ಉಡುಪಿ: ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನಗಳನ್ನು ರಾತ್ರೋರಾತ್ರಿ ಕಳ್ಳರು ಕದ್ದೊಯ್ದ ಘಟನೆ ಬ್ರಹ್ಮಾವರ ಹಾವಂಜೆ ಗ್ರಾಮದ ಕಾರ್ತಿಬೈಲು ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಪೀಟರ್ ಡಿಸೋಜ (65) ಎನ್ನುವವರ ಮನೆಯಲ್ಲಿನ ಹಟ್ಟಿಯಲ್ಲಿ ಕಟ್ಟಿದ್ದ ಮೂರು ದನಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳವಾದ 3 ದನದ ಮೌಲ್ಯವು ಸುಮಾರು ರೂ 30.000/- ಎಂದು ಅಂದಾಜಿಸಲಾಗಿದ್ದು, ಕಳ್ಳರ ಪತ್ತೆಯಾಗಿಲ್ಲ.
ಈ ಬಗ್ಗೆ ಪೀಟರ್ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.