ಕನ್ನಡ ವಾರ್ತೆಗಳು

ಹರ್ಷ ವಾರದ ಅತಿಥಿ ಪತ್ರಕರ್ತೆ ಡಾ.ಸಂಧ್ಯಾ ಪೈ

Pinterest LinkedIn Tumblr

Hasha_vardha_athithi

ಮಂಗಳೂರು,ಆಗಸ್ಟ್.28: ಮಂಗಳೂರು ಆಕಾಶವಾಣಿಯ ಹರ್ಷವಾರದ ಅತಿಥಿಯ 201 ನೇ ಕಾರ್ಯಕ್ರಮದಲ್ಲಿ ಆಗಸ್ಟ್ 30  ರಂದು ಬೆಳಿಗ್ಗೆ 8.30 ಕ್ಕೆ ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಸಂಧ್ಯಾ ಎಸ್ ಪೈ ಭಾಗವಹಿಸಲಿದ್ದಾರೆ.

ತರಂಗ ವಾರಪತ್ರಿಕೆ, ತುಷಾರ ಮಾಸಿಕ ಹಾಗೂ ತುಂತುರು ಮಕ್ಕಳ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿ ರಾಜ್ಯದಲ್ಲಿ ಮೂರು ಪತ್ರಿಕೆಗಳ ಏಕೈಕ ಮಹಿಳಾ ಸಂಪಾದಕಿ. ಟಿ.ವಿ. ಧಾರಾವಾಹಿ ಬರಹಗಾರರಾಗಿ, ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಅನುಭವ ಹೊಂದಿದವರು. ಸೃಜನಾತ್ಮಕ ಪ್ರತಿಭೆ, ಆಡಳಿತಾತ್ಮಕ ಅನುಭವ ಹಾಗೂ ಕಾರ್ಯನಿರ್ವಹಣಾ ಕೌಶಲ್ಯದಿಂದ ಯಶಸ್ವಿ ಹೊಂದಿದವರು ವೈಜ್ಙಾನಿಕ ಮತ್ತು ವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ಸಮಕಾಲೀನ ಬೆಳವಣಿಗೆ ಗೆ ಸ್ಪಂದಿಸಿ ಮೊನಚು ಬರಹಗಳಿಂದ ಓದುಗರ ಮುಟ್ಟಿದ ಲೇಖಕರು. ತರಂಗದ ‘ಪ್ರ್ರಿಯ ಓದುಗರೆ’ ಲೇಖನ ಯೋಗ, ತಂತ್ರ ಹಾಗೂ ಝೆನ್ ಕತೆಗಳ ಮೂಲಕ ಓದುಗರನ್ನು ಮುಟ್ಟಿದವರು.

Hasha_vardha_athithi_1

“ಉಜ್ವಾಡು’ ಕೊಂಕಣಿ ಚಿತ್ರದಲ್ಲಿ ಅಭಿನಯಿಸಿದ ಇವರು, ಉತ್ತಮ ಕಸೂತಿ ತಜ್ಙೆ, ಪಾಕಶಾಸ್ತ್ರ ಪ್ರವೀಣೆ ಹಾಗೂ ನಾಟಕ ಅಭಿನಯಾಸಕ್ತರು. ಇವರ ‘ಪ್ರಿಯ ಓದುಗರೆ, ಆರು ಪುಸ್ತಕಗಳ ರೂಪದಲ್ಲಿ ಹೊರಬಂದಿವೆ. ಕಲ್ಲುಸಕ್ಕರೆ ೧೫ ಪುಸ್ತಕಗಳು, ಮುತ್ತಿನಹಾರ ಆರು ಪುಸ್ತಕಗಳು ಪುಟ್ಟ ಪುಟ್ಟಿಯರಿಗಾಗಿ ಪುಟ್ಟಕತೆ ಆರು ಪುಸ್ತಕಗಳು, ಹೌ ಅಂಡ್ ವೈ ಸ್ಟೋರಿಸ್ ನಾಲ್ಕು ಪುಸ್ತಕಗಳು ಮಕ್ಕಳಿಗಾಗಿಯೆ ಬಂದಿವೆ. ಕೊಂಕಣಿ ರಾಂಡಪ, ಯಕ್ಷಪ್ರಶ್ನೆ ಇದು ಈಜಿಪ್ಟ್ ಇದು ಇಸ್ರೇಲ್ ಪ್ರವಾಸಕಥನ ಹೀಗೆ ಅನೇಕ ಕೃತಿಗಳನ್ನು ನೀಡಿದ್ದಾರೆ. ಪತ್ರಿಕೋದ್ಯಮಕ್ಕಾಗಿ ಗೌರವ ಡಾಕ್ಟರೇಟ್ ಪುರಸ್ಕೃತರು ಇವರು ತಮ್ಮ ಜೀವನದ ಸಾಧನೆಯ ಪುಟಗಳನ್ನು ಸಂದರ್ಶನದಲ್ಲಿ ತೆರೆದುಕೊಟ್ಟಿದ್ದಾರೆ. ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ.

ಮುಂದಿನ ವಾರದ ಅತಿಥಿಯಾಗಿ ಸಾಹಿತಿ ಶ್ರೀ ಸಿದ್ದಮೂಲೆ ಶಂಕರನಾರಾಯಣ ಭಟ್ ಭಾಗವಹಿಸಲಿರುವರು

Write A Comment