ಮಂಗಳೂರು, ಆ.10: ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮಕ್ಕೆ ಆಗಮಿಸುವ ಪ್ರವಾಸಿಗರ, ವಿಹಾರಕ್ಕೆ ಬರುವವರ ಅನುಕೂಲಕ್ಕಾಗಿ ನಿಸರ್ಗಧಾಮದೊಳಗೆ ಮೋನೊ ರೈಲು ಮತ್ತು ಸೋಲಾರ್ ವಾಹನಗಳನ್ನು ವ್ಯವಸ್ಥೆಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಪಿಲಿಕುಳ ನಿಸರ್ಗಧಾಮದ ಅಭಿವೃದ್ಧಿಯ ರೂವಾರಿ ಭರತ್‌ಲಾಲ್ ಮೀನಾ ಹೇಳಿದ್ದಾರೆ.
ಆಟಿಕೂಟ ಸಂಭ್ರಮದಲ್ಲಿ ಭಾಗವ ಹಿಸಿದ ಅವರು, ಸುದ್ದಿಗಾರರ ಜತೆ ಮಾತನಾಡುತ್ತಾ, ಪಿಲಿಕುಳ ನಿಸರ್ಗಧಾಮ ಇಷ್ಟೊಂದು ವ್ಯಾಪಕ ವಾಗಿ ಅಭಿವೃದ್ಧಿ ಹೊಂದು ವುದೆಂಬ ಕಲ್ಪನೆ ಇರಲಿಲ್ಲ ಎಂದರು. ಹಿಂದೆ ನಗರದ ಜನತೆಗೆ ಕದ್ರಿ ಪಾರ್ಕ್ ಬಿಟ್ಟು ವಾರಾಂತ್ಯದಲ್ಲಿ ವಿಹಾರಕ್ಕೆಂದ ಪ್ರತ್ಯೇಕ ವ್ಯವಸ್ಥೆ ಇಲ್ಲವಾಗಿತ್ತು. ಆ ಸಂದರ್ಭಲ್ಲಿ ಮೂಡಿಬಂದ ಪಿಲಿಕುಳ ನಿಸರ್ಗ ಧಾಮದ ಕಲ್ಪನೆಯು ಇಂದು ಬೃಹದಾಕಾರವಾಗಿ ವ್ಯಾಪಿಸಿದೆ. ಪ್ರಸ್ತುತ ಪಿಲಿಕುಳ ನಿಸರ್ಗಧಾಮವು ಸುಮಾರು 300 ಎಕರೆ ಪ್ರದೇಶವನ್ನು ವ್ಯಾಪಿಸಿಕೊಂಡಿದ್ದು, ಇನ್ನಷ್ಟು ಅಭಿ ವೃದ್ಧಿಗಾಗಿ ಮತ್ತೆ 100 ಎಕರೆ ಯಷ್ಟು ಭೂಮಿಯ ಅಗತ್ಯ ವಿದೆ. ಮಾತ್ರವಲ್ಲದೆ ಇನ್ನಷ್ಟು ಸಂಖ್ಯೆ ಯಲ್ಲಿ ಸಾರ್ವಜನಿಕರು, ಪ್ರವಾಸಿ ಗರನ್ನು ಆಕರ್ಷಿಸುವುದಕ್ಕಾಗಿ ಧಾ ಮದೊಳಗೆ ಸುತ್ತಾಡಲು ಸಮ ರ್ಪಕ ವ್ಯವಸ್ಥೆಯಾಗಬೇಕಿದೆ.
ನಗರ ದಿಂದ ತಣ್ಣೀರುಬಾವಿಗೆ ನೇರ ಸಂಪರ್ಕವನ್ನು ಕಲ್ಪಿಸುವ ಅಗತ್ಯವಿದೆ. ಇದಕ್ಕಾಗಿ ತಣ್ಣೀರುಬಾವಿಯಿಂದ ಪಿಲಿಕುಳಕ್ಕೆ ಸುಮಾರು 8 ಕಿ.ಮೀ. ಅಂತರದ ರೋಪ್‌ವೇಯನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ನಿರ್ಮಿಸುವ ಪ್ರಸ್ತಾವನೆಯೂ ಇದೆ. ನಿಸರ್ಗಧಾಮದೊಳಗೆ ಬುಡ ಕಟ್ಟು ಜನಾಂಗದ ಬಗ್ಗೆ ನಗರದ ನಿವಾಸಿ ಗಳಿಗೆ ಪರಿಚಯ ನೀಡುವ ನಿಟ್ಟಿನಲ್ಲಿ ಬುಡಕಟ್ಟು ಗ್ರಾಮವನ್ನು ಸೃಷ್ಟಿಸುವ ಇರಾದೆಯೂ ಇದೆ ಎಂದು ಅವರು ವಿವರಿಸಿದರು.
ಆಡಳಿತ ವ್ಯವಸ್ಥೆಗೆ ಸ್ವತಂತ್ರ ಪ್ರಾಧಿಕಾರ ಅಗತ್ಯ
ಪಿಲಿಕುಳದ ಆಡಳಿತವನ್ನು ಸರಕಾರದ ಅನುದಾನದೊಂದಿಗೆ ಸ್ವತಂತ್ರವಾಗಿ ನಿರ್ವಹಿಸಲು ಪ್ರಾಧಿಕಾರದ ಅಗತ್ಯವಿದೆ. ಇದರಿಂದ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಲು ಸಾಧ್ಯವಾಗಲಿದೆ ಹಾಗೂ ನಿಸರ್ಗಧಾಮದ ವಿಶೇಷತೆಗಳ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರದ ಅಗತ್ಯವಿದೆ ಎಂದು ಭರತ್‌ಲಾಲ್ ಮೀನಾ ಹೇಳಿದರು. ಪಿಲಿಕುಳದ ಒಳಗಡೆಯಿಂದ ಬೇರೆ ಬೇರೆ ಕಡೆಗಳಿಗೆ ತೆರಳುವ ಮಾರ್ಗವಿದ್ದು, ಆ ಮಾರ್ಗಗಳನ್ನು ಮುಚ್ಚುವ ಮೂಲಕ ನಿಸರ್ಗ ಧಾಮ ದೊಳಗಡೆ ಕಳ್ಳತನ ನಡೆಯುವುದನ್ನು ತಪ್ಪಿಸಬಹುದಾಗಿದೆ ಎಂದವರು ತಿಳಿಸಿದರು.
ಶಿರಾಡಿ ಬಳಿ ಪಶ್ಚಿಮ ಘಟ್ಟದ ಪರಿಚಯ ತಾಣ
ಪಶ್ಚಿಮ ಘಟ್ಟದಲ್ಲಿರುವ ಜೀವ ವೈವಿಧ್ಯ, ಪರಿಸರವನ್ನು ಪ್ರತಿಬಿಂಬಿಸುವ ಕಾರ್ಯ ಬಹುತೇಕವಾಗಿ ಪಿಲಿಕುಳ ನಿಸರ್ಗಧಾಮದ ಮೂಲಕ ಮಾಡಲಾ ಗುತ್ತಿದೆ. ಆದರೆ ಇಲ್ಲಿ ಹೆಚ್ಚಿನ ಅಭಿವೃದ್ಧಿಗೆ ಅವಕಾಶ ಇಲ್ಲದಿರುವುದರಿಂದ ಪಿಲಿಕುಳ ನಿಸರ್ಗಧಾಮವು ಅರಣ್ಯ ಇಲಾಖೆಯ ಜತೆ ಸೇರಿಕೊಂಡು ಶಿರಾಡಿ ಬಳಿ ಸುಮಾರು 1,000 ಎಕರೆ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ವಿಶೇಷತೆಯನ್ನು ಪ್ರವಾಸಿಗರಿಗೆ ಪರಿಚಯಿಸುವ ತಾಣ ವನ್ನಾಗಿಸುವ ಚಿಂತನೆ ಇದೆ ಎಂದು ಭರತ್‌ಲಾಲ್ ಪತ್ರಕರ್ತರ ಜತೆ ಪ್ರಸ್ತಾಪಿಸಿದರು.
ಇದೊಂದು ನೂತನ ಪರಿಕಲ್ಪನೆಯಾ ಗಿದ್ದು, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾಪವನ್ನು ಸಲ್ಲಿಸಿ ಒಪ್ಪಿಗೆ ಪಡೆಯಬೇಕಾಗಿದೆ. ಧರ್ಮಸ್ಥಳ, ಸುಬ್ರಹ್ಮಣ್ಯ ಮೊದಲಾದ ಧಾರ್ಮಿಕ ಕೇಂದ್ರಗಳಿಗೆ ಬರುವ ಯಾತ್ರಾರ್ಥಿಗಳನ್ನು ಈ ತಾಣಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಿ, ಪಶ್ಚಿಮ ಘಟ್ಟದ ನೈಜ ಚಿತ್ರಣವನ್ನು ಒದಗಿಸುವ ಯೋಜನೆ ಇದಾಗಿದೆ. ಭರತ್‌ಲಾಲ್ ಮೀನಾ ಅವರಿಂದ ಇಂದು ಈ ಬಗ್ಗೆ ಪ್ರಸ್ತಾವನೆ ವ್ಯಕ್ತವಾಗಿದ್ದು, ಇನ್ನಷ್ಟೇ ಸಿದ್ಧತೆಗಳು ಆರಂಭಗೊಳ್ಳಬೇಕಿದೆ ಎಂದು ಪಿಲಿಕುಳ ಅರ್ಬನ್ ಇಕೋ ಪಾರ್ಕ್‌ನ ಸಂಯೋಜಕ ಮುಹಮ್ಮದ್ ಬ್ಯಾರಿ ತಿಳಿಸಿದರು.
ಅರ್ಬನ್ ಇಕೋ ಪಾರ್ಕ್‌ನ ಡಿಪಿಆರ್‌ಗೆ ಟೆಂಡರ್
ಪಿಲಿಕುಳ ನಿಸರ್ಗಧಾಮದ 10 ಎಕರೆ ಪ್ರದೇಶದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಲಿರುವ ಅರ್ಬನ್ ಇಕೋ ಪಾರ್ಕ್‌ನ ಡಿಪಿಆರ್ (ವಿಸ್ತೃತ ಯೋಜನಾ ವರದಿ)ಗಾಗಿ ಟೆಂಡರ್ ಕರೆಯಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಭಾಗಿತ್ವದಲ್ಲಿ ನಗರದಲ್ಲಿ ಆಮ್ಲಜನಕ ಉತ್ಪತ್ತಿಯ ತಾಣವನ್ನು ಸೃಷ್ಟಿಸುವ ಉದ್ದೇಶದಿಂದ ಈ ಇಕೋ ಪಾರ್ಕ್ ನಿರ್ಮಿಸಲು ಚಿಂತಿಸಲಾಗಿದ್ದು, ಡಿಪಿಆರ್ ಸಿದ್ಧಗೊಂಡು ಒಂದು ವರ್ಷದೊಳಗೆ ಪಾರ್ಕ್ ಸಂಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಪಿಲಿಕುಳ ಅರ್ಬನ್ ಇಕೋ ಪಾರ್ಕ್‌ನ ಸಂಯೋಜಕ ಮುಹಮ್ಮದ್ ಬ್ಯಾರಿ ತಿಳಿಸಿದರು.