ಕನ್ನಡ ವಾರ್ತೆಗಳು

ಪ್ರೊಫೆಸರ್ ರಶೀದ್ ಮದನಿಯವರಿಗೆ ದರ್ಗಾ ಸಮಿತಿಯಿಂದ ಹಜ್ ಬೀಳ್ಕೊಡುಗೆ ಸಮಾರಂಭ.

Pinterest LinkedIn Tumblr

ullala_madani_photo

ಮಂಗಳೂರು,ಆಗಸ್ಟ್.28  : ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ರಶೀದ್ ಮದನಿಯವರು ಈ ವರ್ಷ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳಲಿದ್ದು ಇದರ ಪ್ರಯುಕ್ತ ಸಯ್ಯಿದ್ ಮದನಿ ದರ್ಗಾ ಸಮಿತಿಯ ವತಿಯಿಂದ ರಶೀದ್ ಮದನಿಯವರಿಗೆ ಹಜ್ ಬೀಳ್ಕೊಡುಗೆ ಕಾರ್ಯಕ್ರಮವು ದರ್ಗಾ ವಠಾರದ ಮದನಿ ಹಾಲ್ ನಲ್ಲಿ ಜರುಗಿತು.

ದುವಾ ಕಾರ್ಯಕ್ರಮವನ್ನು ಸಯ್ಯಿದ್ ಮದನಿ ಅರಬಿಕ್ ಕಾಲೇಜಿನ ಫ್ರೊಫೆಸರ್ ಅಹ್ಮದ್ ಬಾವ ಮುಸ್ಲಿಯಾರ್ ನೆರವೇರಿಸಿದರು. ಫ್ರೊಫೆಸರ್ ಸಯ್ಯಿದ್ ಚೆರುಕುಂಞಿ ತಂಙಳ್ ಉದ್ಘಾಟನೆ ಮಾಡಿದರು, ಈ ಸಂದರ್ಭದಲ್ಲಿ ಸಯ್ಯಿದ್ ಮದನಿ ದರ್ಗಾ ವತಿಯಿಂದ ಅಧ್ಯಕ್ಷರಾದ ಹಾಜಿ ಯು.ಎಸ್ ಹಂಝರವರು ಶಾಲು ಹೊದಿಸಿ ರಶೀದ್ ಮದನಿಯವರನ್ನು ಸನ್ಮಾನಿಸಿದರು. ಸಯ್ಯಿದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಪ್ರಯುಕ್ತ ಟ್ರಸ್ಟ್ ಉಪಾಧ್ಯಕ್ಷ ಅಝೀಝ್ ಸಖಾಫಿ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರಯುಕ್ತ ಹನೀಫ್ ಹಾಜಿ ಶಾಲು ಹೊದಿಸಿ ಸನ್ಮಾನಿಸಿದರು.

ದರ್ಗಾ ಉಪಾಧ್ಯಕ್ಷರಾದ ಅಶ್ರಫ್ ಅಹ್ಮದ್ ರೈಟ್ವೇ, ಪ್ರಧಾನ ಕಾರ್ಯದರ್ಶಿ ಯು.ಟಿ ಇಲ್ಯಾಸ್, ಜತೆ ಕಾರ್ಯದರ್ಶಿ ಫಾರೂಕ್ ಮಾರ್ಗತಲೆ, ಲೆಕ್ಕ ಪರಿಶೋದಕ ರಾದ ಜೆ.ಅಬ್ದುಲ್ ಹಮೀದ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಹನೀಫ್ ಹಾಜಿ, ಜತೆ ಕಾರ್ಯದರ್ಶಿ ಫಾರೂಕ್ ಕೋಡಿ, ಅರಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಝೀಝ್ ಸಖಾಫಿ, ಖತೀಬರಾದ ಹಾಜಿ ಅಬ್ದುಲ್ ರವೂಫ್ ಮುಸ್ಲಿಯಾರ್, ಅರಬಿಕ್ ಕಾಲೇಜಿನ ಪ್ರೊಫೆಸರ್ ಅಹ್ಮದ್ ಬಾವ ಮುಸ್ಲಿಯಾರ್ ಚೆರುಕುಂಞಿ ತಂಙಳ್, ಪಿ.ಪಿ ಅಬ್ಬಾಸ್ ಸಖಾಫಿ, ಸಯ್ಯಿದ್ ಮದನಿ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ನ ಪ್ರಾಂಶುಪಾಲರಾದ ಅಬ್ದುಲ್ ಕಲಾಂ ಸಖಾಫಿ, ಫ್ರೊಫೆಸರ್ ಇಬ್ರಾಹೀಮ್ ಅಹ್ಸನಿ, ಸಯ್ಯಿದ್ ಮದನಿ ಹಿಫುಲ್ ಕುರಾನ್ ಪ್ರಾಂಶುಪಾಲರಾದ ಹಾಫಿಲ್ ಅಬ್ದುಲ್ ರಹ್ಮಾನ್ ಸಖಾಫಿ, ಫ್ರೊಫೆಸರ್ ಅಬ್ದುಲ್ ರಹ್ಮಾನ್ ಸಖಾಫಿ, ಮುಫತ್ತಿಸ್ ಸುಲೈಮಾನ್ ಸಖಾಫಿ, ದರ್ಗಾ ಮೆನೆಜರ್ ಯು.ಎಮ್ ಯೂಸುಫ್, ದರ್ಗಾ, ಅರಬಿಕ್ ಮತ್ತು ಚಾರಿಟೇಬಲ್ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.

ದರ್ಗಾ ಉಪಾಧ್ಯಕ್ಶರಾದ ಅಶ್ರಫ್ ಅಹ್ಮದ್ ರೈಟ್ವೇ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಯು.ಟಿ ಇಲ್ಯಾಸ್ ವಂದಿಸಿದರು.

Write A Comment