ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಜು. 31ರಂದು ಅಂಧೇರಿ ಪಶ್ಚಿಮದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಶಾಲಿನಿ ಜಿ. ಶಂಕರ್ ಸಭಾಗೃಹದಲ್ಲಿ ಮೊಗವೀರ ಬ್ಯಾಂಕಿನ ನೂತನ ನಿರ್ದೇಶಕ ಮಂಡಳಿಯ ಅಭಿನಂದನೆ ಕಾರ್ಯಕ್ರಮವು ಮೊಗವೀರ ಮುಂದಾಳು ನಾಡೋಜ ಡಾ| ಜಿ. ಶಂಕರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಇದು ಮೊಗವೀರ ಸಮಾಜದ ಗೆಲುವಾಗಿದ್ದು ಮೊಗವೀರ ಬ್ಯಾಂಕ್ ನಮ್ಮದೇ ಆಗಿದೆ. ನಾವೆಲ್ಲರೂ ಬ್ಯಾಂಕಿನ ಏಳಿಗೆಗಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ನಾಡೋಜ ಡಾ| ಜಿ. ಶಂಕರ್ ಹೇಳಿದರು.
ಬ್ಯಾಂಕ್ ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿಯು ಒಟ್ಟಿಗೆ ಸಾಗಲಿ. ನೂತನ ಆಡಳಿತ ಮಂಡಳಿಯ ಜವಾಬ್ದಾರಿ ತುಂಬಾ ಇದೆ. ಬ್ಯಾಂಕಿನ ಅಭಿವೃದ್ಧಿಗೆ ನಮ್ಮೆಲ್ಲರ ಬೆಂಬಲ, ಪ್ರೋತ್ಸಾಹ ಸದಾ ಇರುತ್ತದೆ. ಬ್ಯಾಂಕಿನ ನೌಕರರು ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡಿ, ಗ್ರಾಹಕರ ಹಾಗೂ ಬ್ಯಾಂಕಿನ ಸಂಬಂಧವನ್ನು ಗಟ್ಟಿಗೊಳಿಸಬೇಕು. ಬಡವರಿಗೆ ಬೇಕಾಗಿ ಬ್ಯಾಂಕ್ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.
ಉದ್ಯಮಿ ವೇದ ಪ್ರಕಾಶ್ ಶ್ರೀಯಾನ್ ಮಾತನಾಡಿ, ಮೊಗವೀರರಾದ ನಾವೆಲ್ಲರೂ ಒಂದೇ ಆಗಿದ್ದೇವೆ. ನಮ್ಮ ದೃಷ್ಟಿ ಬ್ಯಾಂಕಿನ ಅಭಿವೃದ್ಧಿಯೊಂದೇ ಆಗಬೇಕು. ಅದಕ್ಕಾಗಿ ಶೇ. 100ರಷ್ಟು ಕಾರ್ಯನಿರ್ವಹಿಸಬೇಕಾಗಿದೆ. ಇದರಲ್ಲಿ ಬ್ಯಾಂಕಿನ ನೌಕರರ ಪಾತ್ರ ತುಂಬಾ ಇದೆ. ಅವರ ಸಮಸ್ಯೆಗಳನ್ನು ನೂತನ ಆಡಳಿತ ಮಂಡಳಿಗೆ ತಿಳಿಸಿ ಬಗೆಹರಿಸಬಹುದು ಎಂದರು.
ಸಮಾಜ ಸೇವಕ ಕೇಶವ ಕುಂದರ್ ಮಾತ ನಾಡಿ, ಜಿ. ಶಂಕರ್ ಅವರ ಪ್ರೋತ್ಸಾಹದಲ್ಲಿ ಸಮಾ ಜವು ಇಂದು ಒಗ್ಗಟ್ಟಾಗಿದೆ. ಬ್ಯಾಂಕಿನ ಅಭಿವೃದ್ಧಿಯಲ್ಲೂ ಅವರ ಮಾರ್ಗ ದರ್ಶನದಲ್ಲಿ ನಾವೆಲ್ಲರೂ ಒಟ್ಟಾಗಿ ದುಡಿಯಬೇಕು. ಬ್ಯಾಂಕಿನ ಶಾಖೆ ಗಳನ್ನು ವಿಸ್ತರಿಸಬೇಕು ಎಂದರು.
ನೂತನ ಮಂಡಳಿ ಸದಸ್ಯರಿಗೆ ಡಾ| ಜಿ. ಶಂಕರ್ ಅವರು ಪುಷ್ಪಗುತ್ಛವಿತ್ತು ಅಭಿನಂದಿಸಿದರು. ಪ್ಯಾನೆಲ್ ವಿಜಯಕ್ಕೆ ಸಹಕರಿಸಿದವರನ್ನು ಗೌರವಿಸ ಲಾಯಿತು.
ವೇದಿಕೆಯಲ್ಲಿ ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷರಾದ ಕೀರ್ತಿರಾಜ್ ಸಾಲ್ಯಾನ್, ಡಿ. ಎಲ್. ಅಮೀನ್, ಮೊಗವೀರ ವ್ಯವಸ್ಥಾಪಕ ಮಂಡಳಿ ವಿಶ್ವಸ್ತ ಡಿ. ಕೆ. ಪ್ರಕಾಶ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ಮಹಾಬಲ ಕುಂದರ್, ಶ್ರೀ ಮದ್ಭಾರತ ಮಂಡಳಿ ಅಧ್ಯಕ್ಷ ಜಗನ್ನಾಥ ಪುತ್ರನ್, ಮಹಾಲಕ್ಷಿ ಭಜನಾ ಮಂಡಳಿ ಅಧ್ಯಕ್ಷ ಗಣಪ ಸುವರ್ಣ, ಬ್ಯಾಂಕಿನ ಸಿಇಒ ಎಂ. ಸಿ. ಶೆಟ್ಟಿ, ನೂತನವಾಗಿ ನಿರ್ದೇಶಕ ಮಂಡಳಿಗೆ ಆಯ್ಕೆಯಾದ ಸುರೇಶ್ ಕಾಂಚನ್, ಗೋಪಾಲ್ ಪುತ್ರನ್, ದಾಮೋದರ್ ಡಿ. ಕರ್ಕೇರ, ಜಯಶೀಲ ತಿಂಗಳಾಯ, ಭಾಸ್ಕರ್ ಕಾಂಚನ್, ನ್ಯಾಯವಾದಿ ಜನಾರ್ದನ ಟಿ. ಮೂಲ್ಕಿ, ಕೆ. ಎಲ್. ಬಂಗೇರ, ಮುಕೇಶ್ ಕೆ. ಬಂಗೇರ, ಧರ್ಮಪಾಲ್ ಪಿ., ಪುರುಷೋತ್ತಮ್ ಶ್ರೀಯಾನ್, ಜಗದೀಶ್ ಜೆೆ. ಕಾಂಚನ್, ಶೀಲಾ ಐ. ಅಮೀನ್, ಸೋನಂ ಎ. ಸುವರ್ಣ, ಮಹಾಲಕ್ಷಿ ಹೌಸಿಂಗ್ ಸೊಸೈಟಿಯ ಭಾಸ್ಕರ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಮೊಗವೀರ ವ್ಯವಸ್ಥಾಪಕ ಮಂಡಳಿ ಕಾರ್ಯದರ್ಶಿ ಸಂಜೇವ ಕೆ. ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.