ಕನ್ನಡ ವಾರ್ತೆಗಳು

ಸ್ನಾತಕೋತ್ತರ ಪದವಿ ಶುಲ್ಕವನ್ನು ಇಳಿಸುವಂತೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ , ಪ್ರತಿಭಟನೆಗೆ ಮಣಿದು ಶುಲ್ಕವನ್ನು ಇಳಿಸಿದ ವಿಶ್ವವಿದ್ಯಾನಿಲಯ : ಎಬಿವಿಪಿಯಿಂದ ವಿಜಯೋತ್ಸವ

Pinterest LinkedIn Tumblr

Abvp_vijayotsava_1

ಮಂಗಳೂರು: ಸ್ನಾತಕೋತ್ತರ ಕೋರ್ಸುಗಳ ಸ್ವ`ವಿತ್ತೀಯ ಶುಲ್ಕನ್ನು ಇಳಿಸುವಂತೆ ಆಗ್ರಹಿಸಿ ಎಬಿವಿಪಿ ಇಂದೂ ಸಹ ವಿಶ್ವವಿದ್ಯಾನಿಲಯ ಆಡಳಿತ ಕಛೇರಿ ಮತ್ತು ಕೌನ್ಸಿಲಿಂಗ್ ಕೇಂದ್ರದ ಎದುರು ಪ್ರತಿಭಟನೆಯನ್ನು ನಡೆಸಿತು.

ಜುಲೈ 21 ರಂದು ಎಬಿವಿಪಿ ನಿಯೋಗ ಉಪಕುಲಪತಿಗಳನ್ನು ಭೇಟಿ ಮಾಡಿ ಶುಲ್ಕವನ್ನು ಇಳಿಸಬೇಕೆಂದು ಆಗ್ರಹಿಸಿತ್ತು. ಎಬಿವಿಪಿ ಮನವಿಗೆ ಸ್ಪಂದಿಸಿದ ವಿವಿಯ ಆಡಳಿತ ಮಂಡಳಿ ಮೆರಿಟ್ ಕೋಟಾದ ಶುಲ್ಕವನ್ನು ಇಳಿಸಿತ್ತು.

ಆದರೆ, ಏರಿಕೆ ಮಾಡಿಲಾಗಿದ್ದ ಸ್ವವಿತ್ತೀಯ ಕೋಟದ ಶುಲ್ಕವನ್ನು ಇಳಿಸದ ವಿವಿಯ ಕ್ರಮವನ್ನು ಖಂಡಿಸಿ ಹಾಗೂ ಶುಲ್ಕವನ್ನು ಇಳಿಸುವಂತೆ ಆಗ್ರಹಿಸಿ ಜು.27 ರಿಂದ ಎಬಿವಿಪಿ ವಿವಿಯ ಆವರಣದಲ್ಲಿ ನಿರಂತರ ಹೋರಾಟ ನಡೆಸಿತ್ತು.

ಎಬಿವಿಪಿ ಹೋರಾಟಕ್ಕೆ ಮಣಿದ ವಿಶ್ವವಿದ್ಯಾನಿಲಯವು, ಏರಿಕೆ ಮಾಡಲಾಗಿದ್ದ ಸ್ವವಿತ್ತೀಯ ಶುಲ್ಕವನ್ನು ಇಳಿಸಲು ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಿತು. ಇದು ಎಬಿವಿಪಿ ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಪರವಾಗಿ ನಿರಂತರವಾಗಿ ಹೋರಾಟಕ್ಕೆ ದೊರೆತ ಜಯವಾಗಿದೆ. ಪ್ರತಿಭಟನೆಗೆ ಸ್ಪಂದಿಸಿ, ಶುಲ್ಕವನ್ನು ಇಳಿಸಿದ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಿಗೆ ಮತ್ತು ಆಡಳಿತ ಮಂಡಳಿಗೆ ಎಬಿವಿಪಿ ಧನ್ಯವಾದಗಳನ್ನು ಸಲ್ಲಿಸಿದೆ.

Abvp_vijayotsava_2 Abvp_vijayotsava_3 Abvp_vijayotsava_4 Abvp_vijayotsava_5 Abvp_vijayotsava_6 Abvp_vijayotsava_8 Abvp_vijayotsava_9 Abvp_vijayotsava_10

ವಿದ್ಯಾರ್ಥಿಗಳಿಂದ ವಿಜಯೋತ್ಸವ :

ಎಬಿವಿಪಿ ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಪರವಾಗಿ ನಿರಂತರವಾಗಿ ಹೋರಾಟಕ್ಕೆ ದೊರೆತ ಜಯವಾಗಿದೆ ಎಂದು ತಿಳಿಸಿರುವ ಎಬಿವಿಪಿ ಸಂಘಟನೆ ಪ್ರತಿಭಟನೆಗೆ ಸ್ಪಂದಿಸಿ, ಶುಲ್ಕವನ್ನು ಇಳಿಸಿದ ವಿಶ್ವವಿದ್ಯಾನಿಲಯದ ಕ್ರಮಕ್ಕೆ ಆನು.ದ ವ್ಯಕ್ತಪಡಿಸಿ, ನಗರದಲ್ಲಿಂದು ವಿಜಯೊತ್ಸವ ಆಚರಿಸಿತ್ತು.

Write A Comment