ಕನ್ನಡ ವಾರ್ತೆಗಳು

ಪುತ್ತಿಗೆ ಶ್ರೀ ಸುಗುಣೇಂದ್ರ ಶ್ರೀಗಳ 41ನೇ ಚಾತುರ್ಮಾಸ್ಯ ವೃತಾಚರಣೆ ಪುರಪ್ರವೇಶ

Pinterest LinkedIn Tumblr

Mumbai_putige_photo_1

ವರದಿ : ಈಶ್ವರ ಎಂ. ಐಲ್/ಚಿತ್ರ : ದಿನೇಶ್ ಕುಲಾಲ್

ಮುಂಬಯಿ : ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠದ ಮಠಾಧೀಶರಾಗಿರುವ ಶ್ರೀ ಸುಗುಣೇಂದ್ರ ತೀಥ ಸ್ವಾಮೀಜಿಯ ಚಾತುರ್ಮಾಸ್ಯ ವೃತಾಚರಣೆಯ ಸ್ವಾಗತ ಸಮಾರಂಭವು ಅ. 16ರಂದು ಸಯನಿನ ಗೋಕುಲ ಸಭಾಗೃಹದಲ್ಲಿ ನೆರವೇರಿತು.

ಶ್ರೀಗಳನ್ನು ಸಯನಿನ ಹನುಮಾನ್ ಮಂದಿರದಿಂದ ಗೋಕುಲದ ಸಭಾಂಗಣಕ್ಕೆ ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು. ಆ ಬಳಿಕ ಭವ್ಯ ಸಭ್ಯಾಕಾರ್ಯಕ್ರಮವನ್ನು ದೀಪ ಬೆಳಗಿಸಿ ಸ್ವಾಮೀಜಿ ಉದ್ಘಾಟಿಸಿದ ಭಕ್ತರನ್ನು ಉದ್ದೇಶಿಸಿ ಆಶ್ರೀರ್ವಚನ ನೀಡುತ್ತಾ ರಾಮಾಯಣ, ಮಹಾಭಾರತ, ವೇದ, ಉಪನಿಷತ್ತುಗಳು ಸಂಸ್ಕೃತ ಬಾಷೆಯಲ್ಲಿದ್ದು ಅನೇಕ ಬಾಷೆಗಳಿಗೆ ಸಂಸ್ಕೃತ ಮೂಲ ಬಾಷೆಯಾಗಿದೆ. ಸಂಸ್ಕೃತವು ಪೂಜನಿಯ ಹಾಗೂ ಶ್ರೇಷ್ಠ ಬಾಷೆಯಾಗಿದೆ. ಈ ಮಹಾನಗರದಲ್ಲಿ ಇದು ನನ್ನ ೬ನೇ ಚಾತುರ್ಮಾಸ್ಯ ವೃತಾಚರಣೆಯಾಗಿದೆ. ಈ ನಗರದ ಯಾಂತ್ರಿಕ ಜೀವನದ ಮಧ್ಯೆ ಅಶಾಂತಿಯನ್ನು ನಿವಾರಿಸಲು ಧಾರ್ಮಿಕ ಕಾರ್ಯಕ್ಕೆ ನಾವು ಹೆಚ್ಚಿನ ಮಹತ್ವವನ್ನು ನೀಡಬೇಕು. ಬದುಕಲ್ಲಿ ಷ್ಠತೆಯನ್ನು ಕಾಪಾಡಲು ಪುಣ್ಯ – ಧರ್ಮ ಸಂಪಾದನ ಅಗತ್ಯ, ಎಂದರು.

Mumbai_putige_photo_2 Mumbai_putige_photo_3 Mumbai_putige_photo_4 Mumbai_putige_photo_5

ಚೆಂಬೂರಿನ ಶಾಸಕ ರಾಹುಲ್ ಶಾವ್ಲೆ ಮಾತನಾಡುತ್ತಾ ಇಂದು ಸ್ವಾಮೀಜಿಯವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಅವಕಾಶ ದೊರಕಿದ್ದು ನನ್ನ ಭಾಗ್ಯ. ಭಾರತೀಯ ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಿರುವ ಸ್ವಾಮೀಜಿಯವರಿಗೆ ನಾವೆಲ್ಲರೂ ಸಹಕರಿಸಬೇಕಾಗಿದೆ.

ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ತನ್ನ ಅನಿಸಿಕೆಯನ್ನು ತಿಳಿಸುತ್ತಾ ಮುಂಬಯಿ ನಗರಕ್ಕೆ ಬಂದ ಮೊದಲ ವರ್ಷದಲ್ಲೇ ಸ್ವಾಮೀಜೆಯವರನ್ನು ಕಾರ್ಯಕ್ರಮವೊಂದರಲ್ಲಿ ಬೇಟಿ ಮಾಡಿದ್ದು ಅವರು ನನ್ನರಸಿದ ಆ ಸಂದರ್ಭ ಇಂದು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಅಭಿಮಾನವಾಗುತ್ತದೆ. ವಿವಿಧ ದೇಶಗಳಿಗೆ ಬೇಟಿಯಿತ್ತು ಹಿಂದೂ ಧರ್ಮದ ಬಗ್ಗೆ ಪ್ರಚಾರ ಮಾಡುತ್ತಿರುವ ಸ್ವಾಮೀಜಿಯವರಿಗೆ ಸಮಸ್ಯೆಗಳು ಎದುರಾಗಿದ್ದರೂ ಕಂಗೆಡದೆ ಅದನ್ನು ಬಗೆಯರಿಸಿದ್ದಾರೆ. ಚಾತುರ್ಮಾಸ ವೃತಾಚರಣೆಯು ವೈಭವ ಮತ್ತು ಧಾರ್ಮಿಕತೆಯನ್ನು ತುಂಬಿಸುವ ಸೇವೆ ನಮ್ಮದಾಗಬೇಕು ಎಂದರು.

ಉದ್ಯಮಿ ಬಳ್ಳಾರಿ ಬಂಟರ ಸಂಘದ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸ್ವಾಮೀಜಿಯವರ ಧರ್ಮ ಕಾರ್ಯವನ್ನು ಅಮೇರಿಕದಲ್ಲಿ ನಾನು ಪ್ರತ್ಯಕ್ಷ ಕಂಡಿದ್ದೇನೆ. ಅಶ್ರಯ ಇಲ್ಲದವರಿಗೆ ಅಶ್ರಯದಾತರಾಗಿ ನಮ್ಮ ನಾಡಿನಲ್ಲಿ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ನಮ್ಮ ನಾಡಿನ ವಿಚಾರವನ್ನು ಪಸರಿಸಿದ್ದಾರೆ ಎಂದರು.

ಬೊಂಬೆ ಬಂಟ್ಸ್ ಅಸೋಷಿಯೇಶನಿನ ಅಧ್ಯಕ್ಷರು ಈ ಸಂಧರ್ಭದಲ್ಲಿ ಮಾತನಾಡುತ್ತಾ, ವಿಶ್ವಕ್ಕೇ ಧರ್ಮ ಪ್ರಚಾರ ಮಾಡಿದ ಶ್ರೀಗಳೊಂದಿಗೆ ಇಂದು ಸೇರಿಕೊಂಡಿರುವುದೇ ನನ್ನ ಸೌಭಾಗ್ಯ. ಚಾತುರ್ಮಾಸ್ಯ ಮುಂಬಯಿಯಲ್ಲಿ ನಡೆಯುತ್ತಿರುವುದುನಮಗೆಲ್ಲರಿಗೂ ಪುಣ್ಯವನ್ನು ತುಂಬಿಕೊಂಡಿದೆ. ಎಂದರು.
ಸಾಮ್ನಾ ಪತ್ರಿಕೆಯ ಸಂಪಾದಕ ಸಂಸದ ಸಂಜಯ್ ರಾವುತ್ ಮಾತನಾಡುತ್ತಾ ಹಿಂದೂ ಸಮಾಜದ ಬೆಳವಣಿಗೆಯಲ್ಲಿ ಇಂತಹ ಸ್ವಾಮೀಜಿಯವರ ಕೊಡುಗೆ ಅಪೂರ್ವವಾಗಿದೆ. ಶಿವಸೇನೆಯ ಪ್ರಮುಖರಾಗಿದ್ದ ಬಾಳಾ ಸಾಹೇಬ್ ಠಾಕ್ರೆ ಕೂಡಾ ಹಿಂದೂ ಧರ್ಮದ ಬಗ್ಗೆ ಅಪಾರವಾಗಿ ಶ್ರಮಿಸಿದವರು. ಈ ಸುಸಂಧರ್ಭದಲ್ಲಿ ಸ್ವಾಮೀಜಿಯವರೊಂದಿಗಿರುವುದು ನನ್ನ ಭಾಗ್ಯ ಎಂದರು.

ಕಸ್ಟ್ಂಸ್ ವಿಭಾಗದ ಅಸಿಸ್ಟೆಂಟ್ ಕಮಿಷನರ್ ರೋಹಿತ್ ಹೆಗ್ಡೆ ಯವರು ಮಾತನಾಡುತ್ತಾ ಸ್ವಾಮಿಜಿಯವರನ್ನು ನಾನು ಬಾಲ್ಯದಲ್ಲೇ ಕಂಡಿದ್ದೇನೆ ಎಲ್ಲಾ ಸ್ವಾಮಿಜಿಗಳಿಂದ ಭಿನ್ನವಾಗಿ ಧರ್ಮದ ಕಾರ್ಯದಲಿ ತೊಡಗಿಕೊಂಡವರು. ದಾನ ಕೊಡುವ ಸ್ವಾಮೀಜಿ. ನಮ್ಮ ನಾಡಿನ ಬಹುತೇಕ ಸ್ವಾಮೀಜಿಯವರು ದಾನ ಪಡೆಯುವವರು. ಹಿಂದೂ ಧರ್ಮದ ಪ್ರಚಾರಕ್ಕಾಗಿ ಪರದೇಶದಲ್ಲಿ ಇಷ್ಟೊಂದು ಕೆಲಸ ಮಾಡಿದವರು ಇವರು ಮಾತ್ರ ಎಂದು ತಿಳಿಸಿದರು.

ಚಾತುರ್ಮಾಸ್ಯ ಸಮಿತಿಯ ಸಂಚಾಲಕ ಸಿಎ ಸುಧೀರ್ ಆರ್. ಎಲ್. ಶೆಟ್ಟಿಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಜೀವ ಮತ್ತು ಜಗತ್ತನ್ನು ನಿಯಂತ್ರಣ ಮಾಡುವವನೇ ಜಗನ್ನಾಥ. ಎಲ್ಲಾ ಕಡೆ ಭ್ರಹ್ಮನಿದ್ದಾನೆ. ವಿಶ್ವದ ಧರ್ಮಗುರುಗಳಿಗೆ ಶಾಂತಿಯ ತತ್ವವನ್ನು ನೀಡಿದವರು ಪುತ್ತಿಗೆ ಶ್ರೀಗಳು. ಇವರ ಸೇವೆ ಮಾಡಿದರೆ ಧರ್ಮದ ಸೇವೆ ಮಾಡಿದಂತೆ ಎಂದರು.

ವೇದಿಕೆಯಲ್ಲಿ ಪಾಟೀಲ್ ಗ್ರೂಪ್ ಆರ್ ಇನ್ ಸ್ಟಿಟ್ಯೂಟ್ ನ ಟಿ. ಡಿ. ಪಾಟೇಲ್, ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷ ಎಂ, ನರೇಂದ್ರ, ಉದ್ಯಮಿ ಬಿ. ಆರ್. ಶೆಟ್ಟಿ, ಕೊಂಕಣಿ ರಂಗ ಕಲಾವಿದ ಕಮಲಾಕ್ಷ ಸರಾಫ್ ಉಪಸ್ಥಿತರಿದ್ದರು, ವಿಧ್ವಾಂಸ ನಾಗರಹಳ್ಳಿ ಪ್ರಹ್ಳ್ಳದ್ ಆಚಾರ್ಯ ಅಬಿನಂದನಾ ನುಡಿಗಳನ್ನಾಡಿದರೆ, ಬಿ.ಎಸ್.ಕೆ.ಬಿ ಅಸೋಷಿಯೇಶನಿನ ಅಧ್ಯಕ್ಷ ಡಾ. ಸುರೇಶ್ ರಾವ್ ಸ್ವಾಗತಿಸಿದರು. ವಿದ್ವಾನ್ ಗೋಪಾಲ್ ಆಚಾರ್ಯ ಪುತ್ತಿಗೆ ಮಠದ ಬಗ್ಗೆ, ಸ್ವಾಮೀಜಿಯವರ ಧರ್ಮ ಕಾರ್ಯದ ಬಗ್ಗೆ ವಿವಿರ ನೀಡಿದರು. ವಿಧ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಸ್ವಾಮೀಜಿಯವರನ್ನು ಪರಿಚಯಿಸಿದರು. ಪೂರ್ತಿ ಕಾರ್ಯಕ್ರಮವನ್ನು ವೇದ ಮೂರ್ತಿ ಆರ್ ಎಲ್ ಭಟ್ ನಿರ್ವಹಿಸಿದರು. ಕೊನೆಯಲ್ಲಿ ನ್ಯಾಯವಾದಿ ಗೀತಾ ಎಲ್ ಭಟ್ ಅಭಾರ ಮನ್ನಿಸಿದರು.

Write A Comment