(ಸಾಂದರ್ಭಿಕ ಚಿತ್ರ)
ಉಡುಪಿ: ಹಿರಿಯಡ್ಕದ 110/33/11 ಕೆ.ವಿ. ವಿದ್ಯುತ್ ಉಪಕೇಂದ್ರದ ದುರಸ್ಥಿ ಹಾಗೂ ನಿರ್ವಹಣೆಯ ಕುರಿತು ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಖಡಿತಗೊಂಡಿದ್ದ ವಿದ್ಯುತ್ ರಾತ್ರಿ 9.30 ರ ವೇಳೆಗೆ ಬಂದಿದ್ದರೂ ಕೂಡ ಬಳಿಕ ಕಡಿತಗೊಂಡ ವಿದ್ಯುತ್ ಇನ್ನೂ ಪೂರೈಕೆಯಾಗಿಲ್ಲ.
ಕುಂದಾಪುರ ಹಾಗೂ ಬೈಂದೂರು ಸೇರಿದಂತೆ ಹಲವೆಡೆ ವಿದ್ಯುತ್ ಕಡಿತಗೊಂಡಿದ್ದು 24 ಗಂಟೆಯಿಂದ ವಿದ್ಯುತ್ ಪೂರೈಕೆಯಿಲ್ಲದ ಕಾರಣ ಹಲವು ಕೆಲಸ ಕಾರ್ಯಗಳು ನಿಂತಿದೆ. ಬುಧವಾರ ಬೆಳಿಗ್ಗೆ 10 ಗಂಟೆಯವರೆಗೂ ವಿದ್ಯುತ್ ಕಡಿತಗೊಂಡ ಸ್ಥಿತಿಯಲ್ಲೇ ಇದ್ದು ಜನರು ವಿದ್ಯುತ್ ಪೂರೈಕೆಯ ನಿರೀಕ್ಷೆಯಲ್ಲಿಯೇ ಇದ್ದಾರೆ.