ಮಂಗಳೂರು, ಅಗಸ್ಟ್ .14: ಪ್ರಧಾನ ಮಂತ್ರಿಗಳು ಘೋಷಿಸಿದ ‘ಸುರಕ್ಷಾ ಬಂಧನ’ ಅಭಿಯಾನ ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಸುರಕ್ಷಾ ವಿಮಾ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳ ನೋಂದಣಿ ಮಾಡಲಾಗುತ್ತದೆ. ದೇಶದ ಎಲ್ಲಾ ಬ್ಯಾಂಕ್‌ಗಳಲ್ಲಿ ‘ರಕ್ಷಾ ಬಂಧನ’ ಹಬ್ಬದ ಪ್ರಯಕ್ತ ಮೇಲಿನ ಯೋಜನೆಗಳ ಪ್ರೀಮಿಯಮ್ ಮೊತ್ತವನ್ನು ಉಡುಗೊರೆಯಾಗಿ ನೀಡಲು ಹೊಸ ಯೋಜನೆಗಳ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ.
ಮೊದಲನೆಯ ಯೋಜನೆಯಾದ ಸುರಕ್ಷಾ ಠೇವಣಿ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಒಂದು ಬಾರಿ ರೂ. 201 /- ಪಾವತಿಸಿ ತನ್ನ ಸಹೋದರಿಗೆ ನಿರಂತರವಾಗಿ ಪ್ರಧಾನ ಮಂತ್ರಿ ಜೀವನ ಸುರಕ್ಷಾ ಯೋಜನೆಯಲ್ಲಿ ನೋಂದಾಯಿಸಬಹುದು. ಎರಡನೆಯ ಯೋಜನೆ ‘ಜೀವನ ಸುರಕ್ಷಾ ಠೇವಣಿ ಯೋಜನೆ: ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ ತನ್ನ ಸಹೋದರಿಗೆ ಒಂದು ಬಾರಿ ರೂ.5001 – ಪಾವತಿಸಿ ನಿರಂತರವಾಗಿ ಪ್ರತಿ ವರ್ಷ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ ನೋಂದಾಯಿಸಿ ಪ್ರತಿ ವರ್ಷ ನವೀಕರಿಸಬಹುದು. ನೋಂದಣಿ ವ್ಯವಸ್ಥೆಯನ್ನು ಹಂಪನಕಟ್ಟಾ ಸಿಂಡಿಕೇಟ್ ಬ್ಯಾಂಕ್‌ನ ಕಟ್ಟಡದಲ್ಲಿರುವ ‘ಆರ್ಥಿಕ ಸೇರ್ಪಡೆ ಸಂಪನ್ಮೂಲ ಕೇಂದ್ರ’ ದಲ್ಲಿ ಮಾಡಲಾಗಿದೆ.
ಮೊದಲನೆಯ ಹಂತದಲ್ಲಿ, ನೋಂದಣಿ ಪ್ರಕ್ರಿಯೆಯು ದಿನಾಂಕ ಆಗಸ್ಟ್ 17 ರಿಂದ 31 ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಪ್ರತಿ ದಿನ ಮುಂಜಾನೆ 11 ಘಂಟೆಯಿಂದ ಮಧ್ಯಾಹ್ನ 2 ಘಂಟೆಯವರೆಗೆ ನೋಂದಣಿ ಮಾಡಲಾಗುವುದು.
ಈ ಶಿಬಿರದಲ್ಲಿ ಎಲ್ಲಾ ಬ್ಯಾಂಕ್‌ನ ಖಾತೆದಾರರಿಗೆ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ನೋಂದಣಿ ಮಾಡಲಿಚ್ಚಿಸುವವರು ಉಡುಗೊರೆ ಪಡೆದು ಕೊಳ್ಳುವವರ ಬ್ಯಾಂಕ್ ಪಾಸ್ ಪುಸ್ತಕ ಹಾಗೂ ವಯಸ್ಸಿನ ದಾಖಲೆಯ ಪ್ರತಿಯೊಂದಿಗೆ ಶಿಬಿರಕ್ಕೆ ಬೇಟಿ ನೀಡಿ ನೋಂದಾಯಿಸಲು ಕೋರಲಾಗಿದೆ. ಈವರೆಗೂ ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಗಳಡಿ ನೋಂದಣಿ ಮಾಡದೇ ಇರುವ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯಲು ಪ್ರಕಟಣೆ ತಿಳಿಸಿದೆ