ಮನೋರಂಜನೆ

ಸನ್ನಿಲಿಯೋನ್ ಗೆ ಮುಂಬೈಗಿಂತ ಬೆಂಗಳೂರು ನೂರುಪಾಲು ಚೆನ್ನಾಗಿದೇ ಅಂತೆ !

Pinterest LinkedIn Tumblr

psmec27Sunny_0

ಆಹಾ… ಮುಂಬೈಗಿಂತ ನಿಮ್ಮ ಬೆಂಗಳೂರು ನೂರುಪಾಲು ಚೆನ್ನಾಗಿದೆ. ಇಲ್ಲಿನ ಹವಾಮಾನ, ರೀತಿ-ನೀತಿಗಳು ತುಂಬಾ ಆಕರ್ಷಣೀಯವಾಗಿವೆ. ನನಗೆ ಮುಂಬೈ ಅಥವಾ ಇನ್ನಾವುದೇ ಮಹಾನಗರಗಳಿಗಿಂತಲೂ ಬೆಂಗಳೂರು ಬೆಸ್ಟ್.. ಯಾರು ಹೀಗೆ ಬೆಂಗಳೂರನ್ನು ಬಾಯಿತುಂಬಾ ಹೊಗಳಿದ್ದು ಅಂತಾ ಕೇಳ್ತೀರಾ… ಬಾಲಿವುಡ್‌ನ ಹಾಟ್ ಬೆಡಗಿ ಸನ್ನಿ ಲಿಯೋನ್. ಸನ್ನಿ ಲಿಯೋನ್ ಹಾಲಿ ಈಗ ಬೆಂಗಳೂರು ಕ್ಯಾಂಪ್‌ನಲ್ಲಿದ್ದಾರೆ. ಚಿತ್ರ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರ ‘ಲವ್ ಯು ಅಲಿಯಾ’ ಚಿತ್ರದಲ್ಲಿನ ಒಂದು ಐಟಂಗಾಗಿ ಇಲ್ಲಿಗೆ ಬಂದಿದ್ದಾಳೆ.

ಸೃಜನ್ ಲೋಕೇಶ್ ನಟನೆಯ ಈ ಚಿತ್ರದಲ್ಲಿ ಸನ್ನಿಗೆ ಒಂದು ಸಣ್ಣ ಪಾತ್ರವೂ ಇದೆಯಂತೆ. ಇದು ಸನ್ನಿಯ ಐಟಂನ ಎರಡನೆ ಚಿತ್ರ. ಈ ವರ್ಷಾರಂಭದಲ್ಲಿ ಡಿಕೆ ಶೇಷಮ್ಮ ಹಾಡಿನ ಚಿತ್ರದ ಬಳಿಕ ಎರಡನೆಯದಾಗಿ ಕನ್ನಡದಲ್ಲಿ ನಟಿಸುತ್ತಿದ್ದಾಳೆ ಸನ್ನಿ. ಬೆಂಗಳೂರು ತುಂಬಾ ಸ್ವಚ್ಛವಾಗಿದೆ.ಹವೆ ತಂಪಾಗಿದೆ. ವಾತಾವರಣ ಆಹ್ಲಾದಕರವಾಗಿದೆ. ಅಷ್ಟೇ ಅಲ್ಲ ದಕ್ಷಿಣದಲ್ಲಿ ಜನ ನನ್ನ ಬಗ್ಗೆ ಒಂದು ರೀತಿ ಅಭಿಮಾನವಿಟ್ಟಿದ್ದಾರೆ. ಬೇರೆ ಕಡೆ ಮಾಡಿದಂತೆ ನನಗೆ ಕಿರಿಕಿರಿ ಉಂಟುಮಾಡುವುದಿಲ್ಲ. ಇದು ನನಗೆ ಹೆಚ್ಚು ಇಷ್ಟವಾಗುವ ಅಂಶ. ಇಲ್ಲಿನ ಜನ ನನ್ನ ಮನಸಿಗೆ ಮುಜುಗರ ಉಂಟು ಮಾಡುವು ದಿಲ್ಲ ಎನ್ನುತ್ತಾಳೆ ಸನ್ನಿ

Write A Comment