ಕನ್ನಡ ವಾರ್ತೆಗಳು

ಧ್ವಜಸ್ತಂಭದಲ್ಲಿ ಯುವ ಕಾಂಗ್ರೆಸ್ ಧ್ವಜವನ್ನು ಹಾರಿಸಿ ಅವಮಾನ : ಯುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

Pinterest LinkedIn Tumblr

Bjp_Protest_konaje_1

ಕೊಣಾಜೆ, ಆ.14: ಕಳೆದ ರವಿವಾರ ಅಸೈಗೊಳಿ ಲಯನ್ಸ್ ಸೇವಾ ಸದನದ ವಠಾರದಲ್ಲಿ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ರಾಷ್ಟ್ರ ಧ್ವಜಸ್ತಂಭದಲ್ಲಿ ಯುವ ಕಾಂಗ್ರೆಸ್ ಧ್ವಜವನ್ನು ಹಾರಿಸಿರುವುದನ್ನು ಖಂಡಿಸಿ ಬಿಜೆಪಿ ಮಂಗಳೂರು ಕ್ಷೇತ್ರ ಯುವಮೋರ್ಚಾ ವತಿಯಿಂದ ಗುರುವಾರ ಅಸೈಗೋಳಿ ಜಂಕ್ಷನ್‌ನಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾ ಡಿದ ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ರಾಷ್ಟ್ರ ಧ್ವಜಸ್ತಂಭದಲ್ಲಿ ಯುವಕಾಂಗ್ರೆಸ್ ಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಧ್ವಜವನ್ನು ಅವಮಾನಿಸುವ ಕೆಲಸಕ್ಕೂ ಕೈಹಾಕಿರುವುದು ಖಂಡನೀಯ. ಯುವಮೋರ್ಚಾ ಈ ಘಟನೆಯನ್ನು ಖಂಡಿಸುತ್ತದೆ ಎಂದರು.

Bjp_Protest_konaje_2 Bjp_Protest_konaje_3

ಪ್ರತಿಭಟನೆಯಲ್ಲಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ, ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಪಂ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರು, ಬಿಜೆಪಿ ಮುಖಂಡರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಯಶವಂತ ಅಮೀನ್ ಹಾಗೂ ಸಂಜೀವ ಶೆಟ್ಟಿ ಅಂಬ್ಲಮೊಗರು, ಯುವಮೋರ್ಚಾ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ರಾಜೇಶ್ ಶೆಟ್ಟಿ ಪಜೀರುಗುತ್ತು, ಗೋಪಿನಾಥ ಬಗಂಬಿಲ, ನಮಿತಾ ಶ್ಯಾಂ, ರಾಜೀವಿ ಕೆಂಪುಮಣ್ಣು, ಧನ್ಯವತಿ, ದೇವಕಿ, ಪ್ರಕಾಶ್ ಗಾಂಧಿನಗರ, ಪ್ರಕಾಶ್ ಸಿಂಪೋನಿ, ಸುರೇಶ್ ಚೌಟ, ನಾರಾಯಣ ರೈ, ಹರೀಶ್ ಅಂಬ್ಲಮೊಗರು, ಅಸ್ಗರ್ ಆಲಿ ಭಾಗವಹಿಸಿದ್ದರು.

ಮನೋಜ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಸಾದ್ ಕಕ್ಕೆಮಜಲು ವಂದಿಸಿದರು. ಇದಕ್ಕೂ ಮುನ್ನ ಅಸೈಗೋಳಿ ಜಂಕ್ಷನ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

Write A Comment