ಕನ್ನಡ ವಾರ್ತೆಗಳು

ಆಟಿ ಅಮಾವಾಸ್ಯೆ : ಕಿನ್ನಿಗೋಳಿಯಲ್ಲಿ ಕಷಾಯ ವಿತರಣೆ.

Pinterest LinkedIn Tumblr

athi_amvase_kasaya_A

ಮಂಗಳೂರು,ಆಗಸ್ಟ್.14 : ಆಟಿ ಅಮಾವಸ್ಯೆಯಂದು ಹಾಲೆ ಮರದ ತೊಗಟೆಯಿಂದ ತಾಯಾರಿಸಿದ ಕಷಾಯ ಸೇವಿಸದರೆ ರೋಗನಿರೋಧಕ ಶಕ್ತಿ ಹೆಚ್ಚಿತ್ತದೆ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ನಾನಾ ರೋಗರುಜಿನಗಳು ದೂರವಾಗುತ್ತವೆ ಎಂಬ ನಂಬಿಕೆ ತುಳುವರದು. ಈ ನಂಬಿಕೆಯಿಂದಲೇ ಶುಕ್ರವಾರ ಮುಂಜಾನೆ ಕಿನ್ನಿಗೋಳಿ ಬಸ್‌ನಿಲ್ದಾಣ ಬಳಿ ಕಿನ್ನಿಗೋಳಿ ಸಜ್ಜನ ಬಂಧುಗಳಿಂದ ಹಾಲೆಮರದ ಕಷಾಯ ವಿತರಣೆ ಕಾರ್ಯಕ್ರಮ ನಡೆಯಿತು.

athi_amvase_kasaya_F athi_amvase_kasaya_B athi_amvase_kasaya_C athi_amvase_kasaya_E

ಹಾಳೆ ಮರದ ತಿಗಟೆಯನ್ನು ಬೆಣಚು ಕಲ್ಲಿನಿಂದ ಜಜ್ಜಿ ತೆಗೆದು, ಅದನ್ನು ಕಲ್ಲಿನಲ್ಲಿ ಅರೆದುರಸವನ್ನು ತೆಗೆದು, ಒಮ, ಬೆಳ್ಳುಳಿ, ಕರಿಮೇಣಸುಗಳನ್ನು ಸೇರಿಸಿ ಕಷಾಯ ತಯಾರಿಸುತ್ತಾರೆ, ಅದಕ್ಕೆ ಬೆಣಚುಕಲ್ಲಿನ ಒಗ್ಗರಣೆ ಹಾಕುತ್ತಾರೆ. ಕಷಾಯ ಕಹಿ ಇರುವುದರಿಂದ ಕುಡಿದ ತಕ್ಷಣ ಬೆಲ್ಲ ಅಥವಾ ಗೇರು ಬೀಜವನ್ನು ನೆಂಜಿಕೊಳ್ಳುವುದೂ ಇದೆ. ಬೆಳಗ್ಗೆ ಖಾಲಿ ಹೊಟ್ಟೆಗೆ ಈ ಕಷಾಯವನ್ನು ಕುಡಿಯಬೇಕು. ಒಂದು ಗಂಟೆಯ ಅನಮ್ತರ ಮೆಂತೆ ಗಂಜಿ ಸೇವಿಸುವುದು ತುಳುವರ ಕ್ರಮ.

Write A Comment