ಕನ್ನಡ ವಾರ್ತೆಗಳು

ಬ್ರಹ್ಮಾವರ: ಹಿಂಸಾತ್ಮಕವಾಗಿ ಕೋಣಗಳ ಅಕ್ರಮ ಸಾಗಾಟ; 16 ಕೋಣ ಹಾಗೂ ಗೂಡ್ಸ್ ವಾಹನ ವಶ

Pinterest LinkedIn Tumblr

Cattle Missing

(ಸಾಂದರ್ಭಿಕ ಚಿತ್ರ)

ಉಡುಪಿ: ಕೊಕ್ಕರ್ಣೆ ಕಡೆಯಿಂದ ಕೇರಳಕ್ಕೆ ಮಾಂಸಕ್ಕಾಗಿ ಕೋಣಗಳನ್ನು ಸಾಗಿಸುತ್ತಿರುವುದನ್ನು ಬ್ರಹ್ಮಾವರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಗೂಡ್ಸ್ ವಾಹನದಲ್ಲಿ 16 ಕೋಣಗಳನ್ನುಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿತ್ತು.

ಖಚಿತ ಮಾಹಿತಿ ಮೇರೆಗೆ ಬಾರಕೂರಿನಲ್ಲಿ ಗುರುವಾರ ಮುಂಜಾನೆ 6 ಗಂಟೆ ಸುಮಾರಿಗೆ ಬ್ರಹ್ಮಾವರ ಠಾಣಾ ಉಪನಿರೀಕ್ಷಕ ಅನಂತಪದ್ಮನಾಭ ಕೆ.ವಿ. ಅವರು ಸಿಬಂದಿಯವರೊಂದಿಗೆ ಕಾರ್‍ಯಾಚರಣೆ ನಡೆಸಿದ್ದಾರೆ. ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಜೈನುಲ್ಲಾ ಅಬೀದ್, ಅಬ್ದುಲ್ ಎ.ಯನ್ನು ವಶಕ್ಕೆ ಪಡೆಯಲಾಗಿದೆ. 2.1 ಲಕ್ಷ ರೂ. ಮೌಲ್ಯದ 16 ಕೋಣಗಳನ್ನು ಹಾಗೂ 8 ಲಕ್ಷ ರೂ. ಮೌಲ್ಯದ ಗೂಡ್ಸ್ ವಾಹನವನ್ನು ಸ್ವಾಧೀ ನಪಡಿಸಿಕೊಳ್ಳಲಾಗಿದೆ.

Write A Comment