ಕನ್ನಡ ವಾರ್ತೆಗಳು

ಸಮಯದ ಸದುಪಯೋಗದೊಂದಿಗೆ ಸಮಾಜಾಭಿವೃದ್ದಿಗೆ ಕ್ರೀಯಾಶೀಲರಾಗೋಣ – ಚಂದ್ರಶೇಖರ್ ಬೆಳ್ಚಡ

Pinterest LinkedIn Tumblr

tiya_samaja_photo_1

ವರದಿ : ಈಶ್ವರ ಎಂ. ಐಲ್/ಚಿತ್ರ : ದಯಾನಂದ ಸಾಲ್ಯಾನ್

ಮುಂಬಯಿ : ಸಮಾಜಾಭಿವೃದ್ದಿಯಲ್ಲಿ ಸಮಾಜಸೇವಕರಿಗೆ ಯಾವುದೇ ಅಡ್ದಿಬಂದರೂ ಅದನ್ನು ಲೆಕ್ಕಿಸದೆ ಸೇವಾಕಾರ್ಯದಲ್ಲಿ ನಿರತರಾಗಬೇಕು. ಅಂತಹ ಛಲ ನಮ್ಮಲ್ಲಿರಬೇಕು. ಸಮಯದ ಸಧುಪಯೋಗದೊಂದಿಗೆ ಸಮಾಜಾಭಿವೃದ್ದಿಗೆನಾವೆಲ್ಲರೂ ಕ್ರೀಯಾಶೀಲರಾಗೋಣ ಎಂದು ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ್ ಬೆಳ್ಚಡ ನುಡಿದರು.

ಅ. 23ರಂದು ನಗರದ ಮಾಟುಂಗಾ ಪ. ವಿಶ್ವೇಶ್ವರಯ್ಯ ಸಭಾಗೃಹದ ಸಮರಸ ಭವನದಲ್ಲಿ ಜರಗಿದ ತೀಯಾ ಸಮಾಜದ71ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷ ಸ್ಥಾನದಿಂದ ಸಮಾಜದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಕೆಲವುವರ್ಷಗಳಿಂದ ಸಮಾಜದಲ್ಲಿನ ಅಭಿವೃದ್ಧಿಯ ಬಗ್ಗೆ ತಿಳಿಸಿದರು. ಸ್ಥಳೀಯ ಸಮಿತಿಗಳು ಹಾಗೂ ಕೇಂದ್ರ ಸಮಿತಿಯು ಒಂದೇತಾಯಿಯ ಮಕ್ಕಳಂತಿದ್ದು ಸ್ಥಳೀಯ ಸಮಿತಿಗಳಿಂದಾಗಿ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಒಟ್ಟಾಗುತ್ತಿದ್ದಾರೆ. ಆದುದರಿಂದಸ್ಥಳೀಯ ಸಮಿತಿಯು ಹೆಚ್ಚು ಕ್ರೀಯಾಶೀಲವಾದಲ್ಲಿ ಸಮಾಜ ಮತ್ತೂ ಪ್ರಗತಿಯತ್ತ ಸಾಗುವುದು. ಸಮಾಜದ ಸದಸ್ಯತನ,ತೀಯಾ ಬೆಳಕು, ವಿದ್ಯಾ ನಿಧಿ ಹಾಗೂ ಆರೋಗ್ಯ ನಿಧಿ ಪ್ರಗತಿ ಪಥದತ್ತ ಸಾಗುತ್ತಿದ್ದು ನಾವೆಲ್ಲರೂ ಸೇರಿ ಇದಕ್ಕೆ ಇನ್ನೂಹೆಚ್ಚಿನ ಗಮನ ನೀಡಬೇಕಾಗಿದೆ ಎಂದರು.

tiya_samaja_photo_2 tiya_samaja_photo_3 tiya_samaja_photo_4 tiya_samaja_photo_5 tiya_samaja_photo_6 tiya_samaja_photo_7 tiya_samaja_photo_8 tiya_samaja_photo_9 tiya_samaja_photo_10 tiya_samaja_photo_11 tiya_samaja_photo_12 tiya_samaja_photo_13 tiya_samaja_photo_14 tiya_samaja_photo_15 tiya_samaja_photo_16 tiya_samaja_photo_17 tiya_samaja_photo_18 tiya_samaja_photo_19 tiya_samaja_photo_20 tiya_samaja_photo_21 tiya_samaja_photo_22 tiya_samaja_photo_23 tiya_samaja_photo_24 tiya_samaja_photo_25 tiya_samaja_photo_26

ಹತ್ತನೇ ತರಗತಿಯಲ್ಲಿ ಮಹಾರಾಷ್ಟ್ರದಲ್ಲಿನ ದಕ್ಷಿಣ ಭಾರತೀಯರ ಪೈಕಿ ಅತ್ಯಧಿಕ ಅಂಕ ಗಳಿಸಿದ ಮಯೂರಿ ಸುರೇಶ್ಬಂಗೇರ, ಹನ್ನೆರಡನೇ ತರಗತಿಯಲ್ಲಿ ಅಧಿಕ ಅಂಕ ಗಳಿಸಿದ ರೋಹನ್ ಪಾಲನ್ ಹಾಗೂ ಇತರ ಪ್ರತಿಭಾವಂತವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರಶಸ್ತಿ ವಿಜೇತ ಖ್ಯಾತ ಚಲನಚಿತ್ರ ನಟಿ, ತೀಯಾ ಸಮಾಜದ ಸದಸ್ಯರೂ ಆದ ನಿಶಾಬಂಗೇರ ಅವರು ಯುವ ಸದಸ್ಯರನ್ನುದ್ದೇಶಿಸಿ ಮಾತನಾಡುತ್ತಾ ಯುವಕರು ಸಮಾಜದ ಬೆಳವಣಿಗೆಗೆ ಮಾರಕವಾಗದಂತೆವರ್ತಿಸಬೇಕು ತಮ್ಮಲ್ಲಿರುವ ಪ್ರತಿಭೆಯನ್ನು ಸಮಾಜದ ವಿಕಸನಕ್ಕೆ ಉಪಯೋಗಿಸಬೇಕೆಂದು ಕಿವಿ ಮಾತು ಹೇಳಿದರು.ಶಿಕ್ಷಣ ತಜ್ನೆ ದಿವಿಜಾ ಚಂದ್ರಶೇಖರ್ ಮಾತನಾಡುತ್ತಾ ಸಮಾಜದ ಬಡ ವಿದ್ಯಾರ್ಥಿಗಳ ಬಗ್ಗೆ ಇತರ ಸದಸ್ಯರು ಸಾರ್ವಜನಿಕಸಭೆಯಲ್ಲಿ ಮಾತನಾಡುದರಿಂದ ಅಂತಹ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ನೋವನ್ನುಂಟುಮಾಡಿದಂತಾಗುವುದು. ಅಂತಹಸದಸ್ಯರು ಈ ಬಗ್ಗೆ ಜಾಗೃತವಹಿಸಬೇಕೆಂದರು.

ಮಹಾಸಭೆಯಲ್ಲಿ ಸಮಾಜದ ಟ್ರಷ್ಟಿ ಶಂಕರ ಸಾಲ್ಯಾನ್, ವಿಶ್ವನಾಥ ಯು.ಕೆ. ಸುರೇಶ್ ಬಂಗೇರ, ಪ್ರಭಾಕರ ಕೆ., ಶ್ರಿಧರಸುವರ್ಣ, ಬಾಬು ಬೆಳ್ಚಡ, ಟಿ. ಬಾಬು ಬಂಗೇರ, ಟಿ. ಸುಂದರ್, ಜಿಶಾಂತ್ ಸಾಲ್ಯಾನ್ ಮಾತನಾಡಿ ತಮ್ಮಅಭಿಪ್ರಾಯವನ್ನು ಮಂಡಿಸಿದರು. ಸಮಾಜದ ಇನ್ನೋರ್ವ ಟ್ರಷ್ಟಿ ರವಿ ಎಸ್. ಮಂಜೇಶ್ವರ್ ಸಭೆಯಲ್ಲಿ ಉಪಸ್ಥಿತರಿದ್ದರು.

ಮಹಾಸಭೆಯ ವೇದಿಕೆಯಲ್ಲಿ ಸಮಾಜದ ಬೋರ್ಡ್ ಆಪ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ರೋಹಿದಾಸ ಬಂಗೇರ, ಮಹಿಳಾವಿಭಾಗದ ಕಾರ್ಯಧ್ಯಕ್ಷರುಗಳಾದ ದಿವ್ಯಾ ಕೋಟ್ಯಾನ್ ಮತ್ತು ಉಜ್ವಲ ಚಂದ್ರಶೇಖರ್, ಆರೋಗ್ಯ ನಿಧಿಯ ಕಾರ್ಯಧ್ಯಕ್ಷತಿಮ್ಮಪ್ಪ ಬಂಗೇರ ಹಾಗೂ ಸಮಾಜದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆಶಾ ಉಳ್ಳಾಲ್, ಸುನಿತಾ, ಕುಮುದಾ ಇವರ ಪ್ರಾರ್ಥನೆಯೊಂದಿಗೆ ಗಂಗಾಧರ ಕಲ್ಲಾಡಿಯವರ ಮಾರ್ಗದರ್ಶನದಲ್ಲಿ ದೀಪಹಚ್ಚುದರೊಂದಿಗೆ ಮಹಾಸಭೆಯು ಪ್ರಾರಂಭಗೊಂಡಿತು. ಪ್ರಧಾನ ಕಾರ್ಯದರ್ಶ ಐಲ್ ಬಾಬು ಗತ ಸಭೆಯ ವರದಿಯನ್ನುಸಭೆಯ ಮುಂದಿಟ್ಟರು. ಗೌ. ಕೋಶಾಧಿಕಾರಿ ರಮೇಶ್ ಉಳ್ಳಾಲ್ ಲೆಕ್ಕ ಪತ್ರವನ್ನು ಮಂಡಿಸಿದರು. ಸಮಾಜದ ಅಧ್ಯಕ್ಷಚಂದ್ರಶೇಖರ ಬೆಳ್ಚಡ ಎಲ್ಲರನ್ನು ಸ್ವಾಗತಿಸಿದ್ದು ವಿಶ್ವನಾಥ ಯು. ಕೆ. ವಂದನಾರ್ಪಣೆ ಮಾಡಿದರು.

Write A Comment