ಮಂಗಳೂರು: ತುಳು ಭಾಷೆ. ಸಂಸ್ಕೃತಿಯ ಬೆಳವಣಿಗೆಯಲ್ಲಿ ತುಳು ಸಿನಿಮಾಗಳು ಮಹತ್ತರವಾದ ಕೆಲಸ ಮಾಡಿದೆ ಎಂದು ಸ್ಪೋಟ್ಸ್‌ಪ್ರಮೋಟರ್‍ಸ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ತಿಳಿಸಿದರು.
ನಗರದ ಜ್ಯೋತಿ ಚಿತ್ರಮಂದಿರದಲ್ಲಿ ಆನಂದ್ ಫಿಲಂಸ್ ಲಾಂಛನದಲ್ಲಿ ಅಡ್ಯಾರ್ ಮಾಧವ ನಾಯ್ಕ್ ನಿರ್ಮಿಸಿ ರಾಮ್ ಶೆಟ್ಟಿ ನಿರ್ದೇಶನದ ಸೂಪರ್ ಮರ್ಮಯೆ ತುಳು ಚಲನಚಿತ್ರದ ಬಿಡುಗಡೆ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಾಮ್ ಶೆಟ್ಟಿ ಅವರು ಸಿನಿಮಾ ನಿರ್ಮಾಣದ ವೇಳೆ ತೋರುವ ಶ್ರದ್ಧೆ ಶ್ಲಾಘನೀಯ. ಅವರು ತುಳುವಿನಲ್ಲಿ ನಿರ್ಮಿಸಿದ ಎಲ್ಲಾ ಚಿತ್ರಗಳು ಒಳ್ಳೆಯ ಗುಣಮಟ್ಟದಿಂದ ಕೂಡಿದ್ದು ತುಳುನಾಡಿನ ಜನರು ಮುಕ್ತವಾಗಿ ಸಿನಿಮಾವನ್ನು ಸ್ವೀಕರಿಸಿದ್ದರು. ತುಳು ಭಾಷೆಯಲ್ಲಿ ತಯಾರಾದ ಒಳ್ಳೆಯ ಸಿನಿಮಾಗಳನ್ನು ಜನ ಸ್ವೀಕರಿಸುತ್ತಾರೆ ಎಂಬುವುದಕ್ಕೆ ತುಳು ಚಿತ್ರರಂಗದ ಇಂದಿನ ಬೆಳವಣಿಗೆಯನ್ನು ಗಮನಿಸಿದಾಗ ತಿಳಿಯುತ್ತದೆ ಎಂದು ಸದಾನಂದ ಶೆಟ್ಟಿ ತಿಳಿಸಿದರು.
ಚಲನ ಚಿತ್ರ ನಿರ್ದೇಶಕ ರಾಮ್ ಶೆಟ್ಟಿ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ತುಳು ಭಾಷೆಯ ಅಭಿಮಾನದಿಂದ ಅವರು ತುಳುವಿನಲ್ಲಿ ನಾಲ್ಕು ಸಿನಿಮಾಗಳನ್ನು ಮಾಡಿದ್ದಾರೆ ಎಂದು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಸಿನಿಮಾಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಎ.ಕೋಟ್ಯಾನ್, ಉದ್ಯಮಿಗಳಾದ ಸಿರಾಜ್ ಅಹ್ಮದ್, ಲಕ್ಷ್ಮೀಶ್ ಭಂಡಾರಿ, ಕಿಶೋರ್ ಡಿ.ಶೆಟ್ಟಿ, ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ಜಯರಾಮ, ಕರ್ನೂರ್ ಮೋಹನ್ ರೈ, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಚಿತ್ರದ ನಿರ್ಮಾಪಕ ಅಡ್ಯಾರ್ ಮಾಧವ ನಾಯ್ಕ್, ನಿರ್ದೇಶಕ ರಾಮ್ ಶೆಟ್ಟಿ, ನಟರಾದ ಶಿವಧ್ವಜ್, ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು. ಗೋಪಿನಾಥ ಭಟ್, ರಾಘವೇಂದ್ರ ರೈ, ನಾಯಕಿ ನಟಿ ದಿವ್ಯಶ್ರೀ, ಶೃದ್ಧಾ ಮುಂತಾದವರು ಉಪಸ್ಥಿತರಿದ್ದರು.
ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪುರುಷೋತ್ತಮ ಭಂಡಾರಿ ವಂದಿಸಿದರು.
ಸೂಪರ್ ಮರ್ಮಯೆ ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ 11 ಥಿಯೇಟರ್‌ಗಳಲ್ಲಿ ತೆರೆ ಕಂಡಿದೆ, ಮಂಗಳೂರಿನಲ್ಲಿ ಜ್ಯೋತಿ, ಬಿಗ್ ಸಿನಿಮಾಸ್, ಸಿನಿಪೊಲೀಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನ, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್, ಬಿ.ಸಿರೋಡ್‌ನಲ್ಲಿ ನಕ್ಷತ್ರ ಹಾಗೂ ಕಾಸರಗೋಡಿನಲ್ಲಿ ಕೃಷ್ಣಾದಲ್ಲಿ ಬಿಡುಗಡೆಗೊಂಡಿದೆ.
ಸೂಪರ್ ಮರ್ಮಯೆ ಸಂಪೂರ್ಣ ಹಾಸ್ಯ ರಂಜನೆಯ ಚಿತ್ರವಾಗಿದ್ದು, ಕುಟುಂಬ ಕುಟುಂಬದೊಳಗೆ ನಡೆಯುವ ಆಂತರಿಕ ಕಲಹಕ್ಕೆ ಹಾಸ್ಯದ ಮನರಂಜನೆ ಒದಗಿಸಲಾಗಿದೆ.