ಕನ್ನಡ ವಾರ್ತೆಗಳು

ಮಂಗಳೂರು-ಮುಂಬೈ ಕೆ‌ಎಸ್‌ಆರ್‌ಟಿಸಿ ವೋಲ್ವೋ ಬಸ್ ಪುನರಾರಂಭ

Pinterest LinkedIn Tumblr

Ksrtc_mubai_Rate

ಮಂಗಳೂರು, ಜುಲೈ. 27 :  ಮಂಗಳೂರು-ಮುಂಬೈ ಮಾರ್ಗದಲ್ಲಿ ಮಲ್ಟಿ‌ಆಕ್ಸ್‌ಲ್ ವೋಲ್ವೋ ಸಾರಿಗೆಯನ್ನು ಜುಲೈ27 ರಿಂದ ಪುನಃ ಪ್ರಾರಂಭಿಸಿ ಕಾರ್ಯಚರಣೆ  ಮಾಡಲಾಗುತ್ತಿದೆ.

ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಸದರಿ ಮಾರ್ಗದಲ್ಲಿ ಪ್ರೋತ್ಸಾಹಕ ಪ್ರಯಾಣ ಟಿಕೆಟ್ ದರ ವಿಧಿಸಿ ಕಾರ್‍ಯಾಚರಣೆ ಮಾಡಲಾಗುತ್ತಿದೆ. ಮಂಗಳೂರು-ಮುಂಬೈ ಮಾರ್ಗದ ಮಲ್ಟಿ ಆಕ್ಸ್‌ಲ್ ಸಾರಿಗೆಗೆ ಟಿಕೆಟ್ ದರ ರೂ. 1200  ಹಾಗೂ ಮಂಗಳೂರು-ಪೂನಾ ಮಾರ್ಗದ ಮಲ್ಟಿ ಆಕ್ಸ್‌ಲ್ ಸಾರಿಗೆಗೆ ಟಿಕೆಟ್ ರೂ. 1150  ನಿಗದಿಪಡಿಸಲಾಗಿದೆ.

ಸದರಿ ಸಾರಿಗೆಗಳ ಉಪಯೋಗವನ್ನು ಸಾರ್ವಜನಿಕ ಪ್ರಯಾಣಿಕರು ಪಡೆಕೊಳ್ಳಬಹುದಾಗಿರುತ್ತದೆ ಎಂದು ಕೆ.ಎಸ್.ಆರ್.ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿರುತ್ತಾರೆ.

Write A Comment