು. (ಶಿಶು, ಬಾಲ, ಕಿಶೋರ, ತರುಣ, ಮುಕ್ತವಿಭಾಗ) ಬೆಳಿಗ್ಗೆ 10 ಗಂಟೆಗೆ

* ಶ್ರೀ ಕೃಷ್ಣ ರಸಪ್ರಶ್ನೆ-ಬಾಲಕೃಷ್ಣ ರಸಪ್ರಶ್ನೆ ಸ್ಪರ್ಧಾಳುಗಳಿಗೆ ಬಹುಮಾನಾರ್ಥವಾಗಿ ಸುಮಾರು 150ಕ್ಕೂ ಮಿಕ್ಕಿ ನಿತ್ಯ ಪೂಜಾ‌ಅಥವಾ ಸಾಂಸ್ಕೃತಿಕ ಪರಿಕರಗಳನ್ನು (ಶಂಖ, ಜಾಗಟೆ, ಬೆಳ್ಳಿ ತುಳಸಿ ಮಣಿ ಸರ, ಬೆಳ್ಳಿಕಟ್ಟಿದ ಅಭಿಶೇಕ ಶಂಖ, ಮುದ್ರೆ, ತಾಳ, ಆರತಿ, ದೀಪ ಇತ್ಯಾದಿ ನೀಡಲಾಗುವುದು.)

* ರಾತ್ರಿ 12 ಗಂಟೆಗೆ ಶ್ರೀ ಕೃಷ್ಣ ದೇವರಿಗೆ 12 ಬಗೆಯ ಉಂಡೆಗಳು, ಚಕ್ಕುಲಿ, ಕಡುಬು‌ಇನ್ನಿತರ ಖಾದ್ಯಗಳನ್ನು ನೈವೇದ್ಯ ಮಾಡಿ ನೆರೆದ ಮಕ್ಕಳಿಗೆ ಪ್ರಸಾದರೂಪವಾಗಿ‌ ಉಂಡೆ ಚಕ್ಕುಲಿಗಳನ್ನು ವಿತರಿಸಲಾಗುವುದು. ಸಾರ್ವಜನಿಕರಿಗೂ‌ ಅರ್ಘ್ಯ ಪ್ರದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

*  ಪಾಲಕರುತಮ್ಮ ಮಕ್ಕಳಿಗೆ ಅವರವರ ಮನೆಗಳಲ್ಲೇ ಅಥವಾ‌ಇತರ ಕಡೆಗಳಲ್ಲಿ ವೇಷ ಭೂಷಣವನ್ನು ಹಾಕಿಸಿ ತರಬಹುದು‌ಅಥವಾ ಸ್ಥಳದಲ್ಲೇ ಅವರವರ ವೆಚ್ಚದಲ್ಲಿ ವೇಷವನ್ನು ಹಾಕಿಸ ಬಹುದಾಗಿದೆ. ವೇಷಭೂಷಣಗಳಲ್ಲಿ ಆಡಂಬರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡದೆ ಮಕ್ಕಳ ಮುಗ್ದ ಸೌಂದರ್‍ಯದ ನೈಜತೆಯನ್ನು ಹೊರಸೂಸುವ ವೇಷಗಳನ್ನು ಧರಿಸಿಕೊಂಡಿರಲಿ ಎಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.

* ಖ್ಯಾತ ಛಾಯಾಗ್ರಾಹಕರು ಸ್ಥಳದಲ್ಲಿ ಹಾಜರಿದ್ದು ‌ಆಸಕ್ತರು ತಮ್ಮ ಮಕ್ಕಳ ವೈಯಕ್ತಿಕ ಛಾಯಾ ಚಿತ್ರವನ್ನು ‌ಅವರವರ ಸ್ವಂತ ವೆಚ್ಚದಲ್ಲಿ ತೆಗೆಯುವ ಬಗ್ಗೆ ವ್ಯವಸ್ಥೆ ಮಾಡಲಾಗಿದೆ.

Kalkura_Krishna_kadri_2 Kalkura_Krishna_kadri_1

ಸುಮಾರು‌ ಎರಡುವರೆ ದಶಕಗಳಿಂದ ವರ್ಷಂಪ್ರತಿ ನಡೆಯುತ್ತಿರುವ ಈ ಮಕ್ಕಳ ರಾಷ್ಟ್ರಮಟ್ಟದ‌ಉತ್ಸವ ಸರ್ವರಿಂದಲೂ ಪ್ರಶಂಸಿಸಲ್ಪಟ್ಟಿದ್ದು  ವಿವಿಧ ವಿಭಾಗಗಳಲ್ಲಿ ಸಾಮೂಹಿಕವಾಗಿ ಕೃಷ್ಣ ವೇಷ ಸ್ಪರ್ಧೆಯ ಮುಖೇನ ಮಕ್ಕಳ ಉತ್ಸವವನ್ನು ‌ಆಚರಿಸುವ ಪದ್ದತಿ‌ ಇಂದು ಕರಾವಳಿಯ ಜಿಲ್ಲೆಯಾದ್ಯಂತ , ರಾಜ್ಯದಾದ್ಯಂತ ಹಾಗೂ ರಾಷ್ಟ್ರಾದ್ಯಂತ‌ಇದೇ ಮಾದರಿಯಲ್ಲಿ ನಡೆಯುತ್ತಿರುವುದು ಕಲ್ಕೂರ ಪ್ರತಿಷ್ಠಾನಕ್ಕೆ ಅತ್ಯಂತ ಸಂತಸದ ವಿಷಯ ಎಂದು ಕಲ್ಕೂರ ಅವರು ಹೇಳಿದರು.

ಸ್ಪರ್ಧಾಳುಗಳು  ಅವರ ಹೆತ್ತವರು ಸಮಯಕ್ಕೆ ಸರಿಯಾಗಿ ಆಗಮಿಸಿ ಇದರ ಯಶಸ್ವಿಗೆ ಸಹಕರಿಸಬೇಕೆಂದು ವಿನಂತಿಸಲಾಗಿದೆ. ಸ್ಫರ್ಧಾ ಸ್ಥಳದಲ್ಲೇ ಹೆಸರು ನೋಂದಾಯಿಸಲು ‌ಅವಕಾಶವಿರುವುದು. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

ಈ ಉತ್ಸವದ ಬಗ್ಗೆ ಹೆಚ್ಚಿನ ವಿವರಗಳಿಗೆ: ಕಲ್ಕೂರ ಪ್ರತಿಷ್ಠಾನ, ಶೀ ಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಫೋನ್:   0824-2492239, 9448125949, 9845083736,

kalkuraadvt@rediffmail.com, pradeep.kalkura@gmail.com  ದಯಾನಂದ ಕಟೀಲ್, ಶಾರದಾ ವಿದ್ಯಾಲಯ, ಮಂಗಳೂರು  ಫೋನ್: 2493089/94485 45578, dayakateel1992@gmail.com,

ಕದ್ರಿ ನವನೀತ ಶೆಟ್ಟಿ, ಫೋನ್: 2213061/94481 23061,  ಸುಧಾಕರರಾವ್ ಪೇಜಾವರ, ಫೋನ್: 2214093/2443360, ಗೋಕುಲ ಕೆ. ಫೋನ್: 2214176, 9448549456

ಯೋಜನಾಧಿಕಾರಿಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಫೋನ್: 2425059,  ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಫೋನ್: 2214176  ಇವರನ್ನು  ಸಂಪರ್ಕಿಸಬಹುದು.

ಈ ವರ್ಷ‌ ಎರಡು ಸಾವಿರಕ್ಕೂ  ಮಿಕ್ಕಿ ಪುಟಾಣಿಗಳು ಭಾಗವಹಿಸುವ ನಿರೀಕ್ಷೆಯಲ್ಲಿದ್ದು ಈ ರಾಷ್ಟ್ರಮಟ್ಟದ ಮಕ್ಕಳ ಉತ್ಸವದಲ್ಲಿ‌ ಎಲ್ಲಾ ನಾಗರಿಕ ಬಂಧುಗಳು, ಗಣ್ಯರು, ಆಡ್ಯ ಮಹನೀಯರು ಪಾಲ್ಗೊಂಡು ಮಕ್ಕಳ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸಿ ಯಶಸ್ವಿ ಗೊಳಿಸಬೇಕೆಂದು ಕಲ್ಕೂರ  ಪ್ರತಿಷ್ಠಾನದ‌ ಅಧ್ಯಕ್ಷರಾದ‌ಎಸ್. ಪ್ರದೀಪಕುಮಾರಕಲ್ಕೂರ  ವಿನಂತಿಸಿದ್ದಾರೆ.

Write A Comment